ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ನಾವು ಉಸಿರಾಡಲು ಶುದ್ದಗಾಳಿ ಇಲ್ಲದೆ ರಾಸಾಯನಿಕ ವಿಷ ಮಿಶ್ರಿತ ಗಾಳಿಯನ್ನು ಉಸಿರಾಡುವಂತಾಗಿದೆ . ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.ಪಟ್ಟಣದ ಪುರಸಭೆವತಿಯಿಂದ ಗುರುವಾರ ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಉಳಿಸಲು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇವುಗಳನ್ನು ತಡೆಗಟ್ಟಲು ಪ್ರತಿ ಮನೆಗಳ ಸುತ್ತಮುತ್ತ ಮಗುವಿಗೊಂದು ಸಸಿಯಂತೆ ನೆಟ್ಟು, ಮರಗಳಾಗಿಸಿ, ವನವಾಗಿಸುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಶುದ್ದವಾದ ಗಾಳಿಯನ್ನು ನೀಡುವುದು ನಮ್ಮಲ್ಲೆರ ಆದ್ಯ ಕರ್ತವ್ಯವೆಂದರು .ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸುವುದು […]
ಶ್ರೀನಿವಾಸಪುರ : ನೆರೆಯ ರಾಜ್ಯಗಳಲ್ಲಿ ಮಾವು ಬೆಳೆಗೆ 12 ಸಾವಿರ ಬೆಂಬಲ ಬೆಲೆ ನೀಡಿದ್ದು, ಅದರಂತೆ ನಮಗೂ ಸರ್ಕಾರ ಬೆಂಬಲ ನೀಡಲಿ ಎಂದು ಒತ್ತಾಯಿಸಿದರು. ಎರಡು ಮೂರು ದಿನಗಳಲ್ಲಿ ಬೆಂಬಲ ಬೆಲೆ ಘೋಷಣೆ ಆಗದ ಪಕ್ಷದಲ್ಲಿ ಸೋಮವಾರ ದಿಂದ ಕೋಲಾರ ಜಿಲ್ಲೆಯಾದ್ಯಂತ ಅರ್ನಿಧಿಷ್ಟ ಕಾಲ ಬಂದ್ ಕರೆ ನೀಡುತ್ತೇವೆ ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮಾವು ಬೆಳೆಗೆ ಬೆಂಬಲ ಬೆಲೆಯನ್ನು ಆಗ್ರಹಿಸಿ ನಡೆದ ರೈತರ ಸಭೆಯಲ್ಲಿ […]
ಶ್ರೀನಿವಾಸಪುರ : ಹಬ್ಬಗಳನ್ನು ಖುಸಿಯಾಗಿರಲು ಆಚರಣೆ ಮಾಡಬೇಕು ವಿನಃ, ಸ್ವಾರ್ಥದಿಂದ ಸಮಾಜದ ಸ್ವಾಸ್ಥ್ಯ ಕಡೆಸುವಂತೆ ಇರಬಾರದು. ಅಂತವರಿಂದ ಎಚ್ಚರಿಕೆಯಿಂದ ಇರಬೇಕು. ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮುಖಾಂತರ ಮೊತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಬಿ.ಮಹ್ಮದ್ ಗೊರವನಕೊಳ್ಳ ಅಭಿಪ್ರಾಯಪಟ್ಟರು.ಪಟ್ಟಣ ಪೊಲೀಸ್‍ಠಾಣೆಯಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮತನಾಡಿದರು.ನೀವು ಮಾಡುವ ಕೆಲಸ ಕಾರ್ಯಗಳ ಬಗ್ಗೆ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಧಾರ್ಮಿಕ ಕೆಲಸ ಕಾರ್ಯಗಳಿಗೆ ದಕ್ಕೆ ಆಗದಂತೆ ನಡೆಯದಂತೆ ಎಚ್ಚರವಹಿಸಿ […]
ಶ್ರೀನಿವಾಸಪುರ : ಸಂತೆ ಎಂಬುದು ಕೊಂಡುಕೊಳ್ಳುವ ಸ್ಥಳವಾದರೂ ಅದು ಕೇವಲ ವ್ಯಾಪಾರ ವ್ಯವಹಾರಕ್ಕೆಷ್ಟೇ ಸೀಮಿತವಾಗಿರಲಿಲ್ಲ . ಸಂತೆ ಎಂಬ ವ್ಯಾವಹಾರಿಕ ಜಗತ್ತಿನ ನಡುವೆ ಉತ್ತಮವಾದ ಸಂಬಂದಗಳು ಮಾನವೀಯ ಮೌಲ್ಯಗಳು ಸಹ ಉಸಿರಾಡುತ್ತಿರುತ್ತವೆ ಎಂದು ಪ್ರಾಂಶುಪಾಲ ಕೆ.ಎನ್.ರಾಮಾಂಜನೇಯ ಅಭಿಪ್ರಾಯಪಟ್ಟರು.ಪಟ್ಟಣದ ಸಾಯಿವಿಜಯ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಂಗಳವಾರ ನಡೆದ ಮೆಗಾ ಸೇಲ್ಸ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಪಠ್ಯದೊಂದಿಗೆ ಯಾವ ರೀತಿಯಾದ ಸ್ವಾಲಂಬಿ ಜೀವನ ನಡೆಸಬಹುದು ಎಂಬುದಕ್ಕೆ ಸೇಲ್ಸ್‍ಡೇ ಪ್ರಾಯೋಗಿಕವಾಗಿ ಅನುಭವ ಸಿಗುತ್ತದೆ. ಕಾಲೇಜು […]
ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳ ಸ್ಥಾಪನೆಗಾಗಿ ಜಮೀನು ಗುರುತಿಸುವ ಸಂಬಂಧ ಕೆಐಡಿಬಿ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ತೆರಳಿ ಸಭೆ ನಡೆಸಿ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದರು. ಈಗಾಗಲೇ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳಿಗಾಗಿ 1273 ಎಕರೆ ಜಮೀನು ಗುರುತಿಸಿದ್ದು, ಇದಕ್ಕೆ ಕೆಲವು ರೈತರಿಂದ ವಿರೋಧವೂ ವ್ಯಕ್ತವಾಗಿದ್ದು, ಕೆಲವು ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾರೆ. ಈ ನಡುವೆ ಕೈಗಾರಿಕೆಗಳಿಗಾಗಿ ಗುರುತಿಸಿರುವ ಜಮೀನಿಗೆ ಸಂಬಂಧಿಸಿದಂತೆ 551 ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ […]
ಶ್ರೀನಿವಾಸಪುರ: ನಗರ ಸ್ಥಳೀಯ ಸಂಸ್ಥೆಗಳ ನೌಕರರ ಹಿತಾಸಕ್ತಿಗಾಗಿ ಜ್ಯೋತಿ, ಆರೋಗ್ಯ ಸಂಜೀವಿನಿ, ಕೆಜಿಐಡಿ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಪುರಸಭೆ ವ್ಯವಸ್ಥಾಪಕ ನವೀನ್‌ಚಂದ್ರ ಒತ್ತಾಯಿಸಿದರು.ಪಟ್ಟಣದ ಪುರಸಭೆ ಕಚೇರಿಯ ಮುಂಭಾಗದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ವತಿಯಿಂದ ಪುರಸಭೆ ನೌಕರರು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕೆಂಬ 주요 ಬೇಡಿಕೆಯನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಲಾಯಿತು. ಮುಷ್ಕರದ ಉದ್ಘಾಟನೆ ವೇಳೆ ನವೀನ್‌ಚಂದ್ರ ಮಾತನಾಡಿದರು.ಅವರು ಹೇಳಿದರು: “ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ […]
ಶ್ರೀನಿವಾಸಪುರ : ತಾಲೂಕಿನ ಕೂರಿಗೇಪಲ್ಲಿ ಗ್ರಾ.ಪಂಚಾಯತಲ್ಲಿ ಒಟ್ಟು 12 ಸದಸ್ಯರಿದ್ದು ಅದರಲ್ಲಿ ಕಾಂಗ್ರೆಸ್ ಬೆಂಬಲಿತ 11 ಸದಸ್ಯರಿದ್ದು, ಒಬ್ಬರು ಜೆಡಿಎಸ್ ಬೆಂಬಲಿತ ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ಹಾಜರಾಗಿ, 2 ಸದಸ್ಯ ಗೈರು ಹಾಜರಾಗಿದ್ದು. ಈ ಹಿಂದೆ ಇದ್ದ ಯಲ್ಲಮ್ಮ ಜಯರಾಮ್ ಅವಿಶ್ವನಿರ್ಣಯದಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಡಗಾನಪಲ್ಲಿ ವೆಂಕಟಲಕ್ಷ್ಮಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ನಾರಾಯಣಸ್ವಾಮಿ ಘೋಷಿಸಿದರು.ಮುಖಂಡ ದೊರಸ್ವಾಮಿರೆಡ್ಡಿ ಮಾತನಾಡಿ […]
ಶ್ರೀನಿವಾಸಪುರ 3 : ಬೆಂಗಳೂರು ನಗರದ ವಿಜಯನಗರ ಬಡಾವಣೆಯಲ್ಲಿ ತರಗತಿಗಳು ನಡೆಸಲಾಗುತ್ತದೆ 2026ನೇ ವರ್ಷದಲ್ಲಿ ಪರೀಕ್ಷೆ ಬರೆಯಲು ಎಲ್ಲಾ ಸಮುದಾಯದ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಪದವೀಧರರು ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶವಿದೆ ಎಂದು ಆರ್ಯ ವೈಶ್ಯ ಮಹಾಸಭೆಯ ಜಿಲ್ಲಾಧ್ಯಕ್ಷ ಕೆ.ಆರ್.ಶಿವಕುಮಾರ್ ಮಾಹಿತಿ ನೀಡಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರ್ನಾಟಕ ಆರ್ಯ ವೈಶ್ಯಮಹಾಸಭೆ ವತಿಯಿಂದ ಪತ್ರಿಕಾ ಗೋಷ್ಟಿ ನಡೆಸಿ ವಾಸವಿ ಆಕಾಡಮೆಯಿಂದ ನಡೆಸುವ ವಿವಿಧ ಕಾರ್ಯಾಗಾರದ ಬಗ್ಗೆ ಮಾತನಾಡಿದರು.2026ರಲ್ಲಿ ನಡೆಯುವ ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ […]
ಶ್ರೀನಿವಾಸಪುರ ಕೋಲಾರ ಜಿಲ್ಲೆ ಮಾವಿನ ಮ್ಯಾನ್ಚೆಸ್ಟರ್ ಎಂದು ಹೆಸರಾದ ಶ್ರೀನಿವಾಸಪುರ ಈಗ ಹೊಸ ಮಾವಿನ ತಳಿಯನ್ನು ತನ್ನ ಮಡಿಲಲ್ಲಿ ಹೊತ್ತಿದೆ. ಆ ಮಾವು ಇಮಾಮ್ ಪಸಂದ್. ಇತ್ತೀಚಿನ ವರ್ಷಗಳಲ್ಲಿ, ಇಲ್ಲಿನ ಕೆಲವೂ ಪುಟ್ಟವೂ ಆದ ರೈತರು ಈ ವಿಶಿಷ್ಟ ಮಾವಿನ ತಳಿಯನ್ನು ಪ್ರಯೋಗಾತ್ಮಕವಾಗಿ ಬೆಳೆಸತೊಡಗಿದ್ದು, ಈಗ ಅದು ಯಶಸ್ಸು ಕಂಡಿರುವುದು ಗಮನಾರ್ಹ ಸಂಗತಿ. ಇಮಾಮ್ ಪಸಂದ್ – ಶ್ರೇಷ್ಠ ಮಾವಿನ ಐತಿಹಾಸಿಕ ತಳಿಯೊಂದು ಇಮಾಮ್ ಪಸಂದ್ ಮಾವು ಮೂಲತಃ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮೌಲಿವನಲ್ಲಿರುವ ಪ್ರಾಚೀನ ತಳಿಯಾಗಿದೆ. […]

