

ಶ್ರೀನಿವಾಸಪುರ : ಸಂಸ್ಕಾರ ಎಂದರೆ ಅಜ್ಞಾನವಂತ ವ್ಯಕ್ತಿ ಬದಲಾವಣೆ ಶುದ್ಧಿಕರಣ ಮತ್ತು ಪರಿಷ್ಕರಣೆ ಸುದಾರಣೆ ಆಗುವುದೆಂದರ್ಥ. ಕಲ್ಲಿನಂತ್ತಿರುವ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಶಾರೀರಕವಾಗಿ ದಂಡಿಸಿ ಮಾನಸಿಕವಾಗಿ ಭೌತಿಕವಾಗಿ ಆದ್ಯಾತ್ಮಿಕ ಜ್ಞಾನವಂತರಾಗಿ ಹೆತ್ತವರನ್ನು ಗೌರವಿಸುವ ಮೌಲ್ಯಗಳು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಯೋಗ ಶಿಕ್ಷಣ ಪ್ರಮುಖ ಚೌಡಪ್ಪ ಹೇಳಿದರು.
ತಾಲೂಕಿನ ಆರ್.ತಿಮ್ಮಸಂದ್ರ ಸಮೀಪದ ನಂದಗೋಕುಲ ಆಶ್ರಮದ ಜಾಗನಾಥ ಮಹಾದೇವ ದೇವಾಲಯ ಸಂಕೀರಣದಲ್ಲಿ ಮಂಗಳವಾರ ಆಯೋಜಿಸಿದ್ದ ೨೦ ದಿನಗಳ್ದುಚಿತ ಸಂಸ್ಕಾರಾಮೃತ ವಸಂತ ಶಿಭಿರ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬೆಳೆದ ಈ ಕಾಲದಲ್ಲಿ ಮಕ್ಕಳಿಗೆ ಮೌಲ್ಯಗಳು ಕಲಿಸುವಲ್ಲಿ ಬಹುತೇಕ ಪೋಷಕರು ವಿಪಲರಾಗಿದ್ದಾರೆ. ಮೊಬೈಲ್ ಪ್ರಭಾವದಿಂದ ಮಕ್ಕಳಲ್ಲಿ ಅಡಗಿರುವ ಸೂಪ್ತ ಮೌಲ್ಯಗಳು ಅವರಿಗೆ ತಿಳುವಳಿಕೆಗಳಾಗಿ ಪರಿವರ್ಥನೆ ಆಗುತ್ತಿಲ್ಲ. ಶಿಕ್ಷಣದ ಹಿಂದೆ ಬಿದ್ದಿರುವ ನಾವು ನಮ್ಮ ಪರಂಪರೆ ಸಂಸ್ಕಾರ ಮರೆಯುತ್ತಿದ್ದೇವೆ. ಕಲ್ಲಿಗೆ ಉಳಿ ಪೆಟ್ಟು ಬಿದ್ದು ಮೂರ್ತಿಯಾದಂತೆ ಮಕ್ಕಳು ಮೌಡ್ಯತೆ ಬಿಟ್ಟು ಮುತ್ತಿನಂಥ ಸದ್ಗುಣಗವಂತ ಶಿಲೆಗಲಾಗಬೇಕು. ಸಂಸ್ಕಾರ ಎಂದರೆ ವ್ಯಕ್ತಿಯ ಮನಸು ನಡೆತೆ ಮತ್ತು ವ್ಯಕ್ತಿತ್ವವನ್ನು ಸರಿಪಡಿಸುವ ಒಳ್ಳೆಯ ಗುಣಗಳನ್ನು ಬೆಳೆಸುವ ಪ್ರಕ್ರಿಯೆ ಆಗಿದೆ. ಸಾಂಪ್ರದಾಯ ಹುಟ್ಟು ಸಾವಿನ ಮದ್ಯೆ ಜೀವನದ ವಿವಿದ ಹಂತಗಳಲ್ಲಿ ಮಾಡುವ ದಾರ್ಮಿಕ ವಿಧಿ ವಿಧಾನಗಳನ್ನು ಸಂಸ್ಕತಿ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಪತಂಜಲಿ ಮುದ್ರಾ ಯೋಗ ಸಂಸ್ಥಾಪಕ ಅಧ್ಯಕ್ಷ ಎಸ್.ವೆಂಕಟೇಶ್ ಬಾಬು ಮಾತನಾಡಿ ತಂದೆತಾಯಿ ಇಲ್ಲದ ಅಜ್ಞಾನಿಯೊಬ್ಬ ಸಾಧಕ ಮುನಿಗಳ ಬಳಿ ಹೋದಾಗ ಇವನ ಅವಶ್ಯಕತೆ ನನಗಿಲ್ಲವೆಂದು ಹೇಳಲಾರದೆ ಅವನು ಮಾಡಲಾರದಂತ ಶ್ರಮದ ಜವಾಬ್ದಾರಿ ಕೊಡುತ್ತಾರೆ. ಕಷ್ಟಪಟ್ಟರೆ ಪಲ ಉಂಟು ಎಂದು ಶ್ರದ್ದೆ ಸದ್ಬಕ್ತಿಯಿಂದ ಕೆಲಸ ನಿರ್ವಹಿಸುತ್ತಾರೆ. ಆ ನಂತರ ಮತ್ತಷ್ಟು ಬಾರವಾದ ಕೆಲಸ ನೀಡುತ್ತಾರೆ. ಅದು ನಮಗೆ ಜೀವನದ ಮಾರ್ಗದರ್ಶನವಾಗಿ ಮತ್ತಷ್ಟು ಉತ್ತಮ ರೀತಿಯಲ್ಲಿ ನಿರ್ವಹಿಸಿ ತಾನು ವಹಿಸಿದ ಕೆಲಸ ಎಂತ್ತಹ ಕಷ್ಟವೇ ಆಗಿದ್ದರು ಗುರಿ ಇಟ್ಟು ಶ್ರದ್ದೆ ತೋರಿದರೆ ಶಾರದೆ ನಮ್ಮ ಪರವಾಗುತ್ತದೆ ಎನ್ನುವ ಸದ್ಬುದ್ದಿಯೆ ಸಂಸ್ಕಾರ. ಅದನ್ನು ತಾವು ಈ ಆಶ್ರಮದಲ್ಲಿ ೨೦ ದಿನಗಳಲ್ಲಿ ಕಲಿಯಬೇಕಾದ ಸಂಸ್ಕಾರವAತ ಸಾಧನೆ ನೀವು ಶ್ರದೆ ಭಕ್ತಿ ಶಿಸ್ತಿನಿಂದ ಇದ್ದು ಕಲಿತು ಸತ್ಪçಜೆಗಳಾಗಬೇಕೆಂದು ಕಿವಿ ಮಾತು ಹೇಳಿದರು.
ಶ್ರೀ ಸುದೀರಾನಂದಗಿರಿಸ್ವಾಮಿ ಸಾನೀದ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಆಶ್ರಮದ ಆವರಣದಲ್ಲಿ ಹಲವು ಸಾದು ಸಂತರ ಸಮರ್ಪಾಣ ಭಾವದ ಸೇವೆಯಿಂದ ಆಶ್ರಮ ಸ್ಥಾಪಿಸಲಾಗಿದೆ. ಪರಮಾತ್ಮನ ಕೃಪೆಯಿಂದ ಇಲ್ಲಿ ಮಾನಸಿಕ ಆದ್ಯಾತ್ಮಿಕ ಸಂಸ್ಕಾರವAತ ಕಾರ್ಯಕ್ರಮಗಳು ನಡೆಸುವ ಕೆಲಸ ಆಗುತ್ತಿದೆ. ೨೦ ದಿನಗಳು ನಡೆಯುವ ಈ ಶಿಭಿರಕ್ಕೆ ಬಳ್ಳಾರಿಯಿಂದ ೮ ಮಂದಿ ಉತ್ತರಖಾಂಡ್ನಿAದ ಇಬ್ಬರು ತಾಲೂಕಿಂದ ೧೦ ಮಂದಿ ಸೇರಿ ೨೦ ಮಂದಿ ವಿದ್ಯಾರ್ಥಿಗಳು ಶಿಭಿರಾರ್ಥಿಗಲಾಗಿದ್ದಾರೆ. ೨೦ ದಿನಗಳ ಕಾಲ ಇಲ್ಲೆ ಅವರಿಗೆ ಎಲ್ಲಾ ಸೌಲಭ್ಯಗಳು ಒದಗಿಸಿ ಶಾರಿರಕವಾಗಿ ಮಾನಸಿಕವಾಗಿ ಶೈಕ್ಷಣ ಕವಾಗಿ ಸಾಮಾಜಿಕವಾಗಿ ಕೌಟುಂಬಿಕವಾಗಿ ಪಂಚಮುಖಿ ಶಿಕ್ಷಣ ನೀಡಲಾಗುತ್ತದೆ. ಭಕ್ತಿ ಭಾವದಿಂದ ಇದ್ದು ಇಲ್ಲಿ ಸಿಗುವ ಉಚಿತ ಸೌಲಭ್ಯಗಳು ಬಳಸಿಕೊಂಡು ಸದ್ಗುಣಗಳು ಬೆಳೆಸಿಕೊಂಡು ಸಾರ್ಥಕ ಪ್ರಜೆಗಳಾಗಬೇಕೆಂದು ತಿಳಿಸಿದರು. ವಸುದೇವ ಹಾಜರಿದ್ದರು.

