

ಕೋಟ: ಮರೆಯಾದ ಗ್ರಾಮೀಣ ಕ್ರೀಡೆಗಳ ಮಹತ್ವವನ್ನು ಯುವಜನತೆಗೆ ಪರಿಚಯಿಸುವುದರ ಜೊತೆಗೆ ಎಲ್ಲ ವಯೋಮಾನದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕಾರ್ಯಕ್ರಮ ಸಂಘಟಿಸಿರುವುದು ಶ್ಮಾಘನೀಯ ಕಾರ್ಯವಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಹೇಳಿದರು.
ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯ ಆಶ್ರಯದಲ್ಲಿ ಹೊದ್ರಾಳಿ ಬಂಡಿಕಡು ಬೊಬ್ಬರ್ಯ ದೈವಸ್ಥಾನದ ಎದುರಿನ ಗದ್ದೆಯಲ್ಲಿ ನಡೆದ ಕೆಸ್ರ್ ಗೆದ್ದಿಗ್ ಗಮ್ಮತ್, ಗ್ರಾಮೀಣ ಕ್ರೀಡೆಗಳ ಸಂಭ್ರಮ ಕಾರ್ಯಕ್ರಮವನ್ನು ಕೆಸರು ಗದ್ದೆಗೆ ಹಾಲುನ್ನು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೋಟೇಶ್ವರ ಗಾಣಿಗ ಮಹಿಳಾ ಸಂಘಟನೆಯ ಅಧ್ಯಕ್ಷೆ ಸವಿತಾ ಗಾಣಿಗ,ಗೌರವಾಧ್ಯಕ್ಷೆ ಕಲಾವತಿ,ಕಾರ್ಯದರ್ಶಿ ವೀಣಾ ರಾವ್,ಕೋಶಾಧಿಕಾರಿ ನೇತ್ರಾವತಿ,ಅನುಸೂಯ ಮೊದಲಾದವರು ಗದ್ದೆಗೆ ಹರಸಿನ-ಕುಂಕುಮ ಹಾಕುವುದರ ಮೂಲಕ ವಿವಿಧ ಸ್ಪರ್ಧೆಗೆ ಚಾಲನೆ ನೀಡಿದರು. ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಬಿ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಕೋಶಾಧಿಕಾರಿ ಎಚ್.ಎಸ್.ಗಾಣಿಗ,ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಸುಜಾತ, ಕೋಶಾಧಿಕಾರಿ ರಾಧಿಕಾ,ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ಗಾಣಿಗ,ಪ್ರಧಾನ ಕಾರ್ಯದರ್ಶಿ ಮಹೇಶ್ ಗಾಣಿಗ, ಮಾಜಿ ಗೌರವಾಧ್ಯಕ್ಷ ಶಂಕರನಾರಾಯಣ ಗಾಣಿಗ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ರಾಮಚಂದ್ರ ಗಾಣಿಗ,ಕರುಣಾಕರ ಗಾಣಿಗ ಇವರನ್ನು ಗೌರವಿಸಲಾಯಿತು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

