

ಶ್ರೀನಿವಾಸಪುರ : ತಾಲ್ಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲಿನಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಈಗಿನ ಕಾಲದ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಬಿಟ್ಟು ಮೊಬೈಲ್ ನೋಡುವುದರಲ್ಲಿ ನಿರತರಾಗಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಫಲಿತಾಂಶ ಕುಂಠಿತಗೊಳ್ಳುತ್ತದೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಮೊಬೈಲ್ ಭೂತದಿಂದ ಬಿಡಿಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಕರೆ ನೀಡಿದರು.
ಕೋಮುಲ್ ನೂತನ ನಿರ್ದೇಶಕ ಕೆ ಕೆ ಮಂಜುನಾಥ ರೆಡ್ಡಿ ಮಾತನಾಡುತ್ತಾ ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ಸ್ನೇಹಪರ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಗ್ರಾಮೀಣ ಭಾಗದಲ್ಲಿರುವ ಕ್ರೀಡಾ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಬೆಳಗಲು ಸಹಕಾರಿಯಾಗುತ್ತವೆ. ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಹಾಗೂ ಸರ್ಕಾರಿ ನೌಕರಿ ಪಡೆಯಲು ಕ್ರೀಡಾ ಮಿಸಲಾತಿ ದೊರೆಯುತ್ತದೆ ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಸಿ ಮುನಿಲಕ್ಷ್ಮಯ್ಯ, ಬಿ ಆರ್ ಪಿ ವಸಂತ, ಸಿ ಆರ್ ಪಿ ಗಳಾದ ಸುಜಾತ, ವೆಂಕಟೇಶ್, ರಾಧಾ, ದೈಹಿಕ ಅಧೀಕ್ಷಕ ವೆಂಕಟಸ್ವಾಮಿ, ಯಲ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ ಎ ಶ್ರೀರಾಮ ಬಾಬು, ನ್ಯಾಷನಲ್ ಹೈಸ್ಕೂಲ್ ಮುಖ್ಯ ಶಿಕ್ಷಕ ಪಿ ಶ್ರೀನಿವಾಸ್, ನಿವೃತ್ತ ಮುಖ್ಯ ಶಿಕ್ಷಕ ಕೆ ಪ್ರಕಾಶಯ್ಯ, ನಿವೃತ್ತ ಶಿಕ್ಷಕ ಎನ್. ಹರಿ ಕುಮಾರ್, ರೋಟರಿ ಕೋಲಾರ ಜಿಲ್ಲಾ ಕಾರ್ಯದರ್ಶಿ ರವೀಂದ್ರನಾಥ್, ಶ್ರೀ ಶ್ರೀನಿವಾಸ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಆರ್ ಅಮರೇಶ್, ಯಲ್ದೂರು ಹೋಬಳಿ ಕರವೇ ಪ್ರಧಾನ ಕಾರ್ಯದರ್ಶಿ ಎಲ್ ಮುರಳಿ ಮೋಹನ್, ಮುಖ್ಯ ಶಿಕ್ಷಕರುಗಳಾದ ಜಿ ಕೆ ಮುರಳಿ, ಹೆಚ್ ನಾಗರತ್ನಮ್ಮ , ಮಂಜುನಾಥಗೌಡ, ರವಿಕುಮಾರ್, ಸಮಾಜ ಸೇವಕ ಅಂಬರೀಶ್, ಟಿ ಕೆ ರಾಮಚಂದ್ರಗೌಡ, ಮಂಜುನಾಥ ದೇವೇಗೌಡ, ಎಂ ಬದ್ರಿನಾಥ್, ಬಿ ಎಸ್ ವಾಸುದೇವಮೂರ್ತಿ ಪಾಲ್ಗೊಂಡಿದ್ದರು.

