

ಕೋಟ: ಸಂತ ಜೊಸೆಫರ್ ಇಗರ್ಜಿ ಕೋಟದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮೋತ್ಸವಾಗಿ ಆಚರಿಸಲಾಯಿತು. ಗಾಯನ ಮಂಡಳಿಯವರು ಕ್ಯಾರಲ್ಸ್ ಗಾಯಗಳನ್ನು ಹಾಡುವುದರೊಂದಿಗೆ ಸಂಭ್ರಮ ಆರಂಭಗೊಂಡಿತು. ಚಿಕ್ಕ ಮಕ್ಕಳ ಕ್ಯಾರಲ್ಸ್ ಗಾಯನ ಎಲ್ಲರನ್ನು ರಂಜಿಸಿತು.
ಅ ಪವಿತ್ರ ಬಲಿಪೂಜೆ ನಡೆಯಿತು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಮಂಗಳೂರಿನ ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತದಾರರಾದ ವಂದನೀಯ ಫಾದರ್ ಮಾಯ್ಕಲ್ ಸಾಂತ್ಮಾಯೊರ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ತಾವ್ರೊ ಅವರು ಸಹಕರಿಸಿದರು.
ಬಲಿಪೂಜೆಯ ನಂತರ ಕಾರ್ಯಕ್ರಮದಲ್ಲಿ ಸಂತಾಕ್ಲಾಸ್ ಹಾಗು ವಿವಿಧ ಸ್ಪರ್ಧೆಗಳು ಜನರನ್ನು ರಂಜಿಸಿದವು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೇಕ್, ಕುಸ್ವಾರ್ಗಳನ್ನು ಜನರು ಸೇವಿಸಿ ಪರಸ್ಪರ ಕ್ರಿಸ್ಮಸ್ ಶುಭಾಶಯಗಳನ್ನು ನೀಡಿದರು. ಆಕರ್ಶಿತ ಭ್ರಹತ್ ಗೋದಳಿ ಪ್ರಮುಖ ಆಕರ್ಶಣೆಯಾಗಿತ್ತು.




































