

ಶ್ರೀನಿವಾಸಪುರ : ಯಾವುದೇ ರೀತಿಯಾಗಿ ಗ್ಯಾಸ್ ಸಿಲೆಂಡರ್ ಪೂರೈಕೆಯಲ್ಲಿ ವ್ಯತ್ಯವಿಲ್ಲ ಕೇಂದ್ರ ಹಾಗು ರಾಜ್ಯ ಸರ್ಕಾರ ವಾಣಿಜ್ಯ ಸಿಲೆಂಡರ್ಗಳನ್ನು ಹೊರತುಪಡಿಸಿ, ಗೃಹಬಳಕೆಯ ಸಿಲೆಂಡರ್ಗಳು ಸರ್ಕಾರ ಆದೇಶದಂತೆ ಪೂರೈಕೆಯಾಗಿಲಿವೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು .
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ತಾಲೂಕಿನ ಗ್ಯಾಸ್ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನ ಸರ್ವಜನಿಕರಿಗೆ ಹೇಳುವೊಂದೆ ಸರ್ವರ್ ಪ್ರಬ್ಲಮ್ ನಿಂದ ಬುಕಿಂಗ್ಗೆ ಪ್ರಾಬ್ಲಮ್ ಆಗಿದೆ ಅಷ್ಟೆ. ತಡವಾಗಿ ತಗೆದುಕೊಳ್ಳುತ್ತಿದೆ. ಹೆಚ್ಚಿನ ಸಿಲೆಂಡರ್ಗಳನ್ನು ಬುಕ್ ಮಾಡುವುದರಿಂದ ಈ ವ್ಯತ್ಯಗಳು ನಡೆಯುತ್ತಿದೆ . ನಾಲೈದು ದಿನಗಳಲ್ಲಿ ಬುಕಿಂಗ್ಗೆ ಪ್ರಾಬ್ಲಮ್ ಸರಿಹೋಗಲಿದೆ ಎಂದರು. ಸಾಮಾನ್ಯವಾಗಿ ಈ ಹಿಂದೆ ಯಾವ ರೀತಿಯಾಗಿ ಸಿಲೆಂಡರ್ ಬೇಕೋ ಅದೇ ರೀತಿಯಲ್ಲಿ ಗ್ಯಾಸ್ ಮಾಲೀಕರು ಕಂಪನಿಗಳಿಗೆ ಅದೇ ರೀತಿಯಲ್ಲಿ ಕಳುಹಿಸುತ್ತಿದ್ದಾರೆ. ಯಾರು ಗಾಬರಿ ಬೀಳುವುದು ಬೇಡ ಅಲ್ಲದೆ ಗ್ಯಾಸ್ ಅಂಗಡಿಗಳ ಬಳಿ ಗಲಾಟೆಗಳನ್ನು ಮಾಡಬೇಡಿ ಎಂದು ಸರ್ವಜನಿಕರಿಗೆ ಮನವಿ ಮಾಡಿದರು.
ಶ್ರೀನಿವಾಸ್ ಗ್ಯಾಸ್ ಏಜೆನ್ಸಿ ಮಾಲೀಕ ರಾಜೇಶ್ ಮಾತನಾಡಿ ಗ್ರಾಹಕರು ಯಾವುದೇ ಕಾರಣಕ್ಕೂ ಭಯಪಟ್ಟು ನಮ್ಮ ಭಯಕ್ಕೆ ಸಿಕ್ಕಿಸಬೇಡಿ. ನಾವು ಈ ಹಿಂದೆ ಯಾವರೀತಿಯಾಗಿ ನಮಗೆ ಬೇಡಿಕೆಯನ್ನ ಕಂಪನಿಗೆ ಕಳುಹಿಸುತ್ತೇದ್ದೇವೆ ಅದೇ ರೀತಿಯಾಗಿ ಕಳುಹಿಸುತ್ತಿದ್ದು, ಸರ್ವರ್ ಪ್ರಾಬ್ಲಮ್ ನಿಂದ ಬುಕಿಂಗ್ಗೆ ತೊಂದರೆಯಾಗುತ್ತಿದ್ದು, ಅದು ಸಹ ಅತಿ ಶೀಘ್ರವಾಗಿ ಸರಿಹೋಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಆಹಾರ ನಿರೀಕ್ಷಕ ಜುನೀದ್ಅಲಾಂಖಾನ್, ಜಗನ್ ಗ್ಯಾಸ್ ಮಾಲೀಕ ಭಾಸ್ಕರ್, ವಿಷನ್ ಇಂಡಿಯಾ ಗ್ಯಾಸ್ ವ್ಯವಸ್ಥಾಪಕ ರವಿಕುಮಾರ್,ಡಿವಿ.ಆರ್.ಪಿ.ಗ್ಯಾಸ್ ಮಾಲೀಕ ವೆಂಕಟರೆಡ್ಡಿ, ನಲ್ಲಿ ಗಂಗಮ್ಮ ಗ್ಯಾಸ್ ವ್ಯವಸ್ಥಾಪಕ ಸುರೇಶ್ ಇದ್ದರು.

