

ಶ್ರೀನಿವಾಸಪುರ : ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಮಹಿಳೆಯರನ್ನ ಅರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನ ಸದ್ಭಳಿಕೆ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಬಿಸಿಎಂ ಕಾರ್ಪರೇಷನ್ ಇಲಾಖೆ ವತಿಯಿಂದ ಉಚಿತವಾಗಿ ಅರ್ಹ ಫಲಾನುಭಿವಿಗಳಿಗೆ 14 ಹೊಲಿಗೆ ಯಂತ್ರ ವಿತರಸಿ ಮಾತನಾಡಿದರು.
ಪಶ್ಚಿಮ ಬಂಗಳಾದಲ್ಲಿ 15 ವರ್ಷಗಳಿಂದ ಆಡಳಿತವನ್ನ ನಡೆಸಿರುವ ಟಿಎಂಸಿಯ ಮಮತ ಬ್ಯಾನರ್ಜಿರವರ ಆಡಳಿತವನ್ನು ಕೊನೆಗಳಿಸಿ, ಬಿಜೆಪಿ ಪಕ್ಷವು ಅತಿ ಹೆಚ್ಚು ಬಹುಮತವನ್ನು ಪಡೆದು ಆಡಳಿತ ಚುಕ್ಕಾಣಿಯನ್ನು ಹಿಡಿಯುತ್ತಿರುವುದು ದೇಶದ ಜನರ ಗಮನಸಳೆಯುತ್ತಿದೆ ಎಂದರು. ಇದು ಶುಭ ಸೂಚನೆ. ಈ ರಾಜ್ಯದ ಭವಿಷ್ಯವು ಮತದಾರರ ಕೈಯಲ್ಲಿ ಇದೆ ಮುಂದಿನ 2 ವರ್ಷದಲ್ಲಿ ನಡೆಯುವ ಚುನಾವಣೆಯಲ್ಲಿ ತಮ್ಮ ಶಕ್ತಿಯನ್ನು ತೋರಿಸುತ್ತಾರೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಬರಲಿದೆ ಖಂಡಿತ ಬರುತ್ತದೆ ಎಂದು ಭವಿಷ್ಯವನ್ನು ನುಡಿದರು. ನಮ್ಮ ಕಾಂಗ್ರೆಸ್ ಸ್ನೇಹಿತರೇ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವುದಿಲ್ಲವೆಂದು ಹೇಳುತ್ತಾರೆ ಎಂದರು.
ಸಧ್ಯ ತಾಲೂಕಿನಲ್ಲಿ ನಾನು , ನನ್ನ ಅವಧಿಯಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಯಾರಾರು ಅಡ್ಡಪಡಿಸುತ್ತಿದ್ದಾರೆ ಅವರಿಗೆಲ್ಲಾ ಮತದಾರರು ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಸಿಎಂ ಕಾರ್ಪರೇಷನ್ ಅಧಿಕಾರಿ (ಎಡಿಒ) ಚಲಪತಿ, ಕಂದಾಯ ಅಧಿಕಾರಿ ಎನ್.ಶಂಕರ್, ಮುಖಂಡರಾದ ಪೊಲ್ಶಿವಾರೆಡ್ಡಿ, ಕಾರ್ಶ್ರೀನಾಥಬಾಬು, ಶ್ರೀನಿವಾಸಪ್ಪ, ಸಿ.ರವಿ, ಬಿಂದು ಶ್ರೀನಿವಾಸರೆಡ್ಡಿ ಹಾಜರಿದ್ದರು.

