Christmas celebration at Our Lady of Miracles Church, Milagres, Mangalore


ಮಂಗಳೂರು; ಕ್ರಿಸ್ಮಸ್ ಹಬ್ಬದ ಸಂತೋಷವನ್ನು ಮಂಗಳೂರು ಮಿಲಾಗ್ರಿಸ್ನ ನಮ್ಮ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನಲ್ಲಿ ಹಂಚಿಕೊಳ್ಳಲಾಯಿತು.ವಂದನೀಯ ಧರ್ಮ ಗುರು ಆಲ್ವಿನ್ ಸೆರಾವೋ ಅವರು ಮಿಲಾಗ್ರಿಸ್ ಚರ್ಚ್ನ ಇತರ ಧರ್ಮ ಗುರು ಗ ಳೊಂದಿಗೆ ಸೇರಿ ಪವಿತ್ರ ಬಲಿಪೂಜೆ ಯನ್ನು ನೆರವೇರಿಸಿದರು. ಚರ್ಚ್ ನ ಪ್ರದಾನ ಧರ್ಮಗುರುಗಳಾದ ವಂ। ಬೊನವೆಂಚರ್ ನಜರೇತ್ ಅವರು ಈ ಸಂದರ್ಭದಲ್ಲಿ ಪ್ರಬೋಧನೆ ನೀಡಿ, ಯೇಸು ಜನಿಸಿದಾಗ ಇಡಲಾದ ತೊಟ್ಟಿಲು (ಮ್ಯಾಂಗರ್) ಮತ್ತು ಆತನಿಗೆ ನೀಡಲಾದ ಹೆಸರಿನ ಮಹತ್ವವನ್ನು ವಿವರಿಸಿದರು. ಅದನ್ನು ಕ್ರೈಸ್ತ ಜೀವನಕ್ಕೆ ಅನ್ವಯಿಸಿ, ನಾವು ಹೇಗೆ ಯೇಸುವಿನ ಸನ್ನಿಧಿಯಲ್ಲಿ ಇರಬಹುದು ಎಂಬುದನ್ನು ವಿವರಿಸಿದರು.
ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಸಂತಾ ಕ್ಲೋಸ್ ಮಕ್ಕಳು ಯುವಕರ ಜೊತೆ ನೃತ್ಯ ಮಾಡಿ ಮನರಂಜನೆ ನೀಡಲಾಯಿತು ಸಾವಿರಾರು ಭಕ್ತಾದಿಗಳು ಕ್ರಿಸ್ಮಸ್ ಬಲಿ ಪೂಜೆ ಮತ್ತು ಸಂಭ್ರಮ ದಲ್ಲಿ ಪಾಲ್ಗೊಂಡರು.
Christmas celebration at Our Lady of Miracles Church, Milagres, Mangalore

The joy of Christmas celebration was being shared at our Lady of Miracles church Milagres mangalore.Fr Alwyn Serrao celebrated mass together with the other Priests of Milagres Church.Fr Bonaventure Nazareth,the Parish Priest preached on the occasion highlighting the Manger and the name given to Jesus at birth.He made an application of it to christian life as to how we could be around Jesus.
The vice president and the secretary cut the cake and shared the joy.Santha motivated the children and the youth to dance.



































































