HOLY ROSARY CHURCH, KUNDAPUR – 450 th JUBILEE SOUVENIR 2021

ಮಿಲಾಗ್ರಿಸ್ ಕಾಲೇಜು ಆಫ್ ನರ್ಸಿಂಗ್ ನ  ಎರಡನೇ ಬ್ಯಾಚಿನ ವಿದ್ಯಾರ್ಥಿಗಳ ದೀಪ ಬೆಳಗುವಿಕೆ,ವಚನ ಸ್ವೀಕಾರ ಹಾಗೂ ವಾರ್ಷಿಕೋತ್ಸವ

ಜಾಕೀರ್ ಹುಸೇನ್ ಮೊಹಲ್ಲಾ ಉರ್ದು ಆಂಗ್ಲ ಶಾಲೆಗೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತಿ 

ಅಂತರ ರಾಜ್ಯ ಯುವ ವಿನಿಮಯ 2025-26ರ ಉದ್ಘಾಟನಾ ಸಮಾರಂಭ: ಅದ್ಭುತ ಯಶಸ್ಸು

Inaugural Ceremony of Inter State Youth Exchange 2025-26: A Resounding Success

ಹೊಸಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ನಿಧನ- ರಕ್ತದ ಮಡುವೇ ಹರಿಯಿತು

ಮೂಡ್ಲಕಟ್ಟೆ:ಹೆಲ್ತ್ ಕೇರ್ ಸೆಮಿನಾರ್

ಇನ್ನೋಹೆಲ್ತ್ (INNOHEALTH) ಹೆಲ್ತ್‌ಕೇರ್ ಸೆಮಿನಾರ್ ಅನ್ನು 2026 ಫೆಬ್ರವರಿ 9ರಂದು ಬೆಳಿಗ್ಗೆ 9:30ಕ್ಕೆ ಕಾಲೇಜು ಸಭಾಂಗಣದಲ್ಲಿ ಮೂಡ್ಲಕಟ್ಟೆ ಕಾಲೇಜ್ ಆಫ್ಫಿಸಿಯೋಥೆರಪಿ, ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್‌ಗಳ ಸಹಯೋಗದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶ್ರೀ ಉದಯಕುಮಾರ್ ಶೆಟ್ಟಿ ಅವರು ಶಿಸ್ತಿನ ಮಹತ್ವ, ಆರೋಗ್ಯಕರ ಜೀವನಶೈಲಿ ಮತ್ತು ಆಧುನಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಬಗ್ಗೆ ಮಾತನಾಡಿದರು. ಅವರ ಪ್ರೇರಣಾದಾಯಕ ಭಾಷಣವು ವಿದ್ಯಾರ್ಥಿಗಳನ್ನು ಸೆಮಿನಾರ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭವಿಷ್ಯದ ವೃತ್ತಿಜೀವನ ಸವಾಲುಗಳಿಗೆ ಸಿದ್ಧರಾಗಲು ಉತ್ತೇಜಿಸಿತು.ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್  ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ  ಇಂತಹ ಸೆಮಿನಾರ್‌ಗಳು ವೃತ್ತಿ ನಿರ್ಮಾಣಕ್ಕೆ ಹೇಗೆ ಸಹಕಾರಿಯಾಗುತ್ತವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭವಿಷ್ಯದ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳನ್ನು ಹೇಗೆ ಸಿದ್ಧಗೊಳಿಸುತ್ತವೆ ಎಂಬುದನ್ನು ವಿವರಿಸಿದರು. ವಿದ್ಯಾರ್ಥಿಗಳು ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಮ್ಮ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮವು  ಸಾಂಪ್ರದಾಯಿಕ ದೀಪಪ್ರಜ್ವಲನೆಯಿಂದ ಆರಂಭಗೊಂಡಿತು. ನಂತರ ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಉಪಪ್ರಾಚಾರ್ಯರಾದ ಶ್ರೀಮತಿ ಸೌಜನ್ಯ ಅವರು ಸ್ವಾಗತ ಭಾಷಣ ಮಾಡಿದರು. ಅವರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
 ಮುಖ್ಯ ಅತಿಥಿಯನ್ನು ಉಪನ್ಯಾಸಕಿ ಅರ್ಪಿತಾ ಪರಿಚಯಿಸಿದರು.
ಕಾರ್ಯಕ್ರಮಕ್ಕೆ  .
ಕಾರ್ಯಕ್ರಮವನ್ನು ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿ ತಸ್ಮಿಯಾ ಬಾನು ಅವರು ನಿರ್ವಹಿಸಿದರು. ಪ್ರಥಮ ವರ್ಷದ ಎ ಎಚ್ ಎಸ್ ವಿದ್ಯಾರ್ಥಿನಿ ಶ್ವೇತಾ ಅವರು ಧನ್ಯವಾದ ಅರ್ಪಣೆ ಮಾಡಿದರು.
ಐ ಎಂ ಜೆ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್ ಸಂಸ್ಥೆಗಳ ಪ್ರಾಚಾರ್ಯರಾದ ಪ್ರೊ. ಹೇಮಲತಾ ಅವರು ಸಹ  ಹಾಜರಿದ್ದು, ಸೆಮಿನಾರ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಸುಮಾರು 30 ವಿದ್ಯಾರ್ಥಿಗಳು ಈ ಸೆಮಿನಾರ್ ನಲ್ಲಿ ತಮ್ಮ ಆಯ್ದ ವಿಷಯಗಳನ್ನು ಮಂಡಿಸಿದರು.

ತೊಟ್ಟಂ ; ಸಂತ ಅನ್ನಮ್ಮನವರ ನವೀಕೃತ ಚಾಪೆಲ್ ಆಶೀರ್ವಚನೆ ಉದ್ಘಾಟನೆ

Inauguration and Blessing of the Renovated St Anne Chapel, Thottam

ಮದರ್ ತೆರೇಸಾ ಶಾಲೆ; ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ

ಬೈಂದೂರು ; ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಟ್ಟಡ ಕಾರ್ಮಿಕರಿಂದ ಮುಷ್ಕರ

ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಲೂರ್ದ ಮಾತೆಯ ಹಬ್ಬದ ಆಚರಣೆ