

ಕೋಟ ಸಂತ ಜೊಸೆಫರ ಇಗರ್ಜಿಯಲ್ಲಿ ಅಜ್ಜ-ಅಜ್ಜಿಯರ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಜುಲೈ 26 ರಂದು ಆಚರಿಸಲಾಯಿತು. ವಿಶ್ವದಾದ್ಯಂತ ವರ್ಷಂಪ್ರತಿ ಜುಲೈ ತಿಂಗಳ ನಾಲ್ಕನೇ ಭಾನುವಾರದಂದು, ಪ್ರಭು ಯೇಸು ಕ್ರಿಸ್ತರ ಅಜ್ಜ-ಅಜ್ಜಿಯರಾದ ಸಂತ ಜೋಕಿಮ್ ಮತ್ತು ಸಂತ ಆನ್ನಾ ಅವರ ಹಬ್ಬದ ದಿನವನ್ನು ಆಚರಿಸುತ್ತಾರೆ. ಇದೇ ಸಂದರ್ಭದಲ್ಲಿ ಅಜ್ಜ-ಅಜ್ಜಿ ಹಾಗು ಹಿರಿಯ ನಾಗರಿಕರನ್ನು ಸನ್ಮಾನಿಸಲಾಗುತ್ತತೆ.
ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು. ಅಜ್ಜ-ಅಜ್ಜಿಂದಿರು ಹಾಗೂ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು.
ನಂತರ ನಡೆದ ಸಮಾರಂಭದಲ್ಲಿ ಮೊಮ್ಮಕ್ಕಳು ಅಜ್ಜ-ಅಜ್ಜಿಯಂದಿರಿಗೆ ಹೂಗುಚ್ಚಗಳನ್ನು ಅರ್ಪಿಸಿ ಸನ್ಮಾನಿಸಿದರು. ಸರ್ವರಿಗೂ ಲಘು ಉಪಾಹಾರದ ವ್ಯವಸ್ತೆಯನ್ನು ಮಾಡಲಾಗಿತ್ತು.











































