

ತಲ್ಲೂರು: ಹಾಡುಹಗಲೇ ನಿನ್ನೆ ಸಂಜೆ 4.30- 5 ಗಂಟೆಯ ನಡುವೆ ಜನನಿಬಿಡ ತಲ್ಲೂರು ಜಂಕ್ಷನ್ ನ M.D.ರೆಸಿಡೆನ್ಸಿ ಎದುರು ಕಾರಿನ ಗಾಜು ಒಡೆದು 2 ಲಕ್ಷ ನಗದು ಎಗರಿಸಿದ ಖದೀಮರು..!!
ಕಾರುಗಳಲ್ಲಿ ನಗದು ಇರಿಸುವ, ಸಾಗಿಸುವವರು ಎಚ್ಚರ..!!!
ನಿನ್ನೆ ಮಂಗಳವಾರ ೪ ರಂದು ತಲ್ಲೂರು ಗ್ರಾಮದ ಗುಂಡು ಶೆಟ್ಟಿ ಎನ್ನುವರು ಬ್ಯಾಂಕ್ ಆಫ್ ಬರೋಡದಿಂದ ಎರಡು ಲಕ್ಷ ರೂಪಾಯಿ ಕ್ಯಾಶ್ ಮಾಡಿಕೊಂಡು ಹೋಂಡಾ ka 20 mf 4939 ಕ್ರೇಟಾ ಕಾರಿನ ಡ್ಯಾಶ್ ಬೋರ್ಡಲ್ಲಿಟ್ಟಿದ್ದು ನಂತರ ಕಾರಿನ ಡೋರ್ ಹಾಕಿ ಎಂಡಿ ರೆಸಿಡೆನ್ಸಿ ಗೆ ಹೋಗಿ ಅಲ್ಲಿಂದ ವಾಪಸ್ಸು ಬಂದು ನೋಡಿದಾಗ. ಕಾರಿನ ಗಾಜು ಒಡೆದು ಡ್ಯಾಶ್ ಬೋರ್ಡಿನಲ್ಲಿ ಇಟ್ಟಿದ್ದ 2 ಲಕ್ಷ ರೂಪಾಯಿ ಯಾರೋ ಅಪರಿಚಿತರು ತೆಗೆದು ಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ, ಪೊಲೀಸರು ತನಿಕೆ ಕೈಕೊಂಡಿದ್ದಾರೆ. ಮತ್ತು ಸಾರ್ವಜನಿಕರನ್ನು ಜಾಗ್ರತೆ ಇರಲು ಎಚ್ಚರಿಸಿದ್ದಾರೆ.




