Rohan Corporation felicitates Remona Evette Pereira for her Golden Book world record achievement.


ಮಂಗಳೂರು, ಆ.1: ಮಂಗಳೂರಿನ ಭರತನಾಟ್ಯ ಕಲಾವಿದೆಯಾದ ರೆಮೋನಾ ಎವೆಟ್ ಪಿರೇರಾ ಅವರು 7 ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಹಿನ್ನೆಲೆಯಲ್ಲಿ, ರೋಹನ್ ಕಾರ್ಪೋರೇಶನ್ ಸಂಸ್ಥೆ ಅವರ ಸಾಧನೆಯನ್ನು ಗುರುತಿಸಿ ಶುಕ್ರವಾರ ವಿಶೇಷವಾಗಿ ಸನ್ಮಾನಿಸಿದೆ.
ಈ ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಬಿಜೈ ಮುಖ್ಯ ರಸ್ತೆಯ ರೋಹನ್ ಸಿಟಿಯಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕರಾದ ಡಾ.ರೋಹನ್ ಮೊಂತೇರೊರವರು ರೆಮೋನಾ ಪಿರೇರಾ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹಾಗೂ ಮಂಗಳೂರಿನ ಕಲೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳಕಿಗೆ ತರುವ ಉದ್ದೇಶದಿಂದ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
“ರೆಮೋನಾ ಅವರ ಸಾಧನೆ ಮಂಗಳೂರು ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಇವರು ಇಂದಿನ ಯುವ ಸಮುದಾಯಕ್ಕೆ ಸ್ಪೂರ್ತಿ” ಎಂದು ಡಾ.ರೋಹನ್ ಮೊಂತೇರೊ ಹೇಳಿದರು.
ಅದ್ವಿತೀಯ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಭವಿಷ್ಯದಲ್ಲಿಯೂ ಇಂತಹ ಪ್ರತಿಭೆಗಳಿಗೆ ವೇದಿಕೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
Rohan Corporation felicitates Remona Evette Pereira for her Golden Book world record achievement.

Mangaluru, Aug 1: Renowned Bharatanatyam dancer from Mangaluru, Remona
Evette Pereira, who set a world record by performing Bharatanatyam
continuously for seven days, was specially felicitated by Rohan Corporation on
Friday in recognition of her exceptional achievement.
The felicitation ceremony took place at the company’s office located at Rohan
City on Bejai Main Road, Mangaluru. During the event, Dr.Rohan Monteiro,
Founder of Rohan Corporation, honoured Remona Pereira with a certificate of
appreciation and a memento.
The initiative was undertaken to encourage local talent and to bring Mangaluru’s
rich art and culture to a global platform.
“Remona’s achievement has brought pride not only to Mangaluru but to the entire
Nation. She is an inspiration to today’s young generation,” said Dr.Rohan
Monteiro.
He also assured that similar platforms will continue to be provided to support
such talent in the future

