

ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದಕ್ಕೆ ನಿಜಕ್ಕೂ ಎದೆಗಾರಿಕೆ ಬೇಕು. ರೌದ್ರವತಾರದ ಸಮುದ್ರ ಎಣಿಸುವಾಗಲೇ ಭಯಭೀತರಾಗುತ್ತೇವೆ. ಆದರೆ ಮೀನುಗಾರರು ಭಯಭಿತರಾಗದೆ ಮೀಗಾರಿಕೆಗೆ ತೆರಳುತ್ತಾರೆ. ಅವರಿಗೆ ನಿಜಕ್ಕೂ ಶಹಭಾಸ್ ಅನ್ನಬೇಕು. ಅವರ ಧೈರಕ್ಕೆ ಮೆಚ್ಚಲೇ ಬೇಕು. ಆದರೆ ಮೀನುಗಾರಿಕೆ ತೆರಳಿದ ಸಮಯದಲ್ಲಿ ಬಿರುಗಾಳಿ ಬರುತ್ತೆ, ದೊಡ್ಡ ಅಲೆಗಳು ಅಪ್ಪಳಿಸುತ್ತವೆ, ದೋಣಿಗಳು ಮುಳುಗತ್ತವೆ, ಲಾಂಚ್ ಗಳು, ಬೋಟ್ ಗಳು ಅಪಾಯಕ್ಕೆ ಸಿಲುಕುತ್ತವೆ. ಮೀನು ಹಿಡಿಯುವರು ಸಮುದ್ರದಲ್ಲಿ ಮುಳುಗುತ್ತಾರೆ, ಅಲೆಗಳ ಮಧ್ಯೆ ಕೊಚ್ಚಿ ಹೋಗುತ್ತಾರೆ, ಹೀಗೆ ಹಲವು ಅಮೂಲ್ಯ ಜೀವಗಳು ಕಳೆದುಕೊಂಡು ಬಿಡುತ್ತೇವೆ. ಅವರ ಕುಟುಂಬ ದುಖಸಾಗರದಲ್ಲಿ ಮುಳುಗುತ್ತೆ, ಕೆಲವರ ಮಗ, ಕೆಲವರ ಗಂಡಂದಿರು, ಕೆಲವರ ಅಪ್ಪಂದಿರು ಕ್ಷಣದಲ್ಲಿ ಇಲ್ಲವಾಗುತ್ತಾರೆ. ಹಾಗಿರುವಾಗ ಮೀನುಗಾರರು ಮೀನುಗಾರಿಕೆಗೆ ಹೊರಡುವಾಗ, ಮೀನುಗಾರಿಕೆ ಮಾಡುವಾಗ ಲೈಫ್ ಜಾಕೆಟ್ ಹಾಕಬೇಕಲ್ಲವೇ, ಇದು ಆಧುನಿಕ ಜಗತ್ತಿಗೆ ಹೇಳಿ ಮಾಡಿದ್ದು, ಈ ಲೈಫ್ ಜಾಕೆಟನ್ನು ಧರಿಸಲು ಅಸಡ್ಡೆ ಯಾಕೆ ? ಮೀನುಗಾರಿಕೆ ಮಾಡುವರು ಅವಶ್ಯವಾಗಿ ಲೈಪ್ ಜಾಕೆಟ್ ಗಳನ್ನು ಧರಿಸಬೇಕು. ಇವತ್ತು ಜೀವ ರಕ್ಷಕಗಳಿಗೆ ಸರ್ಕಾರದಿಂದ ಅನುದಾನದ ಕೊರತೆ ಇದೆ ಎಂದು ಹೇಳಲಾಗುತ್ತೆ. ಆದರೆ ಒಂದು ಮಾತು ಈ ಮೀನುಗಾರಿಕೆಗಾಗಿ ಬೇಕಾಗಿರುವ ದೋಣಿಗಳನ್ನು, ಲಾಂಚ್ ಗಳನ್ನು ಸಿದ್ದ ಮಾಡಿಸಲು ಲಕ್ಷ ಲಕ್ಷ ರೂಪಾಯಿಗಳು ಖರ್ಚು ಮಾಡುತ್ತಾರೆ, ಹಾಗಿರುವಾಗ ಸುಮಾರು 2- 3 ಸಾವಿರ ರೂಪಾಯಿ ಬೆಲೆಬಾಳುವ ಲೈಫ್ ಜಾಕೆಟಗಳಿಗಾಗಿ ಸರಕಾರಕ್ಕೆ ಯಾಕೆ ಅವಲಂಬಿಸಬೇಕು..? ಲಕ್ಷ ಲಕ್ಷ ರೂಪಾಯಿ ಬೋಟು ದೋಣಿಗಳ ಮುಂದೆ ಜುಜುಬಿ 2- 3 ಸಾವಿರ ರೂಪಾಯಿ ಕೊರತೆಯಾಗುತ್ತಾ ? ಕೆಲವರು ಲೈಫ್ ಜಾಕೆಟ್ ಇದ್ದು ಧರಿಸುವುದಿಲ್ಲ. ಕೆಲವರು ಹೆಲ್ಮೆಟ್ ಇದ್ದು ಕೈಗೆ ತೊಟ್ಟುಕೊಳ್ಳುತ್ತಾರೆ, ಬೈಕ್ ಸ್ಕೂಟರ್ ಗಳಿಗೆ ಸಿಕ್ಕಿಸುತ್ತಾರೆ. ಪೊಲೀಸರನ್ನು ನೋಡಿದ ಕೂಡಲೇ ಗಡಿಬಿಡಿಯಲ್ಲಿ ತೊಟ್ಟುಕೊಳ್ಳುತ್ತಾರೆ. ಯಾಕೆ ಹೀಗೆ ? ಪೊಲೀಸರಿಗಾಗಿ ಹೆಲ್ಮೆಟು ತೊಟ್ಟುಕೊಳ್ಳುವ ಅವಶ್ಯಕತೆ ಇಲ್ಲ, ಜೀವ ನಿಮ್ಮದು, ಪ್ರಾಣ ನಿಮ್ಮದು, ಅದನ್ನು ಉಳಿಸಿಕೊಳ್ಳಲು ನೀವು ಹೆಲ್ಮೆಟ್ ಧರಿಸಬೇಕು. ಪೋಲಿಸರಿಗಾಗಿ ಹೆಲ್ಮೆಟ್ ಧರಿಸುವುದರಲ್ಲಿ ಅರ್ಥ ಇಲ್ಲ. ಅಪಘಾತವಾಗಿ ತಲೆಗೆ ಎಟಾದರೆ, ಸವಾರ ಕೋಮಕ್ಕೆ ಹೋಗುತ್ತಾನೆ, ಗಂಭೀರ ಗಾಯಗೊಳ್ಳುತ್ತಾನೆ, ಅವರ ಆರೈಕೆ, ಚಿಕಿತ್ಸೆ ಮಾಡುವರು ಯಾರು..? ಹಣ ಹೊಂದಿಸುವರು ಯಾರು..? ಇದಲ್ಲದೆ ಅಮ್ಮ ಅಪ್ಪ ಪತ್ನಿ, ಅಕ್ಕ, ತಂಗಿ ಅಣ್ಣ ತಮ್ಮ ಹೀಗೆ ನಿಮಗಾಗಿ ಸಂಕಟ ಪಡುವರು ಒಬ್ಬರ ಇಬ್ಬರ..? ಹೆಲ್ಮೆಟ್ ಹಾಕಿದರೆ ಕನಿಷ್ಠ ಪ್ರಾಣ ಉಳಿಯುತ್ತೆ, ಮೀನು ಹಿಡಿಯುವರು ಲೈಫ್ ಜಾಕೆಟ್ ಹಾಕಿದಲ್ಲಿ ಮುಳುಗುವಾಗ ಕಡ್ಡಿತುಂಡು ಸಿಕ್ಕಿ ಆಸರೆ ದೊರೆತಂತೆ, ಲೈಫ್ ಜಾಕೆಟ್ ನಿಂದ ಆಸರೆ ಸಿಗುತ್ತದೆ ಎಂಬ ಮನವರಿಕೆ ಮೀನುಗಾರರಿಗೆ ಆಗಬೇಕು. ವಾಹನಗಳಲ್ಲಿ ಸಂಚರಿಸುವಾಗ ಸರ್ಕಾರ ಹೆಲ್ಮೆಟ್ ಹೇಗೆ ಕಡ್ಡಾಯ ಮಾಡಿದೇಯೊ, ಹಾಗೆ ಸಮುದ್ರಲ್ಲಿ, ಮೀನುಗಾರಿಕೆ ಮಾಡುವರಿಗೆ, ಹೊಳೆಯಲ್ಲಿ, ನದಿಗಳಲ್ಲಿ ದೋಣಿ, ಬೋಟುಗಳ ಮುಖಾಂತರ ಜಲ ವಿಹಾರ ಮಾಡುವಾಗ, ತೆರಳುವಾಗ ಲೈಫ್ ಜಾಕೆಟನ್ನು ಕಡ್ಡಾಯ ಮಾಡಬೇಕು. ಇದು ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ಲೈಫ್ ಜಾಕೆಟ್ ಕಡ್ಡಾಯ ಮಾಡುವ ವಿಚಾರವಾಗಿ ನಮ್ಮ ಮಿತ್ರ ಚಿಂತಕ, ಬರಹಗಾರರಾದ ಈಶ್ವರ್ ಸಿ ನಾವುಂದ ಒಂದು ಲೇಖನವನ್ನು ಬರೆದಿದ್ದಾರೆ. ಅದನ್ನು ಓದಿ ಇದನ್ನು ಸರಕಾರದವರೆಗೆ ಮುಟ್ಟಿಸಿ – ಬರ್ನಾಡ್ ಡಿಕೋಸ್ತಾ – ಸಂಪಾದಕರು

ಪ್ರತಿಯೊಬ್ಬ ಮೀನುಗಾರರಿಗೂ ಮೀನುಗಾರಿಕೆ ಹೋಗುವಾಗ ಲೈಫ್ ಜಾಕೆಟ್ ಧರಿಸಿ ನೀರಿಗೆ ಇಳಿಯುವುದು, ಜೀವಕ್ಕೆ ಸುರಕ್ಷಿತವಾದ ನಿಯಮವಾಗಿದೆ
ಈಜು ಬಂದವರು ಕೂಡ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಡುವಾಗ , ಮಳೆಗಾಲ ಮತ್ತು ಸಮುದ್ರದಲ್ಲಿ ವಾತಾವರಣ ಏರಿಳಿತಿರುವಾಗ ಈ ನಿಯಮವನ್ನು ಸರಕಾರ ಕಡ್ಡಾಯವಾಗಿ ಮಾಡಿದಾಗ ಮೀನುಗಾರರ ಜೀವ ಸುರಕ್ಷಿತವಾಗಿರುತ್ತದೆ ಆದುದರಿಂದ ಸರಕಾರವು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆ ಮಾಡುವಂತೆ ನಿಯಮಗಳನ್ನು ಜಾರಿ ಮಾಡಬೇಕು
ನಾಡ ದೋಣಿ ಮತ್ತು ಬೋಟಿನ ಮಾಲೀಕರು, ಲೈಫ್ ಜಾಕೆಟ್ ಖರೀದಿ ಮಾಡಿ ಕೊಡುವಂತೆ ಸರಕಾರ ಕಡ್ಡಾಯ ಮಾಡಿದಲ್ಲಿ ಕರಾವಳಿಯ ಪ್ರದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ಈ ಅನಾಹುತಗಳನ್ನು ತಡೆಯಬಹುದು
ಸುರಕ್ಷಿತವಾದ ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆ ಮಾಡಿದರೆ ದೋಣಿ ಮುಳುಗಿದಾಗ ಲೈಫ್ ಜಾಕೆಟ್ ನಿಮ್ಮನ್ನು ಕಾಪಾಡಬಲ್ಲದು.
ಉತ್ತಮ ಕ್ವಾಲಿಟಿಯ ಲೈಫ್ ಜಾಕೆಟ್ಅನ್ನೆ ಧರಿಸುವುದು ಕೂಡ ಅನಿವಾರ್ಯ. ಸರಕಾರ ಮತ್ತು ಜಿಲ್ಲಾಡಳಿತ ಡಿಸಿ ಅವರು ಆದಷ್ಟು ಬೇಗ ತ್ವರಿತವಾಗಿ ಮೀನುಗಾರಿಕೆಗೆ ಹೊರಡುವ ಎಲ್ಲರಿಗೂ ಲೈಫ್ ಜಾಕೆಟ್ ಧರಿಸುವಂತೆ ಕಡ್ಡಾಯವಾದ ನಿಯಮ ಜಾರಿ ಮಾಡಿ
ಈ ನಿಯಮವನ್ನು ಪಾಲಿಸುವಂತೆ ಮೀನುಗಾರರು ಮತ್ತು ಬೋಟಿನ ದೋಣಿಯ ಮಾಲೀಕರಿಗೆ ಮನವರಿಕೆ ಮಾಡಿ ಕಾನೂನು ಪಾಲಿಸದಿದ್ದಲ್ಲಿ ಶಿಕ್ಷೆ ಮತ್ತು ದಂಡಕ್ಕೆ ಗುರಿಪಡಿಸುವ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಬೇಕು
ಈ ಅವ್ಯವಸ್ಥೆಗೆ ತಾಜಾ ಉದಾಹರಣೆ ಎಂದರೆ ಈಗ ಗಂಗೊಳ್ಳಿ ಯಲ್ಲಿ ಸಂಭವಿಸಿದ ಮೀನುಗಾರ ದೋಣಿಯ ಅನಾಹುತ.
ಪ್ರತಿವರ್ಷವು ಕರಾವಳಿಯಲ್ಲಿ ಮಳೆಗಾಲದಲ್ಲಿ ಮೀನುಗಾರರು ಜೀವ ಕಳೆದುಕೊಳ್ಳುವುದು. ವಾಡಿಕೆ ತರ ಆಗಿ ಬಿಟ್ಟಿದೆ ಇದು ನಿಲ್ಲಬೇಕಾದರೆ
ಲೈಫ್ ಜಾಕೆಟ್ ಕಡ್ಡಾಯ ಇಂಥಹ ನಿಯಮಗಳು ಜಾರಿ ಆಗಲೇಬೇಕು
ಇಂತಹ ಅವಘಡ ಸಂಭವಿಸಿದಾಗ ಬಡ ಸಂಸಾರವು ತತ್ತರಗೊಂಡು ನೋವವನ್ನು ಹೇಳ ತೀರದ ವೇದನೆ ಯಾಗಿದೆ
ಈ ಅನುಭವಿಸುವುದು ನೋಡಲಿಕ್ಕೆ ಆಗುವುದಿಲ್ಲ.
ಸರಕಾರ ಮತ್ತು ಮೀನುಗಾರಿಕಾ ಸಚಿವರು ಇತ್ತ ಗಮನ ಹರಿಸಿ ಜೀವ ಕಳೆದುಕೊಂಡಂತ ಮೀನುಗಾರರಿಗೆ ಸಂಸಾರಕ್ಕೆ ಪರಿಹಾರ ಸರಕಾರದಿಂದ ಪರಿಹಾರ ಕೊಡುವುದಕ್ಕೆ ಮುಂದಾಗಬೇಕು
ಪ್ರಸ್ತುತ ಹೀಗೆ ಇರುವ ಮೀನುಗಾರಿಕಾ ಸಚಿವರಾದ ಮಂಕಾಳ ಸ್ ವೈದ್ಯ ಮಿಡಿಯುವ ಹೃದಯದ ಮಾನವೀಯತೆ ಇರುವ ಮೀನುಗಾರಿಕಾ ಸಚಿವರಾಗಿದ್ದಾರೆ. ಸಚಿವರಾಗಿರುವುದರಿಂದ ಕರಾವಳಿಯಲ್ಲಿ ಪ್ರತಿವರ್ಷ ಸಂಭವಿಸುವ ಈ ಅನಾಹುತಕ್ಕೆ ಮುಂದೆಂದು ಸಂಭವಿಸದಂತೆ ಮೀನುಗಾರಿಕಾ ಸಚಿವರು ಕಾಳಜಿವಹಿಸಲಿ
ಎಲ್ಲರ ಕಳಕಳಿಯ ಕೋರಿಕೆ ಏನೆಂದರೆ ಮುಂದೆಂದು ಹೀಗೆ ಆಗದಂತೆ ಕಡ್ಡಾಯವಾದ ಕಾನೂನು ಜಾರಿಗೆ ತರಬೇಕೆಂದು ವಿನಂತಿಸುತಿದ್ದೇವೆ.





