

ಗಂಗೊಳ್ಳಿ : ದಿನಾಂಕ 22-12-2025 ರಂದು ಸಂಜೆ ‘ಬೆಡಗಿನ ಬೈಸರಿ ‘ ಎಂಬ ಶೀರ್ಷಿಕೆಯಡಿಯಲ್ಲಿ ವೈಶಿಷ್ಟ್ಯ ಪೂರ್ಣವಾದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವಿಲ್ಲದೆ 7 ತಂಡಗಳಾಗಿ ‘ ತತ್ವಮಸಿ, ಚೈತನ್ಯಪಥ, ಮತ್ಸ್ಯ ಕನ್ಯೆಯರು, ಜಟಾಯು, ಸಿಂಧೂರ, ಸ್ಪೂರತ್ ಭಾನು, ಗೋವರ್ಧನ’ ಎಂಬ ಹೆಸರಿನೊಂದಿಗೆ ಹಂಚಿಕೆಯಾಗಿದ್ದು, ಪ್ರತಿಯೊಂದು ತಂಡವು ತನ್ನದೇಯಾದ ಮಾತುಗಾರಿಕೆ, ಅಭಿವ್ಯಕ್ತಿ, ನೃತ್ಯಗಳನ್ನೊಗೊಂಡ ವೈವಿಧ್ಯಪೂರ್ಣ ಕಾರ್ಯಕ್ರಮವನ್ನು ಪ್ರದರ್ಶಿಸಿತು. ಶಾಲಾವರಣದ ಮುಕ್ತ ರಂಗಮಂಟಪದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಶ್ರೀ ಪಿ ನರಸಿಂಹಮೂರ್ತಿ, ಶ್ರೀ ಪಿ ರಾಜೇಶ ಗಾಣಿಗ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಬೈಂದೂರು ವಲಯ, ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ಆಗಮಿಸಿ ‘ಲಾಟಿನ್’ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ನವೀನ ಶೈಲಿಯಲ್ಲಿ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಭ. ಕ್ರೆಸೆನ್ಸ್, ಜಂಟಿ ಕಾರ್ಯದರ್ಶಿ ಭ. ಗ್ರೇಸಿ ಲೋಬೊ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾಂತಿ ಖಾರ್ವಿ ಮತ್ತು ಸಂಘದ ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಪಠ್ಯ, ಪಠ್ಯೇತರ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯನಿ ಸ್ವಾಗತಿಸಿದರು ಶಿಕ್ಷಕ ಗಣೇಶ ಹೆಬ್ಬಾರ್ ನಿರೂಪಿಸಿದರು.








