HOLY ROSARY CHURCH, KUNDAPUR – 450 th JUBILEE SOUVENIR 2021

ಪಠ್ಯ–ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವೃದ್ಧಿ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅವರಲ್ಲಿ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದು ತಾಲ್ಲೂಕು ಯೋಜನಾಧಿಕಾರಿ (ಟಿಪಿಒ) ಎಸ್. ವೆಂಕಟಸ್ವಾಮಿ ಹೇಳಿದರು. ತಾಲೂಕಿನ ಯಲ್ದೂರು ಗ್ರಾಮದಲ್ಲಿನ ಶ್ರೀ ಶ್ರೀನಿವಾಸ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅಂತರ್‌ಶಾಲಾ ರಸಪ್ರಶ್ನೆ ಸ್ಪರ್ಧೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಆಸಕ್ತಿ ಮತ್ತು ಶ್ರಮದಿಂದ ವಿದ್ಯೆ ಕಲಿಯುವವರಿಗೆ ಮಾತ್ರ ಅದು ಒಲಿಯುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬಾರದು. ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿದ್ದು, ಪ್ರತಿಯೊಬ್ಬ ಮಗುವಿನಲ್ಲಿಯೂ ತಮ್ಮದೇ ಆದ ಸಾಮರ್ಥ್ಯ ಹಾಗೂ ಜ್ಞಾನ ಅಡಗಿದೆ. ಅದನ್ನು ಗುರುತಿಸಿ ಜಾಗೃತಿಯಿಂದ ಮಕ್ಕಳನ್ನು ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎನ್. ರವೀಂದ್ರನಾಥ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಶ್ರಮ ಅಗತ್ಯ. ವಿದ್ಯಾರ್ಥಿಗಳು ತಮ್ಮ ಮುಂದಿನ ಗುರಿ ಹಾಗೂ ಆಸಕ್ತ ಕ್ಷೇತ್ರವನ್ನು ಮೊದಲೇ ಆಯ್ಕೆ ಮಾಡಿಕೊಂಡು, ಅದಕ್ಕೆ ಸಂಬಂಧಿಸಿದ ಪಠ್ಯಕ್ರಮವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕು. ಶಿಸ್ತು, ಸಂಯಮ ಹಾಗೂ ಆತ್ಮನಿಯಂತ್ರಣದೊಂದಿಗೆ ನಿರಂತರ ಅಭ್ಯಾಸವೇ ಯಶಸ್ಸಿನ ಮೂಲಮಂತ್ರ ಎಂದು ಹೇಳಿದರು.
ಶಿಕ್ಷಣಪ್ರೇಮಿ ಜೆ. ಎಸ್. ಮಣಿ ಮಾತನಾಡಿ, ವಿದ್ಯಾರ್ಥಿಗಳು ಕಾಲಹರಣ ಮಾಡದೆ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ಪೋಷಕರ ವಿಶ್ವಾಸ ಮತ್ತು ಭರವಸೆಯನ್ನು ನೆರವೇರಿಸುವಂತೆ ಪರಿಶ್ರಮ ಪಡಬೇಕು. ಹಿರಿಯರ ಆದರ್ಶವನ್ನು ಅನುಸರಿಸಿ ದೊರಕುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಆರ್. ಅಮರೇಶ್, ಶಿಕ್ಷಣಪ್ರೇಮಿಗಳಾದ ಟಿ. ಎಸ್. ನಾಗರಾಜ್, ವಿ. ರಾಮಂಜಿ, ಎಸ್. ಲಕ್ಷ್ಮಣಬಾಬು, ಕಿಶೋರ್, ಕೆ. ಪ್ರಕಾಶಯ್ಯ, ಕುವೆಂಪು ಪ್ರೌಢಶಾಲೆ ಮುಖ್ಯಶಿಕ್ಷಕ ವಿ. ನಾಗರಾಜ್, ಮುಳಬಾಗಿಲು ಜ್ಞಾನವಾಹಿನಿ ಶಾಲೆ ಶಿಕ್ಷಕ ಚಂದ್ರಶೇಖರ್, ಸರಸ್ವತಿ ಶಾಲೆ ಮುಖ್ಯಶಿಕ್ಷಕ ನಾಗರಾಜ್, ಶಾಲೆಯ ಮುಖ್ಯಶಿಕ್ಷಕ ಎನ್. ಆರ್. ರಮೇಶ್ ಸೇರಿದಂತೆ ಶಿಕ್ಷಕರಾದ ಶಶಿಕಲಾ, ರೂಪ, ಜವೇರಿಯಾ, ಅಂಜುಂ, ಆಯೆಷಾಖಾನಂ, ಶಮಾಸುಲ್ತಾನ, ಜಯರಾಜ್, ಆನಂದ್, ಮುನಿರತ್ನಮ್ಮ ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಮಹಿಳಾ ನೌಕರರಿಗೆ ಮಾಸಿಕ ಋತುಚಕ್ರ ರಜೆ 2026 ರಿಂದ ಜಾರಿ – ಮಹಿಳಾ ಕಲ್ಯಾಣದತ್ತ ಮಹತ್ವದ ಹೆಜ್ಜೆ

ಬಿಕರ್ನಕಟ್ಟೆ ಬಾಲಯೇಸು ಮಂದಿರದಲ್ಲಿ ಮಕ್ಕಳ ಆಶೀರ್ವಾದದೊಂದಿಗೆ ಪವಿತ್ರ ಮುಗ್ಧರ ಹಬ್ಬವನ್ನು ಆಚರಿಸಲಾಯಿತು

ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಸಂಪನ್ನಗೊಂಡ ‘ಬೆಡಗಿನ ಬೈಸಿರಿ’ ಕಾರ್ಯಕ್ರಮ

ಗಂಗೊಳ್ಳಿ : ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಕ್ರೀಡೋತ್ಸವ’ ಕಾರ್ಯಕ್ರಮ

ನಿರಂತರ ಸಾಹಿತ್ಯ ಪುರಸ್ಕಾರ”ಕ್ಕೆ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು ಆಯ್ಕೆ

ಜ್ಞಾನದಾ ಕಲಾ ವೈಭವ – 2025 15 ನೇ ಶಾಲಾ ವಾರ್ಷಿಕೋತ್ಸವ ಅದ್ದೂರಿ ಸಾಂಸ್ಕೃತಿಕ ಸಂಭ್ರಮಾಚರಣೆ

ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ದೇಶದಾದ್ಯಂತ ಕ್ರೈಸ್ತರ ಮೇಲಿನ ದಾಳಿಗೆ ಉಡುಪಿ ಧರ್ಮಪ್ರಾಂತ್ಯ ಖಂಡನೆ

ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

Joyful Christmas Celebration at St. Francis Assisi Church, Tallur