ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಮದುವೆಯಾಗುವಂತೆ ಒತ್ತಾಯಿಸಿದಾಗ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಹುಣಸಮಾರನಹಳ್ಳಿಯ ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ಶ್ರೀಗುರು ನಂಜೇಶ್ವರ ಶಿವಾಚಾರ್ಯ ಮಹಾಸ್ವಾಮಿ ಅಲಿಯಾಸ್ ದಯಾನಂದ (45) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರು ಹಿನ್ನೆಲೆಯಲ್ಲಿ ಹುಣಸಮಾರನಹಳ್ಳಿ […]
ಸೆಪ್ಟೆಂಬರ್ 11 ರಂದು ಘೋಷಿಸಲಾದ ಕರಡು ಪರೀಕ್ಷಾ ವೇಳಾಪಟ್ಟಿಗೆ ವಿದ್ಯಾರ್ಥಿಗಳಿಂದ ಯಾವುದೇ ಆಕ್ಷೇಪಣೆಗಳು ಬಂದಿರಲಿಲ್ಲ ಎಂದು ಕಾಲೇಜು ತಿಳಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಸೇಂಟ್ ಆಗ್ನೆಸ್ ಕಾಲೇಜಿನ ಒಂದು ವರ್ಗದ ವಿದ್ಯಾರ್ಥಿಗಳು, ಮುಖ್ಯವಾಗಿ ಹುಡುಗಿಯರು, ದಸರಾಸಮಯದಲ್ಲಿ ಅಡ್ಡ-ಸೆಮಿಸ್ಟರ್ ಪದವಿಪೂರ್ವ ಪರೀಕ್ಷೆಗಳನ್ನು ನಡೆಸುವುದನ್ನು ವಿರೋಧಿಸಿ ಸೋಮವಾರ (ಅಕ್ಟೋಬರ್ 12) ಕಾಲೇಜು ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು. ಕ್ರಿಸ್ಮಸ್ ಸಮಯದಲ್ಲಿ ರಜೆ ಘೋಷಿಸುವಾಗ ದಸರಾ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸಿದ್ದಕ್ಕಾಗಿ ಅವರು ಕಾಲೇಜಿಗೆ ಪ್ರಶ್ನೆ ಮಾಡಿದರು.ಪೊಲೀಸರು ಕೆಲವು ಎಬಿವಿಪಿ […]
Ursuline Franciscan Educational Society’s SCAF Convention Inspires 150 Students to Lead Social Change ಹುಣಸೂರು, ಅಕ್ಟೋಬರ್ 11: ಮಂಗಳೂರಿನ ಉರ್ಸುಲಿನ್ ಫ್ರಾನ್ಸಿಸ್ಕನ್ ಎಜುಕೇಶನಲ್ ಸೊಸೈಟಿ (ರಿ) ತನ್ನ ಮೂರು ದಿನಗಳ ಸಾಮಾಜಿಕ ಬದಲಾವಣೆ ಏಜೆಂಟ್ಸ್ ಫೋರಮ್ (SCAF) ಸಮಾವೇಶ 2026 ಅನ್ನು ಮೈಸೂರಿನ ಹುಣಸೂರಿನ ಸೇಂಟ್ ಜೋಸೆಫ್ ಸಂಸ್ಥೆಗಳಲ್ಲಿ ಮುಕ್ತಾಯಗೊಳಿಸಿತು, ಯುವಜನರು ಹೆಚ್ಚು ನ್ಯಾಯಯುತ, ಸಹಾನುಭೂತಿಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸುವಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಹೊಸ ಕರೆಯನ್ನು ನೀಡಿತು.“ಬದಲಾವಣೆಯನ್ನು ಚಾಲನೆ ಮಾಡಿ, […]
ಕುಂದಾಪುರ: ತಾಲೂಕಿನ ಆರಾಟೆ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರಗಾಯಗೊಂಡು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸದೆ. ಮೃತರನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಿಂದುಗಡೆಯ ಜೆ.ಎಲ್.ಬಿ. ರಸ್ತೆಯ ನಿವಾಸಿ ಅಜಿತ್ ಪೌಲ್ ಲೂಯಿಸ್ ಎಂದು ಗುರುತಿಸಲಾಗಿದೆ. ಅಜಿತ್ ಪೌಲ್ ಲೂಯಿಸ್ ಅವರು ಕುಂದಾಪುರದಿಂದ ತ್ರಾಸಿ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ, ತ್ರಾಸಿ ಕಡೆಯಿಂದ ಕುಂದಾಪುರದತ್ತ ಬರುತ್ತಿದ್ದ ಬಾಡಿಗೆ ಕಾರು ನೇರ ಡಿಕ್ಕಿ ಹೊಡೆದಿದೆ. […]
ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ವಾರ್ಷಿಕೋತ್ಸವ ಅಕ್ಟೋಬರ್ 11ರಂದು ರವಿವಾರ ವಿಜೃಂಭಣೆಯಿಂದ ನಡೆಯಿತು.ಹಬ್ಬದ ಸಾಂಭ್ರಮಿಕ ಬಲಿ ಪೂಜೆಯ ನೇತೃತ್ವವನ್ನುಉಡುಪಿ ಧರ್ಮ ಪ್ರಾಂತ್ಯದ ಮದರ್ ಒಫ್ ಚರ್ಚ್ ನ ವಂದನೀಯ ಡೆನ್ನಿಸ್ ಅಲೆಕ್ಸಾoಡರ್ ಡೇಸಾ ಅವರು ವಹಿಸಿ ಚರ್ಚ್ ನ ಪೋಷಕಿ ಮದರ್ ತೆರೆಸಾ ಅವರ ಮೌಲ್ಯಾಧಾರಿತ ಜೀವನವನ್ನು ನೆನಪಿಸಿದ ಅವರು ಪ್ರತಿಯೊಬ್ಬ ಭಕ್ತರು ಕೂಡಾ ತಮ್ಮ ಜೀವನದಲ್ಲಿ ತೆರೆಸಾ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳ ಬೇಕೆಂದು ಹೇಳಿದರು.ಅವರು ಬಡ ಬಗ್ಗರ ಮತ್ತು ನಿರ್ಗತಿಕರ ಸೇವೆ […]
SCAF Convention 2026 Begins at Hunsur, Mysuru with a Call to Build a New Society ಹುಣಸೂರು, ಅಕ್ಟೋಬರ್ 9: ಮಂಗಳೂರಿನ ‘ಅರ್ಸುಲಿನ್ ಫ್ರಾನ್ಸಿಸ್ಕನ್ ಎಜುಕೇಷನಲ್ ಸೊಸೈಟಿ’ (UFES) ಆಯೋಜಿಸಿರುವ ‘ಸೋಷಿಯಲ್ ಚೇಂಜ್ ಏಜೆಂಟ್ಸ್ ಫೋರಮ್’ (SCAF) ಸಮ್ಮೇಳನ 2026, ಶುಕ್ರವಾರದಂದು ಮೈಸೂರಿನ ಹುಣಸೂರಿನಲ್ಲಿರುವ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳಲ್ಲಿ “ಬದಲಾವಣೆಗೆ ಚಾಲನೆ ನೀಡಿ, ಭವಿಷ್ಯವನ್ನು ರೂಪಿಸಿ” (Drive the Change, Build the Future) ಎಂಬ ಧ್ಯೇಯವಾಕ್ಯದೊಂದಿಗೆ ಆರಂಭಗೊಂಡಿತು. ದಕ್ಷಿಣ ಭಾರತದ […]
ನವಲಗುಂದ ಬಳಿ ಭೀಕರ ಅಪಘಾತ: ಲಾರಿ-ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದ ದಾರುಣ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಹುಬ್ಬಳ್ಳಿಯಿ೦ದ ವಿಜಯಪುರದ ಕಡೆಗೆಪ್ರಯಾಣಿಸುತ್ತಿದ್ದ ಕಾರಿಗೆ, ಎದುರಿನಿ೦ದ ಅತಿವೇಗವಾಗಿ ಬ೦ದ ಕ್ಯಾ೦ಟರ್ ಲಾರಿ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಬದಿಗೆ ಎಸೆಯಲ್ಪಟ್ಟು ಸ೦ಪೂರ್ಣವಾಗಿ ನಜ್ನ್ಮುಗುಜ್ನಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆಹೊರಬರಲು ಕೂಡ ಸಾಧ್ಯವಾಗದಷ್ಟು ವಾಹನ ಜಖ೦ಗೊಂ೦ಡಿತ್ತು. ಅಪಘಾತದಲ್ಲಿ ಮೃತಪಟ್ಟವರನ್ನು ಅಜಿತ್(32), ರಾಕೇಶ (22), ಸ೦ದೀಪ್ (33) ಮತ್ತು ಶೃತಿ (28) […]
ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ “ಕಾರ್ಮೆಲ್ ಧ್ಯಾನ ನಿಧಿ” ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಭಗಿನಿ ಸುಗುಣ ಇವರು ಕಾರ್ಯಕ್ರಮವನ್ನು (08-10-2026) ಉದ್ಘಾಟಿಸಿ, ಪ್ರಾರ್ಥನೆ ಮತ್ತು ಧ್ಯಾನ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿ ಇವರು “ದೇವರು ನನಗೆ ಯಾರು?” ವಿಷಯದ ಬಗ್ಗೆ ಪಿ ಪಿ ಟಿ ಯ ಮೂಲಕ ಮಾಹಿತಿ ನೀಡಿದರು. ಶಾಲಾ ಶಿಕ್ಷಕಿ ಶೀಲತಾ ಇವರು “ಗುರಿ ಆಧಾರಿತ ಆಯ್ಕೆಗಳು” ವಿಷಯವಾಗಿ, ಶಾಲಾ ಹಿರಿಯ ಶಿಕ್ಷಕರಾದ ಮೈಕಲ್ […]
05.10.2026 “ಮಾತಿನ ಗುಣಮಟ್ಟವನ್ನು ಎತ್ತರಿಸು, ಧ್ವನಿಯನ್ನಲ್ಲ. ಮಳೆಯಿಂದ ಹೂವು ಅರಳುತ್ತದೆಯೇ ಹೊರತು ಗುಡುಗಿನಿಂದಲ್ಲ” -ರೂಮಿ ಮಾನವರಾಗಿ ಹುಟ್ಟಿದ ಮೇಲೆ ಜೀವನ ನಿರ್ವಹಣೆಗೆ ಏನಾದರೂ ಉದ್ಯೋಗ ಮಾಡಲೇಬೇಕೆನ್ನುವುದು ಸಾಮಾಜಿಕ ನಿಯಮ. ಕೆಲವರಿಗೆ ಯಾವುದಾದರೂ ಉದ್ಯೋಗ ಮಾಡುವುದಕ್ಕಿಂತ ಹೃದಯಕ್ಕೆ ಹತ್ತಿರವಾದ ಕೆಲಸ ಮಾಡುವುದರಿಂದ ಜೀವನ ನಿರ್ವಹಣೆ ಜತೆ ಮನಸ್ಸಿಗೆ ಸಂತೋಷವೂ ಆಗುತ್ತದೆ. ಆ ರೀತಿಯಲ್ಲಿ ಖುಷಿ, ತೃಪ್ತಿ ಕೊಟ್ಟ ಪತ್ರಿಕಾ ವೃತ್ತಿಗೆ ನಾನು ಸೇರಿ 2026 ಅಕ್ಟೋಬರ್ 5ಕ್ಕೆ 40 ವರ್ಷ ಪೂರ್ಣ. 1986 ಅಕ್ಟೋಬರ್ 5ರಂದು ಮುಂಗಾರು’ ದೈನಿಕದ […]

