ಕುಂದಾಪುರ, ಜುಲೈ 27: ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಕಾಲ ಆದರ್ಶ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋಸಹಜ ನಿವೃತ್ತಿ ಹೊಂದಿದ, ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಲಯನ್ ಎಚ್. ಪ್ರಭಾಕರ್ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ 2026–27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಪಡುವಾಲ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 30 ವರ್ಷಗಳ ಕಾಲ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ […]
ಶಿರೂರು: ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲೆಯ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಬಿಂಬಿಸುವ ಮಾಸ್ಕಾಟ್ ಚಿತ್ರಕಲಾ ಸ್ಪರ್ಧೆಯನ್ನು ಜುಲೈ 27ರಂದು ಆಯೋಜಿಸಲಾಯಿತು.ವಿದ್ಯಾರ್ಥಿಗಳಲ್ಲಿ ಉಡುಪಿ ಜಿಲ್ಲೆಯ ಸಂಸ್ಕೃತಿ, ಪರಂಪರೆ ಹಾಗೂ ವೈವಿಧ್ಯತೆಯ ಪರಿಚಯ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯ ಆಶಯ ಮತ್ತು ಉದ್ದೇಶವನ್ನು ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.ಸ್ಪರ್ಧೆಯಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಚಿತ್ರಕಲಾ ಪ್ರತಿಭೆಯನ್ನು […]
ಬೆಂಗಳೂರು, ಜುಲೈ 27: ಭವಿಷ್ಯವು ಕುತೂಹಲ ಮತ್ತು ಹೊಂದಿಕೊಳ್ಳುವಿಕೆ ಉಳ್ಳವರದ್ದಾಗಿದೆ ಎಂದು ಒತ್ತಿಹೇಳಿದ ಬೆಂಗಳೂರಿನ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಉಪಕುಲಪತಿ ವಂದನೀಯ ಫಾದರ್ ಡಾ. ವಿಕ್ಟರ್ ಲೋಬೋ, ಸೋಮವಾರ ನಡೆದ ವಿಶ್ವವಿದ್ಯಾಲಯದ ವಾರ್ಷಿಕ ‘ಓಪನ್ ಡೇ’ (Open Day) ಕಾರ್ಯಕ್ರಮವಾದ ‘ಎಲಿಕ್ಸಿರ್ 2026’ ರಲ್ಲಿ (Elixir 2026) ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಮುಕ್ತ ಮನಸ್ಸನ್ನು ಬೆಳೆಸಿಕೊಳ್ಳುವಂತೆ ಒತ್ತಾಯಿಸಿದರು. ಭವಿಷ್ಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಸಂದರ್ಶಕರನ್ನು ಉದ್ದೇಶಿಸಿ ಮಾತನಾಡಿದ ಫಾದರ್ ಲೋಬೋ, ಕೃತಕ ಬುದ್ಧಿಮತ್ತೆ (AI) ಮತ್ತು […]
ಮಂಗಳೂರು; ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ರಾಷ್ಟ್ರೀಯ ಪೋಷಕರ ದಿನಾಚರಣೆಯ ಅಂಗವಾಗಿ ಕಬ್ಸ್ ಮತ್ತು ಬುಲ್ಬುಲ್ಸ್ ಮಕ್ಕಳಿಗಾಗಿ (Family Tree) ವಂಶವೃಕ್ಷ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಲೋಶಿಯಸ್ ಡಿ’ಸೋಜಾ ಅವರು ವಹಿಸಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕುಟುಂಬದ ಮೌಲ್ಯಗಳು ಹಾಗೂ ಕುಟುಂಬದ ಸದಸ್ಯರ ಬಗ್ಗೆ ತಿಳಿದುಕೊಳ್ಳುವ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಬ್ಸ್ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಹಾಗೂ ಬುಲ್ಬುಲ್ಸ್ ಶಿಕ್ಷಕಿ ಶ್ರೀಮತಿ ತ್ರಿವೇಣಿ ಉಪಸ್ಥಿತರಿದ್ದು, ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಮಕ್ಕಳು […]
ಬಂಟ್ವಾಳ- ಫರಂಗಿಪೇಟೆ ; ಇತ್ತೀಚಿನ ದಿನಗಳಲ್ಲಿ ಹಲಸು ಮೇಳಗಳು ನಡೆಯುತ್ತವೆ. ಅಲ್ಲಿ ಖಾದಿ ವಸ್ತ್ರ ಮಾರಾಟ, ಬಾಣಂತಿಯ ಮದ್ದುಗಳು, ಸಾಂಪ್ರದಾಯಿಕ ಸಾಂತ್‌ಮಾರಿಗಳ ತಾಂಬ್ಡೆಗುಳೆ, ವಿವಿಧ ತಳಿಯ ಸಸ್ಯಗಳು ಹಲಸು ಜೊತೆಗೆ ಮಾರಾಟ ಆಗುವುದು ಒಳ್ಳೆಯ ಬೆಳವಣಿಗೆ.ಈ ಉಪಕ್ರಮದ ಕಾರಣ ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಮಾರಾಟದ ಜಾಗಗಳು ಒದಗಿಸಲು ಅವಕಾಶ ಆಗುತ್ತದೆ ಎಂದು ಮೇಳದ ಉದ್ಘಾಟನೆ ಮಾಡಿದ ರೇಮಂಡ್ ಡಿಕೂನಾ ತಾಕೊಡೆ ಹೇಳಿದರು.ಅವರು ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಸ್ಕೈಲೈನ್ ಸಂಸ್ಥೆಯ ಆಲನ್ ಮತ್ತು ಸ್ಟೇನಿ ಅವರು ಆಯೋಜಿಸಿದ ಪ್ರಥಮ […]
ಕುಂದಾಪುರ, ಜು. 28: ಸೇವೆ, ಸ್ನೇಹ ಹಾಗೂ ನಾಯಕತ್ವದ ಮೌಲ್ಯಗಳನ್ನು ಸಮಾಜದ ಒಳಿತಿಗಾಗಿ ಸಮರ್ಪಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ನಗರದ ಲಯನ್ಸ್ ಸೇವಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಪಿಎಂಜೆಎಫ್ ಲಯನ್ ಇಂಜಿನಿಯರ್ ರಮಾನಂದ್ ಕೆ., ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲರು ಅವರು ಪದಪ್ರದಾನ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಲಯನ್ ಸುದರ್ಶನ್ ಶೆಟ್ಟಿ ಬಿ.ಆರ್. ಅಧ್ಯಕ್ಷರಾಗಿ, ಲಯನ್ ಗುರುಪ್ರಸಾದ್ […]
ಕೋಟ: ಮರೆಯಾದ ಗ್ರಾಮೀಣ ಕ್ರೀಡೆಗಳ ಮಹತ್ವವನ್ನು ಯುವಜನತೆಗೆ ಪರಿಚಯಿಸುವುದರ ಜೊತೆಗೆ ಎಲ್ಲ ವಯೋಮಾನದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕಾರ್ಯಕ್ರಮ ಸಂಘಟಿಸಿರುವುದು ಶ್ಮಾಘನೀಯ ಕಾರ್ಯವಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಹೇಳಿದರು.ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯ ಆಶ್ರಯದಲ್ಲಿ ಹೊದ್ರಾಳಿ ಬಂಡಿಕಡು ಬೊಬ್ಬರ್ಯ ದೈವಸ್ಥಾನದ ಎದುರಿನ ಗದ್ದೆಯಲ್ಲಿ ನಡೆದ ಕೆಸ್ರ್ ಗೆದ್ದಿಗ್ ಗಮ್ಮತ್, ಗ್ರಾಮೀಣ ಕ್ರೀಡೆಗಳ ಸಂಭ್ರಮ ಕಾರ್ಯಕ್ರಮವನ್ನು ಕೆಸರು ಗದ್ದೆಗೆ ಹಾಲುನ್ನು ಎರೆಯುವುದರ ಮೂಲಕ […]
Grandparents’ & Senior Citizens’ Day Celebrated with Love and Gratitude at Mount Rosary Church Santhekatte, Kallianpur. Reported by: Archibald Furtado. Photographs arranged by Praveen Cutinho. ಕಲ್ಯಾಣಪುರ; ಮೇರಿ ಮಾತೆಯ ಪ್ರೀತಿಯ ಅಜ್ಜ-ಅಜ್ಜಿಯರಾದ ಸಂತ ಜೋಕಿಮ್ ಮತ್ತು ಅನ್ನಿ ಅವರ ಹಬ್ಬವನ್ನು ಅಜ್ಜ-ಅಜ್ಜಿಯರ ದಿನ ಮತ್ತು ಹಿರಿಯ ನಾಗರಿಕರ ದಿನವಾಗಿ ಕಲ್ಯಾಣಪುರದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್‌ನಲ್ಲಿ ಜುಲೈ 26, 2026 ರ ಭಾನುವಾರ ಆಚರಿಸಲಾಯಿತು. ಈ ಅರ್ಥಪೂರ್ಣ […]
ಕೋಟ ಸಂತ ಜೊಸೆಫರ ಇಗರ್ಜಿಯಲ್ಲಿ ಅಜ್ಜ-ಅಜ್ಜಿಯರ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಜುಲೈ 26 ರಂದು ಆಚರಿಸಲಾಯಿತು. ವಿಶ್ವದಾದ್ಯಂತ ವರ್ಷಂಪ್ರತಿ ಜುಲೈ ತಿಂಗಳ ನಾಲ್ಕನೇ ಭಾನುವಾರದಂದು, ಪ್ರಭು ಯೇಸು ಕ್ರಿಸ್ತರ ಅಜ್ಜ-ಅಜ್ಜಿಯರಾದ ಸಂತ ಜೋಕಿಮ್ ಮತ್ತು ಸಂತ ಆನ್ನಾ ಅವರ ಹಬ್ಬದ ದಿನವನ್ನು ಆಚರಿಸುತ್ತಾರೆ. ಇದೇ ಸಂದರ್ಭದಲ್ಲಿ ಅಜ್ಜ-ಅಜ್ಜಿ ಹಾಗು ಹಿರಿಯ ನಾಗರಿಕರನ್ನು ಸನ್ಮಾನಿಸಲಾಗುತ್ತತೆ. ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು. ಅಜ್ಜ-ಅಜ್ಜಿಂದಿರು ಹಾಗೂ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ನಂತರ […]

