3-8-2025 ಇಂದು ಉಪ್ಪುಂದದ ಮಡಿಕಲ್ ನಲ್ಲಿ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ ಕಾರಣ 9 ಜನ ಮೀನುಗಾರ ಬಂಧುಗಳು ಸುರಕ್ಷಿತವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.


ನಾವುಂದ;3-8-2025 ಇಂದು ಉಪ್ಪುಂದದ ಮಡಿಕಲ್ ನಲ್ಲಿ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ ಕಾರಣ 9 ಜನ ಮೀನುಗಾರ ಬಂಧುಗಳು ಸುರಕ್ಷಿತವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೀನುಗಾರರಿಗೆ ಲೈಫ್ ಜಾಕೆಟ್ ಮೀನುಗಾರಿಕೆಗೆ,ಇಜುವಿಕೆ ಜಲ ವಿಹಾರಕ್ಕೆ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು ಎಂದು ಈಶ್ವರ್ ಸಿ ನಾವುಂದ ಬರೆದ ಲೇಖನವನ್ನು ಜನನುಡಿ.ಕಾಂ ಜುಲಾಯ್ ೧೭ ರಂದು ಪ್ರಕಟಿಸಿತ್ತು. ಇದರ ಫಲಶ್ರುತಿ ಎಂಬಂತೆ ಉಪ್ಪುಂದದಲ್ಲಿ 9 ಜನ ಮೀನುಗಾರ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ್ದರಿಂದ ಸುರಕ್ಷಿತವಾಗಿ ದಡ ಮುಟ್ಟಿದ್ದಾರೆ.
ಇದನ್ನು ಮನಗೊಂಡು ಪ್ರತಿಯೊಬ್ಬ ಮೀನುಗಾರರಿಗೂ ಮೀನುಗಾರಿಕೆ ಹೋಗುವಾಗ ಲೈಫ್ ಜಾಕೆಟ್ ಧರಿಸಿ ನೀರಿಗೆ ಇಳಿಯುವುದು, ಜೀವಕ್ಕೆ ಸುರಕ್ಷಿತವಾದ ಮಾರ್ಗವಾಗಿದೆ ಎಂದು ಮನದಟ್ಟು ಮಾಡಿಕೊಳ್ಳಬೇಕು. ಈಜು ಬಂದವರು ಕೂಡ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಡುವಾಗ , ಮಳೆಗಾಲ ಮತ್ತು ಸಮುದ್ರದಲ್ಲಿ ವಾತಾವರಣ ಏರಿಳಿತಿರುವಾಗ ಈ ನಿಯಮವನ್ನು ಸರಕಾರ ಕಡ್ಡಾಯವಾಗಿ ಮಾಡಿದಾಗ ಮೀನುಗಾರರ ಜೀವ ಸುರಕ್ಷಿತವಾಗಿರುತ್ತದೆ ಆದುದರಿಂದ ಸರಕಾರವು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆ ಮಾಡುವಂತೆ ನಿಯಮಗಳನ್ನು ಜಾರಿ ಮಾಡಬೇಕು
ನಾಡ ದೋಣಿ ಮತ್ತು ಬೋಟಿನ ಮಾಲೀಕರು, ಲೈಫ್ ಜಾಕೆಟ್ ಖರೀದಿ ಮಾಡಿ ಕೊಡುವಂತೆ ಸರಕಾರ ಕಡ್ಡಾಯ ಮಾಡಿದಲ್ಲಿ ಕರಾವಳಿಯ ಪ್ರದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ಈ ಅನಾಹುತಗಳನ್ನು ತಡೆಯಬಹುದು
ಸುರಕ್ಷಿತವಾದ ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆ ಮಾಡಿದರೆ ದೋಣಿ ಮುಳುಗಿದಾಗ ಲೈಫ್ ಜಾಕೆಟ್ ನಿಮ್ಮನ್ನು ಕಾಪಾಡಬಲ್ಲದು.
ಉತ್ತಮ ಕ್ವಾಲಿಟಿಯ ಲೈಫ್ ಜಾಕೆಟ್ಅನ್ನೆ ಧರಿಸುವುದು ಕೂಡ ಅನಿವಾರ್ಯ. ಸರಕಾರ ಮತ್ತು ಜಿಲ್ಲಾಡಳಿತ ಡಿಸಿ ಅವರು ಆದಷ್ಟು ಬೇಗ ತ್ವರಿತವಾಗಿ ಮೀನುಗಾರಿಕೆಗೆ ಹೊರಡುವ ಎಲ್ಲರಿಗೂ ಲೈಫ್ ಜಾಕೆಟ್ ಧರಿಸುವಂತೆ ಕಡ್ಡಾಯವಾದ ನಿಯಮ ಜಾರಿ ಮಾಡಿ
ಈ ನಿಯಮವನ್ನು ಪಾಲಿಸುವಂತೆ ಮೀನುಗಾರರು ಮತ್ತು ಬೋಟಿನ ದೋಣಿಯ ಮಾಲೀಕರಿಗೆ ಮನವರಿಕೆ ಮಾಡಿ ಕಾನೂನು ಪಾಲಿಸದಿದ್ದಲ್ಲಿ ಶಿಕ್ಷೆ ಮತ್ತು ದಂಡಕ್ಕೆ ಗುರಿಪಡಿಸುವ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಬೇಕು
ಈ ಅವ್ಯವಸ್ಥೆಗೆ ತಾಜಾ ಉದಾಹರಣೆ ಎಂದರೆ ಈಗ ಗಂಗೊಳ್ಳಿ ಯಲ್ಲಿ ಸಂಭವಿಸಿದ ಮೀನುಗಾರ ದೋಣಿಯ ಅನಾಹುತವನ್ನು ಉದಾಹರಣೆ ಸಹಿತ
ನಾನು ಬರೆದ ಲೇಖನ ವನ್ನು ಸಾಮಾಜಿಕ ಕಳಕಳಿರುವ “ಜನ ನುಡಿ” ಡಾಟ್ ಕಾಮ್ ಸಂಪಾದಕ ರಾದ. ಬರ್ನಾಡ್ ಡಿಕೋಸ್ತಾ ರವರು ಪ್ರಕಟಿಸದ ಲೇಖನದ ಫಲ ಶ್ರುತಿ ಎಂದರು ತಪ್ಪಾಗಲಾರದು, ಈಗೀಗ ಮೀನುಗಾರ ಬಂದುಗಳು ಜಾಗ್ರತರಾಗಿ ಮೀನುಗಾರಿಕೆಗೆ ಹೊರಡುವಾಗ ಲೈಫ್ ಜಾಕೆಟ್ ಧರಿಸುವುದು ಅಲ್ಲಲ್ಲಿ ಕಂಡುಬರುತ್ತದೆ.
ಮೀನುಗಾರ ಬಂಧುಗಳ ಜನ ಜಾಗೃತಿಗಾಗಿ ಈ ಮೇಲಿನಂತೆ ಜನ ಜಾಗೃತಿ ಮೂಡಿಸುವ ಸಲುವಾಗಿ ಲೇಖನವನ್ನು ಬರೆದಿದ್ದೆವು.
ಪ್ರತಿವರ್ಷವು ಕರಾವಳಿಯಲ್ಲಿ ಮಳೆಗಾಲದಲ್ಲಿ ಮೀನುಗಾರರು ಜೀವ ಕಳೆದುಕೊಳ್ಳುವುದು. ವಾಡಿಕೆ ತರ ಆಗಿ ಬಿಟ್ಟಿದೆ ಇದು ನಿಲ್ಲಬೇಕಾದರೆನ್ಲೈಫ್ ಜಾಕೆಟ್ ಕಡ್ಡಾಯ ಇಂಥಹ ನಿಯಮಗಳು ಜಾರಿ ಆಗಲೇಬೇಕುನ್ಇಂತಹ ಅವಘಡ ಸಂಭವಿಸಿದಾಗ ಬಡ ಸಂಸಾರವು ತತ್ತರಗೊಂಡು ನೋವನ್ನು ಅನುಭವಿಸುವುದು ನೋವವನ್ನುನ್ಈ ಅನುಭವಿಸುವುದು ಹೇಳ ತೀರದು. ಲೈಫ್ ಜಾಕೆಟ್ ಕಡ್ಡಾಯ ಮಾಡುವುದರ ಬಗ್ಗೆ ಹಾಗೂ ಜನ ಜಾಗೃತಿ ಮೂಡಿಸುವ ಮಾಡುವುದರ ಬಗ್ಗೆ ಮೀನುಗಾರಿಕಾ ಸಚಿವರ ಗಮನಕ್ಕೆ ತರುವ ಸಲುವಾಗಿ ಮೇಲಿನ ಲೇಖನ ನಮ್ಮ ಪ್ರಯತ್ನವಾಗಿತ್ತು .
ಹಾಗೂ ಗೌರವಿತ ಜನನುಡಿ.ಡಾಟ್ ಕಾಂ ಇದರ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ತಮ್ಮ ಜನಜಾಗೃತಿಯ ಅಭಿ ಪ್ರಾಯದ ಜೊತೆಗೆ ಲೇಖನವನ್ನು ಪ್ರಕಟಿಸಿದ್ದರು .ಅದರ ಫಲ ಶೃತಿ ಎಂಬಂತೆ. ಇಂದು ಉಪ್ಪುಂದದ ಮಡಿಕಲ್ ನಲ್ಲಿ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ ಕಾರಣ 9 ಜನ ಮೀನುಗಾರ ಬಂಧುಗಳು ಸುರಕ್ಷಿತವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಮೀನುಗಾರ ಬಂಧುಗಳೇ ಒಂದು ಲೈಫ್ ಜಾಕೆಟ್ ನಿಮ್ಮ ಅಮೂಲ್ಯ ಜೀವ ಕಾಪಾಡುತ್ತದೆ, ಮತ್ತು ನಿಮ್ಮ ಸಂಸಾರವನ್ನು ಸಂಕಟವನ್ನು ಕಾಪಾಡುತ್ತದೆ. ಹಾಗಾಗಿ ನಿಮ್ಮ ಪ್ರಾಣ ಮತ್ತು ಸಂಸಾರದ ಸುರಕ್ಷತೆಗಾಗಿ ಒಂದು ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆ ಮಾಡುವ ಪಣತೊಟ್ಟು ನಿಮ್ಮ ಉದ್ಯೋಗದಲ್ಲಿ ಮುಂದುವರೆಯಿರಿ.
ಮೀನುಗಾರ ಬಂಧುಗಳೇ ನಿಮ್ಮ ಉದ್ಯೋಗದ ಜೊತೆಗೆ ನಿಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿ ಹಾಗಾಗಿ ಎಲ್ಲಾ ಮೀನುಗಾರರು ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆಗೆ ಹೋಗಿ ಎಂಬುದು ನಿಮ್ಮಲ್ಲಿ ನಮ್ಮ ಕಳಕಳಿಯ ಕೋರಿಕೆ.

ನಮ್ಮ ಹಿಂದಿನ ಲೇಖನದ ಲಿಂಕ್ –




