

ಸಂತ ಜೊಸೆಫರ ಇಗರ್ಜಿ ಕೋಟ ದಲ್ಲಿ ಸ್ವಾತಂತ್ರ್ಯೊತವ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರಂಭದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು ಹಾಗು ದೇಶಕ್ಕಾಗಿ ವಿಶೇಶವಾಗಿ ಪ್ರಾರ್ಥಿಸಲಾಯಿತು.
ನಂತರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಐ.ಸಿ.ವೈ.ಎಮ್ ಅಧ್ಯಕ್ಶರಾದ ಶಾವ್ನ್ ಫೆರ್ನಾಂಡಿಸ್, ಧಜಾರೋಹಣ ಮಾಡಿದರು. ಕಥೊಲಿಕ್ ಸಭಾ ಆಧ್ಯಕ್ಶರಾದ ಹೆರಾಲ್ಡ್ ಫೆರ್ನಾಂಡಿಸ್ ಸ್ವಾಗತ ಭಾಶಣ್ ಮಾಡಿದರು. ಗಾಯನ ಮಂಡಳಿಯವರು ದೇಶ ಭಕ್ತಿ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಾಕ್ರಮದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಇಂಜಿನಿಯರಿಂಗ್ ಪದವಿ ತೇಗ್ರಡೆಯಾದ ಶಾವ್ನ್ ಫೆರ್ನಾಂಡಿಸ್ ಹಾಗು ಪಿ.ಯು.ಸಿ ಪರೀಕ್ಶೆಯಲ್ಲಿ 93% ಅಂಕಗಳೊಂದಿಗೆ ತೇರ್ಗಡೆಯಾದ ರಿಕ್ಸನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಕಾರ್ಯದರ್ಶಿ ಶಾಂತಿ ಕ್ರಾಸ್ತಾರವರು ಧನ್ಯವಾದ ಸಮರ್ಪಿಸಿದರು. ರಿಯಾ ಪಿಕಾರ್ಡೊ ರವರು ಕಾರ್ಯಕ್ರಮವನ್ನು ನಿರುಪಣೆ ಮಾಡಿದರು. ಮ್ಯಾಕ್ಸಿಮ್ ಡಯಾಸ್ ಹಾಗು ಕುಟುಂಬದವರು ಕೊಡಮಾಡಿದ ಸಿಹಿ ತಿಂಡಿಯನ್ನು ವಿತರಿಸಲಾಯಿತು.

























