

ಕುಂದಾಪುರ, ಡಿ. 26; ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಡಿ.24 ರಂದು ಶಾಲಾ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಯಾದ ವಂ. ಸಿಸ್ಟರ್ ಸುಪ್ರಿಯ ವಹಿಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳು ‘ವಿದ್ಯಾರ್ಥಿಗಳು ಒದಿನಲ್ಲಿ ಆಸಕ್ತಿ ತೋರಿಸಿ ಚೆನ್ನಾಗಿ ಕಲಿತು ಶಾಲೆಗೆ ಉತ್ತಮ ಹೆಸರು ತರಬೇಕು’ ಎಂದು ಸಂದೇಶ ನೀಡಿದರು.
ಅತಿಥಿಯಾಗಿ ಆಗಮಿಸಿದ ನಿವ್ರತ್ತ ಶಿಕ್ಷಕರಾದ ಲುವಿಸ್ ಜೆ.ಫೆರ್ನಾಂಡಿಸ್ ಮಾತನಾಡಿ ‘ವಿದ್ಯಾರ್ಥಿಗಳು ಆಟ ಪಾಠ ಎರಡಲ್ಲೂ ಆಸಕ್ತಿ ತೋರಿಸಬೇಕು, ನಾಣ್ಯಕ್ಕೆ ಎರಡು ಮುಖಗಳಿರುತ್ತವೆ, ಹಾಗೇಯೆ ಶಿಕ್ಷಣಕ್ಕೆ ಎರಡು ಮುಖಳುಂಟು, ಒಂದು ಪಾಠ ಇನ್ನೊಂದು ಆಟ. ಹಾಗಾಗಿ ಎರಡರಲ್ಲೂ ಗಮನವಿಟ್ಟು ಮುಂದುವರೆಯಬೇಕು. ಇನ್ನೋರ್ವ ಅತಿಥಿ ಶಿಕ್ಷಕ ಗ್ಲೆನ್ ಲೋಬೊ ಮಾತನಾಡಿ ‘ವಿದ್ಯಾರ್ಥಿಗಳಿಗೆ ಈಗ ಕಲಿಯುವ ಸಮಯ, ಶಿಸ್ತು ಬದ್ದವಾಗಿ ಒದಬೇಕು, ಅಂದಿನ ಪಾಠಗಳನ್ನು ಅಂದೇ ಅಭ್ಯಾಸ ಮಾಡಿ ಮುಗಿಸಬೇಕು, ನಾಳೆಗೆ ಅವಕಾಶ ಕೊಡಬಾರದು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಇತ್ತಿಚೇಗೆ ಆಶಾವಾದಿ ಪ್ರಕಾಶನ ಬೆಳ್ಳಿಹಬ್ಬದ ಪುರಸ್ಕಾರಕ್ಕೆ ಭಾಜನರಾದ ಸಾಹಿತಿ ಡಿಜಿಟಲ್ ಪತ್ರಿಕೋದ್ಯಮಿ ಬರ್ನಾಡ್ ಡಿಕೋಸ್ತಾ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಅದಕ್ಕೆ ಉತ್ತರವಾಗಿ ಧನ್ಯವಾದಗಳನ್ನು ತಿಳಿಸಿ, ಕನ್ನಡ ಶಾಲೆಯಂದು ಕೀಳರಿಮೆ ಬೇಡ ಎಂದು ವಿದ್ಯಾರ್ಥಿಗಳಿಗೆತಿಳಿಸಿ, ಈ ಶಾಲೆ ಬಹಳ ವರ್ಷಗಳಿಂದ ಉತ್ತಮ ವಿಧ್ಯಾಭಾಸ ನೀಡುತ್ತಲೇ ಬಂದಿದೆ, ವಿದ್ಯಾಥಿಗಳು ಛಲವಿಟ್ಟು, ಒಂದು ಗುರಿಯಿಟ್ಟು ಕಲಿಯಬೇಕು’ ಎಂದು ತಿಳಿಸಿದರು. ಸಂತ ಜೋಸೆಫರ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರೇಮಿಕಾ ಮಾತನಾಡಿದರು.ಅತಿಥಿ ಗಣ್ಯರು ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಿದರು, ವಿದ್ಯಾರ್ಥಿಗಳು ನ್ರತ್ಯ, ಗಾಯನ, ಕಿರು ಪ್ರಹಸನ, ಟ್ಯಾಬ್ಲೊ ಮುಂತಾದ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಸಂತ ಜೋಸೆಫ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ನಿರ್ಮಲ ಪಿಂಟೋ ಇವರು ಸ್ವಾಗತಿಸಿದರು ಶಿಕ್ಷಕ ಅಶೋಕ್ ದೇವಾಡಿಗ ವರದಿ ವಾಚಿಸಿದರು ಶಿಕ್ಷಕ ಮೈಕಲ್ ಪುಟಾರ್ಡೊ ನಿರೂಪಿಸಿದರು ಶಿಕ್ಷಕಿ ಶ್ರೀಲತಾ ವಂದಿಸಿದರು.










































































