

ಕೋಟ; ಸಂಗೀತ ಶಿಕ್ಷಕಿ ಶ್ರೀಮತಿ ಭಾಗ್ಯೇಶ್ವರಿ ಜಿ ಮಯ್ಯ ರವರ ನೇತೃತ್ವದ ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ರವರ ವತಿಯಿಂದ ಮೂರು ದಿನಗಳ ನಾದ ಸಂಗೀತ ಲಹರಿ ಬೇಸಿಗೆ ಸಂಗೀತ ಶಿಬಿರ ಕೋಟದ ಮಹಿಳಾ ಮಂಡಳಿಯಲ್ಲಿ ಸಂಪನ್ನಗೊಂಡಿತು.
ಉಡುಪಿಯ ವಿದ್ವಾನ್ ಮದೂರು ಪಿ ಬಾಲಸುಬ್ರಹ್ಮಣ್ಯಂ ರವರುಈ ಸುಂದರ ಕಾರ್ಯವನ್ನು ದೀಪಜ್ವಲನೆಯ ಮೂಲಕ ಉದ್ಘಾಟಿಸಿದರು. ಕೋಟ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ಎ ಕುಂದರ್, ಖಜಾಂಚಿ ಶ್ರೀಮತಿ ಸುಶೀಲಾ ಸೋಮಶೇಖರ್ ರವರು ಉದ್ಘಾಟನಾ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದು ಸಂಗೀತ ಶಿಬಿರಕ್ಕೆ ಶುಭ ಹಾರೈಸಿದರು. ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಪುರದ ಕೃಷಿಕರಾದ ಶ್ರೀ ರಂಗನಾಥ ಉಡುಪರು ವಹಿಸಿದ್ದರು.
ಮಣಿಪಾಲದ ವಿದುಷಿ ಉಷಾ ಹೆಬ್ಬಾರ್, ಕೋಟೇಶ್ವರದ ಸಂಗೀತ ಶಿಕ್ಷಕಿ ಶ್ರೀಮತಿ ಸುಧಾ ರಾಜಗೋಪಾಲ, ಬ್ರಹ್ಮಾವರದ ಸಂಗೀತ ಶಿಕ್ಷಕಿ ಶ್ರೀಮತಿ ಪಲ್ಲವಿ ಕೆದ್ಲಾಯ, ಮತ್ತೋರ್ವ ಸಂಗೀತ ಶಿಕ್ಷಕಿ ಶ್ರೀಮತಿ ಆಶಾ ತಿಮ್ಮಪ್ಪ ರವರುಗಳು ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಶಿಬಿರಾರ್ಥಿಗಳಿಗೆ ಸಾಕಷ್ಟು ಭಕ್ತಿ ಗೀತೆ, ಭಾವಗೀತೆ, ಶಿಶು ಗೀತೆ, ಶಾಸ್ತಿçÃಯ ಸಂಗೀತ, ಸುಗಮ ಸಂಘೀತಗಳನ್ನು ಕಲಿಸಿ ಕೊಡುವ ಮೂಲಕ ನಾದ ಸಂಗೀತ ಲಹರಿಯನ್ನೇ ಹರಿಸಿದರು. ವಿದ್ವಾನ್ ಮದೂರು ಪಿ ಬಾಲಸುಬ್ರಹ್ಮಣ್ಯಂ ರವರ ಸುಮಧುರ ಕಂಠದಿAದ ಹಾಡಿದ ಗೀತೆಗಳನ್ನು ಕಲಿಯುವ ಮೂಲಕ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 07.05.2026 ರಂದು ಜರುಗಿತು.
ಸಂಗೀತ ಕಲಿಕೆ ಯೊಂದಿಗೆ ಶಿಬಿರಾರ್ಥಿಗಳಿಗೆ ಮನರಂಜನಾ ಆಟಗಳನ್ನೂ ಏರ್ಪಡಿಸಲಾಗಿತ್ತು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಿತು. ಶಿಬಿರದ ಮೂರೂ ದಿನವು ಶ್ರೀಯುತ. ಜಿ ಗೋಪಾಲ ಕೃಷ್ಣ ಮಯ್ಯ ರವರು ಕಾರ್ಯಕ್ರಮ ನಿರ್ವಹಣೆಯನ್ನು ನೆರವೇರಿಸಿದರು. ಶ್ರೀಮತಿ ಸ್ಮಿತಾ ರಾವ್, ಶ್ರೀಮತಿ ಜ್ಯೋತಿ ಕೆದ್ಲಾಯ, ಶ್ರೀಮತಿ ಸಂಧ್ಯಾ ಪೈ ಮತ್ತಿತರರು ಸಹಕರಿಸಿದರು, ಒಟ್ಟಾರೆ ಕೋಟ ಪರಿಸರವು ಮೂರು ದಿನಗಳು ನಾದ ಸಂಗೀತದ ರಸದೌತಣ ಪಡೆಯಿತು.

