

ಪಡುಕೋಣೆ: ದಿನಾಂಕ 14/8/2025 ರಂದು (Prison Ministery India)ಸೆರೆಮನೆಯ ಲ್ಲಿದ್ದ ಕೈದಿಗಳ ಪಾಲಕರಾದ ಸಂತ ಮೆಕ್ಸಿ ಮಿಲಿಯನ್ ಕೊಲ್ಬೆ ಯವರ ಹಬ್ಬವನ್ನು 40 ವರ್ಷಗಳ ಹಿಂದೆ ಕೇರಳದಲ್ಲಿ ಒಂದು ಸಂಘಟನೆ ವಾರ್ಷಿಕ ದಿನಾಚರಣೆಯನ್ನು ಪ್ರಾರಂಭಿಸಲಾಯಿತು. ಈ ಸಂಸ್ಥೆಯ ಉದ್ದೇಶ ಕಾರಾಗೃಹದಲ್ಲಿದ್ದ ಕೈದಿಗಳನ್ನು ಭೇಟಿ ಮಾಡಿ ಅವರ ಅವಶ್ಯಕತೆಯನ್ನು ಕೇಳಿ ಸಹಾಯ ಹಸ್ತವನ್ನು ನೀಡುವುದು. ಈ ಸಂಘಟನೆಯು ನಮ್ಮ ಉಡುಪಿ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ ಸಂಘಟನೆಯಲ್ಲಿ 15 ಮಂದಿ ಸದಸ್ಯರು ತಿಂಗಳಿಗೊಮ್ಮೆ ಸಭೆ ಸೇರಿ, ಚರ್ಚಿಸಿ, ಹಿರಿಯಡ್ಕ ಜೈಲಿಗೆ ಹೋಗಿ ಅಲ್ಲಿನ ಕೈದಿಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಅರಿತು, ಅವರಿಗೆ ಜಾಮೀನು ಸಿಗುವಂತೆ ಮಾಡಲು ಪ್ರಯತ್ನಿಸುವುದು.
ಹಾಗೂ ಅವರ ಕುಟುಂಬ ಗಳಿಗೆ ಸಂಪರ್ಕ ಆಗುವಂತೆ ಮಾಡಲು ಪ್ರಯತ್ನಿಸುವುದು. ಮತ್ತು ಕೈದಿಗಳಿಗೆ ಧೈರ್ಯ ತುಂಬಿಸಿ ಉತ್ತಮ ಮಾರ್ಗದರ್ಶನ ನೀಡಿ ಅವರೊಂದಿಗೆ ಸಮಾಲೋಚನೆ ಮಾಡಿ ಮನಪರಿವರ್ತನೆ ಮಾಡಲು ಸಲಹೆ ನೀಡುವುದು. ಅವರ ಆತ್ಮೀಕ ಹಾಗೂ ಲೌಕಿಕ ಅಗತ್ಯತೆ ಮತ್ತು ಹಬ್ಬದ ದಿನಗಳಲ್ಲಿ ಕೆಲವೊಮ್ಮೆ ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಹಬ್ಬಗಳು, ಹಾಗೂ ಇತರ ಪ್ರಮುಖ ದಿನಗಳಲ್ಲಿ ಭೇಟಿ ನೀಡಿ,ಅವರ ಜೊತೆಗೂಡಿ ಆಚರಿಸುವರು. ಈ ಸಂಸ್ಥೆಯವರು ಅವರ ವಾರ್ಷಿಕ ದಿನಾಚರಣೆಯನ್ನು ಈ ವರ್ಷ ಸಂತ ಅಂತೋನಿ ಚರ್ಚಿನಲ್ಲಿ ಆಚರಿಸಲಾಯಿತು.
ಬಲಿಪೂಜೆಯ ನಂತರ ಚಿಕ್ಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.ಉಡುಪಿಯ P.M.I.ಸಂಘದ 10 ಮಂದಿ ಸದಸ್ಯರು, ಸಂತ ವಿನ್ಸೆಂಟ್ ಪಾವ್ಲ್ ಸೊಸೈಟಿಯ ಸದಸ್ಯ ರು, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಹಾಗೂ ಇತರ ಕಾರ್ಯಕರ್ತರು ಹಾಜರಿದ್ದರು. ಇವರೆಲ್ಲರ ಜೊತೆಗೂಡಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸತತ ಪಡುಕೋಣೆ ಚರ್ಚಿನಲ್ಲಿ 7 ವರ್ಷ ಅಧ್ಯಾತ್ಮಿಕ ರಾಗಿ ಸೇವೆ ಸಲ್ಲಿಸಿದ ವಂ। ಫಾ।ಫ್ರಾನ್ಸಿಸ್ ಕರ್ನೆಲಿಯೊರವರನ್ನು ಅಭಿನಂದಿಸಿ, ಅವರು ಮಾಡಿದ ಸೇವೆಯನ್ನು ಪ್ರಶಂಸಿ, ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು P.M.I ಅಧ್ಯಕ್ಷರಾದ ರೊಸಾರಿಯೊ ಡಿ’ಸೋಜ (ನಿವೃತ್ತ ಫೋಲಿಸ್ ಅಧಿಕಾರಿ) ರವರು ವಹಿಸಿದರು. ವಂದನೀಯ ಫಾ।ರೆಜಿನಾಲ್ಡ್ ಪಿಂಟೋ ರವರು ಸನ್ಮಾನಿತ ಫಾ। ಫ್ರಾನ್ಸಿಸ್ ಕರ್ನೆಲಿಯೊ ರವರಿಗೆ ಶುಭ ನುಡಿಗಳನ್ನು ನುಡಿದು, ಅವರು ಮಾಡಿದ ಉತ್ತಮ ಸೇವೆಯನ್ನು ಶ್ಲಾಘಿಸಿದರು. P.M.I.ಸಂಘದ ಕಾನೂನುಸಲಹೆಗಾರ ರಾದ ಸಿ.ಮೆಲನಿಯಾ ವೇದಿಕೆಯಲ್ಲಿದ್ದರು.
P.M.I ಅಧ್ಯಕ್ಷರಾದ ರೊಸಾರಿಯೊ ಡಿ’ಸೋಜ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ವಾಲ್ಟರ್ ಮಾರ್ಟಿಸ್ ಧನ್ಯವಾದ ನೀಡಿದರು. ಗ್ರೇಶನ್ ಬುತ್ತೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.











