ಶ್ರೀನಿವಾಸಪುರ : ದೇಶದ ಪ್ರಮುಖ ಮಾವು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಹೆಸರುವಾಸಿಯಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಮತ್ತೆ ಮಾವಿನ ಸೀಸನ್‌ಗೆ ಸಜ್ಜಾಗಿದ್ದು, ಮೇ 15ರಿಂದ ಅಧಿಕೃತವಾಗಿ ಮಾವಿನ ಮಾರುಕಟ್ಟೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹಬ್ಬದಂತ ವಾತಾವರಣ ನಿರ್ಮಾಣವಾಗಿದ್ದು, ರೈತರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರು ಹೊಸ ನಿರೀಕ್ಷೆಗಳೊಂದಿಗೆ ಸೀಸನ್‌ಗೆ ಎದುರು ನೋಡುತ್ತಿದ್ದಾರೆ. ಸುಮಾರು 65 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆಯುವ ಶ್ರೀನಿವಾಸಪುರ, ‘ಮಾವಿನ ನಾಡು’ ಹಾಗೂ ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಸಂಪೂರ್ಣವಾಗಿ […]
ಶ್ರೀನಿವಾಸಪುರ : ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ಭಾರೀ ಸಂಭ್ರಮಾಚರಣೆ ನಡೆಯಿತು. ಪಟ್ಟಣದ ಇಂದಿರಾಭವನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಮಿಠಾಯಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಆರ್.ಎನ್. ಚಂದ್ರಶೇಖರ್, ಮೊದಲನೆಯದಾಗಿ ಮೂರು ರಾಜ್ಯಗಳ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೂರು ರಾಜ್ಯಗಳು ಬಿಜೆಪಿ ಪಕ್ಷದ ತಕ್ಕೆಗೆ ಬಂದಿರುವುದು ಶುಭ ಸೂಚನೆಯಾಗಿದೆ. ಪಟ್ಟಣದಲ್ಲಿ ಎಲ್ಲಾ ಕಾರ್ಯಕರ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಸಂಭ್ರಮಾಚರಣೆ ಹಮ್ಮಿಕೊಂಡಿದ್ದೇವೆ. […]
ಕೋಲಾರ:- ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಸುರೇಶ್ ಬಾಬು, ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ, ಅನಿಲ್ ಕುಮಾರ್ ನೇತೃತ್ವದ ತಂಡ ಎಲ್ಲಾ 20 ಸ್ಥಾನಗಳಲ್ಲೂ ಜಯಭೇರಿ ಬಾರಿಸುವ ಮೂಲಕ ಹಾಲಿ ನೌಕರರ ಸಂಘದ ಅಧ್ಯಕ್ಷ ಅಜಯ್‌ಕುಮಾರ್ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.ಚುನಾವಣೆ ನಡೆದ ಎಲ್ಲಾ 20 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ಅನಿಲ್‌ಕುಮಾರ್ ಹಾಗೂ ಶಿಕ್ಷಕ ಗೆಳೆಯರ ಬಳಗದ ತಂಡ ಗೆಲುವಿನ ನಗೆ ಬೀರಿದ್ದು, ಶಿಕ್ಷಕ ಗೆಳೆಯರ […]
ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ವಿರುದ್ಧದ ಕ್ರಮ ಹಿಂಪಡೆಯಲು ಒತ್ತಾಯ ಕಾಂಗ್ರೆಸ್‌ಗೆ ತೀವ್ರ ಸಂದೇಶ ಶ್ರೀನಿವಾಸಪುರ, ಮೇ 2: ಅಲ್ಪಸಂಖ್ಯಾತ ನಾಯಕರು ಎಂಎಲ್‌ಸಿ ನಸೀರ್ ಅಹ್ಮದ್ ಹಾಗೂ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರಿಗೆ ಪುನಃ ಹುದ್ದೆಗಳನ್ನು ನೀಡುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಶ್ರೀನಿವಾಸಪುರದ ಉಲಮಾಗಳು ತೀವ್ರ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಆಜಾದ್ ರಸ್ತೆಯ ಜಾಮಿಯಾ ಮಸೀದಿ ಸಮೀಪ ಶುಕ್ರವಾರ ನಡೆದ ರಾಷ್ಟ್ರೀಯ ಏಕತಾ ಕಾರ್ಯಕ್ರಮದಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರು, ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಕ್ರಮಗಳನ್ನು ಖಂಡಿಸಿದರು. […]
ಶ್ರೀನಿವಾಸಪುರ : ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಡಿ.ಆರ್. ಮಂಜುನಾಥ್ ಅವರು ಇಂದು ವಯೋನಿವೃತ್ತಿ ಹೊಂದಿದ್ದು, ಅವರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ತಾ.ಪಂ. ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು. ಸಮಾರಂಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಜುನಾಥ್ ಅವರ ಆಡಳಿತ ಕೌಶಲ್ಯ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯನ್ನು ಸ್ಮರಿಸಿ ಪ್ರಶಂಸಿಸಿದರು. ತಮ್ಮ ಸೇವಾ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ನೀಡಿದ ಕೊಡುಗೆ, ಸಹೋದ್ಯೋಗಿಗಳೊಂದಿಗೆ ಹೊಂದಿದ್ದ ಸ್ನೇಹಪೂರ್ಣ ನಂಟು ಹಾಗೂ ಶಿಸ್ತುಬದ್ಧ ಕಾರ್ಯಪದ್ಧತಿ ಎಲ್ಲರಿಗೂ ಮಾದರಿಯಾಗಿದೆ ಎಂದು […]
ಬೆಂಗಳೂರು, ಏ.30: ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ, ಕಲಬುರಗಿ ಪೂರ್ವ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರು (ಜಾರಿದಳ) ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಯಾಸ್ಮಿನ್ ಬೇಗಂ ಜಿ ವಾಲಿಕಾರ್ ಅವರನ್ನು ಬೆಂಗಳೂರಿನ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿ ವರ್ಗಾಯಿಸಿ ನೇಮಕ ಮಾಡಲಾಗಿದೆ. ಅವರು ಈ ಹುದ್ದೆಯಲ್ಲಿ […]
ಶ್ರೀನಿವಾಸಪುರ ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ಸಮೀಪ ಬುಧವಾರ ಸಂಜೆ ಸುರಿದ ಮಳೆ ಹಾಗೂ ಬಲವಾಗಿ ಬೀಸಿದ ಬಿರುಗಾಳಿಗೆ ನೆಲಕಚ್ಚಿರುವ ಮಾವಿನ ಕಾಯಿ. ತೋಟದಲ್ಲಿ ಉದುರಿಬಿದ್ದಿರುವ ಮಾವಿನ ಕಾಯಿಯನ್ನು ನೋಡುತ್ತಿರುವ ಬೆಳೆಗಾರ. ಮಾವಿಗೆ ಮುಳುವಾದ ಮೊದಲ ಮಳೆ ಶ್ರೀನಿವಾಸಪುರ: ತಾಲ್ಲೂಕಿನ ಆರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡಮಲದೊಡ್ಡಿ ಗ್ರಾಮದ ಸಮೀಪ ಬುಧವಾರ ಸಂಜೆ ಸುರಿದ ಮೊದಲ ಮಳೆ ಹಾಗೂ ಬಿರುಸಾದ ಬಿರುಗಾಳಿ ಹೊಡೆತಕ್ಕೆ ಮಾವಿನ ಕಾಯಿ ಉದುರಿ ನೆಲಕಚ್ಚಿದೆ. ಈ ಬಾರಿ ವಾತಾವರಣ ವೈಪರೀತ್ಯದ ಪರಿಣಾಮವಾಗಿ ಮಾವಿನ ಫಸಲಿನ […]
ಶ್ರೀನಿವಾಸಪುರ, ಏ.27: ಮಹಿಳಾ ಸಬಲೀಕರಣದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದ ಇಂದಿರಾ ಭವನ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಹಲವು ದಶಕಗಳ ಆಡಳಿತ ನಡೆಸಿದರೂ ಮಹಿಳೆಯರ ಸಬಲೀಕರಣಕ್ಕಾಗಿ ಶಾಶ್ವತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಮಹಿಳಾ ಮೀಸಲಾತಿ ಸಂಬಂಧ ಸಂಸತ್ತಿನಲ್ಲಿ ಮಂಡನೆಯಾದ ನಾರಿ ಶಕ್ತಿ ಅಧಿನಿಯಮಕ್ಕೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿದೆ. […]
(ವರದಿ: ಶಬ್ಬಿರ್ ಅಹ್ಮದ್) ಬಿಸಿಗಾಳಿ–ಜಾಗತಿಕ ಉದ್ವಿಗ್ನತೆ ಡಬಲ್ ಹೊಡೆತ : ಶ್ರೀನಿವಾಸಪುರ ಮಾವು ಸುಗ್ಗಿಗೆ ಆತಂಕದ ನೆರಳು ,ಇಳುವರಿ ಶೇ.30ರಷ್ಟೇ ಸಾಧ್ಯತೆ ಬೆಲೆ, ರಫ್ತು, ಪಲ್ಪ್ ಉದ್ಯಮಕ್ಕೂ ಸಂಕಷ್ಟ ಪಶ್ಚಿಮ ಏಷ್ಯಾ ಉದ್ವಿಗ್ನತೆ ಪರಿಣಾಮದ ಭೀತಿ ಉಂಟಾಗಿದೆ ಶ್ರೀನಿವಾಸಪುರ ರಾಜ್ಯದ ಮಾವುನಾಡು ಎಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಈ ಬಾರಿಯ ಮಾವು ಸುಗ್ಗಿ ಆರಂಭಕ್ಕೂ ಮುನ್ನವೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ತೀವ್ರ ಬಿಸಿಗಾಳಿ, ಇಳುವರಿ ಕುಸಿತ, ಮಾರುಕಟ್ಟೆ ಅನಿಶ್ಚಿತತೆ, ಪಲ್ಪ್ ಉದ್ಯಮದ ಸಂಕಷ್ಟ […]

