ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವವು ರಾಮ ನವಮಿ ದಿನವಾದ ಮಾರ್ಚ್ 27 ರಂದು ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 24 ರಂದು ಕೊಂಕಣಿ ನಾಟಕ, 25 ರಂದು ಯಕ್ಷಗಾನ ಬಯಲಾಟ ಹಾಗೂ 26 ರಂದು ಉಪ್ಪಿನಕುದ್ರು ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ
ಉಡುಪಿ: ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ಕೂಡ ಒಂದೇ ವಿಶ್ವಾಸದ ಘೋಷಣೆ ಮಾಡುವಾಗ ಐಕ್ಯತೆಯನ್ನು ಪ್ರಚುರಪಡಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತದಾರರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಗುರುವಾರ ಸಂಜೆ ಉಡುಪಿ ಯುಬಿಎಂ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ ಯುನಾಯ್ಟೆಡ್ ಬಾಸೆಲ್ ಮಿಷನ್ ಚರ್ಚ್, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಇವರುಗಳ ಜಂಟಿ […]
ಉಡುಪಿ: ಘನ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ಕಾರ್ಯಕ್ರಮ ನಡೆಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಇದರ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ. ಮೂರು ದಿನಗಳ ಸಮಾಧಾನ ಮಹೋತ್ಸವ ಕಾರ್ಯಕ್ರಮವನ್ನು ಫೆಲೋಶಿಪ್ ಓಫ್ ಉಡುಪಿ ಚರ್ಚಸ್ ಇದರ ವತಿಯಿಂದ ಆಯೋಜಿಸಲು ನಿರ್ಧರಿಸಲಾಗಿದ್ದು, ಸುಮಾರು ಐದಾರು ತಿಂಗಳುಗಳಿಂದ ಇದಕ್ಕಾಗಿ ಸಂಪೂರ್ಣ ತಯಾರಿಯನ್ನು ಕೂಡ ನಡೆಸಲಾಗಿದೆ. ಇದರಲ್ಲಿ ಮುಖ್ಯ ಪ್ರವಚನಕಾರರಾಗಿ ಘನ ಮೋಹನ್ ಸಿ.ಲಾಝರಸ್ […]
ಕೋಟ ಸಂತ ಜೋಸೆಫರ ಇಗರ್ಜಿಯಲಿ ಸಂತ ಜೋಸೆಫರ ಹಬ್ಬ ಆಚರಣೆ. ಅಥಿತಿ ಧರ್ಮ ಗುರುಗಳಾದ ವಂದನೀಯ ಫಾದರ್ ಡ್ಯಾನ್ಸಿ ಮಾರ್ಟಿಸ್ ಪವಿತ್ರ ಬಲಿಪೂಜೆ ನೆರವೇರಿಸಿದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ತಾವ್ರೂ ಅವರು ಸಹಬಲಿದಾನವನ್ನು ಅರ್ಪಿಸಿದರು. ಪ್ರಸ್ತುತ ನಡೆಯುತ್ತಿರುವ ಯುದ್ಧ ಶೀಘ್ರ ಕೊನೆಯಾಗಲು ವಿಶೇಷವಾಗಿ ಪ್ರಾರ್ಥಿಸಲಾಯಿತು.
ಕುಂದಾಪುರ, ಮಾ. 19: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ನಲ್ಲಿ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬವನ್ನು ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ|ವಂ| ಪೌಲ್ ರೇಗೊ ಇವರ ನೇತ್ರತ್ವದಲ್ಲಿ ಹಾಗೂ ಬ್ರಹ್ಮಾವರ ಹೋಲಿ ಫೆಮಿಲಿ ಚರ್ಚಿನ ಧರ್ಮಗುರು ವಂ। ಜೋಕಿಮ್ ಡಿಸೋಜಾ ಇವರುಗಳು ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಹಬ್ಬವನ್ನು ಆಚರಿಸಿದರು. “ಸಂತ ಜೋಸೆಪರು ದೇವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿದ ವಿಧೇಯ ಮಹಾಪುರುಷನಾಗಿದ್ದಾನೆ, ಅತಂಕದ ವೇಳೆ […]
ಉಡುಪಿ, ಮಾರ್ಚ್ 18: ಬುಧವಾರ, ಮಾರ್ಚ್ 18 ರಂದು ಸಂತೆಕಟ್ಟೆಯಲ್ಲಿ ಕಾರು ಮತ್ತು ಎಕ್ಸ್ಪ್ರೆಸ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡರು. ಅಂಡರ್ಪಾಸ್ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಸಂಚಾರದಲ್ಲಿ ಬದಲಾವಣೆ ಕಂಡುಬಂದಿತ್ತು. ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ ವಾಹನಗಳನ್ನು ಸರ್ವಿಸ್ ರಸ್ತೆಗೆ ತಿರುಗಿಸಲಾಯಿತು, ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ವಾಹನಗಳನ್ನು ಕಾಂಕ್ರೀಟ್ ಮಾಡಿದ ಮುಖ್ಯ ಹೆದ್ದಾರಿಯಲ್ಲಿ ಬಿಡಲಾಯಿತು. ಕುಂದಾಪುರ ದಿಕ್ಕಿನಿಂದ ಹೆದ್ದಾರಿಯ ತಪ್ಪು ಬದಿಯಲ್ಲಿ ಚಲಿಸುತ್ತಿದ್ದ ಮಾರುತಿ ಬಲೆನೊ ಕಾರು, ತಪ್ಪು […]
ಮೂಡ್ಲಕಟ್ಟೆ ;ಇಲ್ಲಿನ ತಾಂತ್ರಿಕ ಕಾಲೇಜು ಮತ್ತು ಲಯನ್ಸ್ ಕ್ಲಬ್ ಹಂಗಳೂರು ಇವರ ಸಹಭಾಗಿತ್ವದಲ್ಲಿ ದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ, ಇವರ ಸಹಕಾರ ದೊಂದಿಗೆ ಸ್ವಯಂ ಪ್ರೇರಿತ ” ಬೃಹತ್ ರಕ್ತದಾನ ಶಿಬಿರ ” ಜರುಗಿತು.ರಕ್ತದಾನವು ಮಾನವೀಯತೆಯ ಅತ್ತ್ಯುತ್ತಮ ಸೇವೆಯಾಗಿದೆ. ಅನೇಕರ ಜೀವನಗಳಿಗೆ ಆಶಯಗಳನ್ನು ಒದಗಿಸುವಂತದ್ದು. ಜ್ಯೋತಿ ಬೆಳಗಿಸಿ, ಪ್ರಾರ್ಥನಾ ಗೀತೆ ಹಾಡುವ ಮುಖಾಂತರ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿ ಯಾಗಿ ಆಗಮಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಜಯಶಂಕರ್ […]
ಕೋಟ: ಗಾಣಿಗ ಸಮುದಾಯದ ಗುರು ಮಠವಾದ ಕುಂದಾಪುರ ವ್ಯಾಸರಾಜ ಮಠಕ್ಕೆ ಮಂಗಳವಾರ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿ.ಆರ್ ಸುದರ್ಶನ್ ಮಾತನಾಡಿ ಗಾಣಿಗ ಸಮುದಾಯ ಸಂಘಟನೆಯ ಮೂಲಕ ಬಲಗೊಳ್ಳಬೇಕಿದೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಾಣಿಗ ಸಮುದಾಯ ಗುರುತಿಸಿಕೊಳ್ಳುವುದರ ಮೂಲಕ ರಾಜಕೀಯವಾಗಿ ಬೆಳೆದು ತನ್ನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯ ಸರಕಾರ ಗಾಣಿಗ […]
ಕುಂದಾಪುರ: ಕ್ರೀಡೆಯಿಂದ ದೈಹಿಕ ಮಾನಸಿಕ ಸ್ಥೈರ್ಯ ಬೆಳೆಯುತ್ತದೆ ಎಂದು ಉದ್ಯಮಿ ಚಂದ್ರೇಶ್ ಶೆಟ್ಟಿ ಹೇಳಿದರು.ಅವರು ಮಾರ್ಚ್ 17ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಕಬಡ್ಡಿ ಪಂದ್ಯಾಟ (ಉಡುಪಿ ವಲಯ)ವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆ ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ಬೆಳೆಸುತ್ತದೆ. ಶಾರೀರಿಕ ಸದೃಢತೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ನಿರ್ದೇಶಕರಾದ ಜೆರಾಲ್ಡ್ ಸಂತೋಷ್ ಡಿಸೋಜಾ ಅವರು ಮಾತನಾಡಿ […]

