

ಶ್ರೀನಿವಾಸಪುರ : ರೈತ ಕಾರ್ಮಿಕ ಮುಖಂಡರಾದ ಪಾತಕೋಟ ನವೀನ್ ಕುಮಾರ್ ಮಾತನಾಡಿ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದರು ನಮ್ಮನ್ನು ಆಳುವ ಸರ್ಕಾರಗಳು ಗ್ರಾಮ ಪಂಚಾಯಿತಿ ನೌಕರರನ್ನು ನಿರ್ಲಕ್ಷಿಸುತ್ತಿ ವೇ ಕನಿಷ್ಠ ವೇತನ 36,000 ನೀಡುವುದಾಗಲಿ, ನಿವೃತ್ತಿ ವೇತನ, ಪ್ರಮೋಷನ್ ನೀಡುವುದು, ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಜಾರಿ ಮಾಡುತ್ತಿಲ್ಲ ಇತ್ತೀಚೆಗೆ ಕರಬಸೂಲಿಗಾರ ಮತ್ತು ಜಲಗಾರರಿಂದ ಕಂದಾಯ ವಸೂಲಿ ವಿಚಾರದಲ್ಲಿ ಮೇಲಧಿಕಾರಿಗಳಿಂದ ನಿರಂತರ ಕಿರುಕುಳ ನೀಡುತ್ತಿರುವುದು ನಿಲ್ಲಬೇಕು ಜಲಗಾರರಿಗೆ ಬ್ಯಾಟರಿ ಮತ್ತು ಶೂಗಳನ್ನು ಕೊಡಬೇಕು ಹಾಗೂ ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡಲು ಇದೆ ಜುಲೈ 28ನೇ ತಾರೀಕು ಕೋಲಾರ ಜಿಲ್ಲಾ ಪಂಚಾಯಿತಿ ಮುಂದೆ ಬೃಹತ್ ಹೋರಾಟವೆಂದು ಎಲ್ಲಾ ನೌಕರರು ಭಾಗವಹಿಸಬೇಕೆಂದು ತಿಳಿಸಿದರು.
ಗ್ರಾಮದ ಗ್ರಾಮಪಂಚಾಯಿತಿ ಮುಂಭಾಗ ಬುಧವಾರ ರಾಯಲ್ಪಾಡು ಹೋಬಳಿಯ ಗ್ರಾಮ ಪಂಚಾಯಿತಿ ನೌಕರ ಸಂಘದ ಹೋಬಳಿ ಮಟ್ಟದ ಸಭೆಯಲ್ಲಿ ಗ್ರಾ.ಪಂ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿ , ಹೋಬಳಿ ಮಟ್ಟದ ನೂತನ ಸಮಿತಿಯನ್ನು ರಚನೆ ಮಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ನೌಕರ ಸಂಘದ ತಾಲೂಕು ಮುಖಂಡ ಟಿ ಎನ್ ಆಂಜಪ್ಪ ಮಾತನಾಡಿ ನಮ್ಮ ನೌಕರರು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ಸಂಘಟನೆಯಲ್ಲಿ ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.
ಹೋಬಳಿ ಮಟ್ಟದ ಸಮಿತಿಗೆ ಅಧ್ಯಕ್ಷ ಮುದಿಮಡುಗು ರೆಡ್ಡಪ್ಪ, ಕಾರ್ಯದರ್ಶಿ ಯರ್ರಂವಾರಿಪಲ್ಲಿ ರಾಜು. ಎಸ್.ಎನ್, ಸಂಘಟನಾ ಕಾರ್ಯದರ್ಶಿ ರಾಯಲ್ಪಾಡು ರವೀಂದ್ರ, ಖಜಾಂಚಿ ಕೂರಿಗೇಪಲ್ಲಿ ಚಲಪತಿ, ಪದಧಿಕಾರಿಗಳಾಗಿ ಶಿವಪ್ಪ, ನಾಗರಾಜ್, ಅಶೋಕ್ ಸಿ.ಎನ್., ಗಂಗಿರೆಡ್ಡಿ, ನರಸಿಂಹರೆಡ್ಡಿ, ರಾಮರೆಡ್ಡಿ ಟಿ.ಜಿ, ವೆಂಕಟರಾಮರೆಡ್ಡಿ, ಕೆ.ವೈ.ನಾರಾಯಣಸ್ವಾಮಿ ಆಯ್ಕೆಯಾದರು.

