

ಗಂಗೊಳ್ಳಿ :ದಿನಾಂಕ 23-12-2025 ರಂದು ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಅಣ್ಣಪ್ಪ ಶೆಟ್ಟಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ” ಶಿಕ್ಷಣದಲ್ಲಿ ಕ್ರೀಡೆ ಮತ್ತು ಶಿಸ್ತು ಅಗತ್ಯ ಮತ್ತು ಶಿಸ್ತಿಗೆ ಇನ್ನೊಂದು ಹೆಸರು ಈ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ” ಎಂದು ಮಾತನಾಡಿದರು. ಶಾಲಾ ಜಂಟಿ ಕಾರ್ಯದರ್ಶಿ ಭ. ಗ್ರೇಸಿ ಲೋಬೊ ಕ್ರೀಡಾಧ್ವಜವನ್ನು ಆರೋಹಣಗೈದರು. ಸಹಾಯಕ ಮುಖ್ಯೋಪಾಧ್ಯಾಯಿನಿ ಭ. ಆನೆಟ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಪೂರ್ಣ ಹೊಣೆಗಾರಿಕೆಯನ್ನು ಹೊತ್ತ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಯುತ ಪ್ರಣಯಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸತ್ಯ, ಶಾಂತಿ, ಜ್ಯೋತಿ ಎಂಬ ತಂಡಗಳಾಗಿ ಬಾವುಟವನ್ನು ಹಿಡಿದು ಪಥ ಸಂಚಲನ ಮಾಡಿದರು. ಅತಿಥಿ ಗಣ್ಯರು ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಶ್ರೀಯುತ ಅಣ್ಣಪ್ಪ ಶೆಟ್ಟಿಯವರಿಗೆ ಕ್ರೀಡಾ ಕ್ಷೇತ್ರದ ಸಾಧನೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾಂತಿ ಖಾರ್ವಿ, ಶ್ರೀಯುತ ಮಂಜುನಾಥ್ ಕಬಡ್ಡಿ ಕ್ರೀಡಾಪಟು, ಶಿಕ್ಷಕ ಶಿಕ್ಷಕೇತರವೃಂದದವರು ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಮತಿ ಶಾಂತಿ ಕ್ರಾಸ್ತ ಕಾರ್ಯಕ್ರಮ ನಿರೂಪಿಸಿದರು ಮತ್ತು ಗಣೇಶ ಹೆಬ್ಬಾರ್ ವಂದಿಸಿದರು.


