

ಕುಂದಾಪುರ ; ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ಆಶ್ರಯದಲ್ಲಿ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ (23-07-2026) ರಂದು ಇಂಟರಾಕ್ಟ್ ಪದ ಪ್ರಧಾನ ಕಾರ್ಯಕ್ರಮ ನೆರವೇರಿತು. ನರಸಿಂಹ ಹೊಳ್ಳ ಇವರು ಪ್ರಸ್ತಾವಿಕ ನುಡಿಗಳನಾಡುತ್ತ ಇಂಟರ್ ಆಕ್ಟ್ ಮುಖಾಂತರ ಮಕ್ಕಳಲ್ಲಿ ನಾಯಕತ್ವ , ಉತ್ತಮ ವ್ಯಕ್ತಿತ್ವ, ಸಂಸ್ಕಾರ, ಸಮಾಜ ಸೇವೆ, ಉತ್ತಮ ಬಾಂಧವ್ಯ, ಸಹಕಾರ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ರೋಟರಿ ಅಧ್ಯಕ್ಷರಾದ ಸದಾನಂದ ಬಳ್ಕೂರು ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪದಪ್ರಧಾನ ನೆರವೇರಿಸಿ ಮಾತನಾಡುತ್ತಾ 12 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ರೋಟರಿ ಇಂಟರ ನ್ಯಾಷನಲ್ ಪ್ರಾಯೋಜಿಸಿದ ಯುವ ಸೇವಾ ಸಂಸ್ಥೆಯಾಗಿದೆ. ಮಕ್ಕಳಲ್ಲಿ ಶಾಲಾ ಹಂತದಲ್ಲಿ ನಾಯಕತ್ವದ ಗುಣವನ್ನು ಬೆಳೆಸಲು ಸಮಾಜಮುಖಿ ಕೆಲಸಗಳನ್ನು ಮಾಡಲು ರೋಟರಿ ಸಂಸ್ಥೆಯ ಇಂಟರಾಕ್ಟ ಕ್ಲಬ್ ನೆರವಾಗುತ್ತದೆ. ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿದರು.
ಇಂಟರಾಕ್ಟ್ ನೂತನ ಅಧ್ಯಕ್ಷರಾಗಿ ಕು. ರೇಣುಕಾ, ಕಾರ್ಯದರ್ಶಿಯಾಗಿ ಶೋಧನ್ ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷರಾದ ಶಾಲಾ ಮುಖೋಪಾಧ್ಯಾಯನಿ ಸಿಸ್ಟರ್ ಐವಿ ಸ್ವಾಗತಿಸಿದರು. ಇಂಟರಾಕ್ಟ ಚೇರ್ಮನ್ ಆಗಿರುವ ವಿನ್ಸಿ ಬರೆಟ್ಟೋ ಶುಭ ಹಾರೈಸಿದರು. ರಾಜು ಪೂಜಾರಿ, ಉಲ್ಲಾಸ್ ಕ್ರಾಸ್ಟ, ಕೆ .ಎಸ್. ಮಂಜುನಾಥ ,ನಿತೀಶ್ ರಾವ್ ಉಪಸ್ಥಿತರಿದ್ದರು. ಶಿಕ್ಷಕಿ ಸರಸ್ವತಿ ಇವರು ವಂದಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
















