

ಶ್ರೀನಿವಾಸಪುರ : ಪಟ್ಟಣದ ಹೊರವಲಯದ ಮ್ಯಾಂಗೋವ್ಯಾಲಿ ಶಾಲೆಯಲ್ಲಿ ಗುರುವಾರ ಸಿಬಿಎಸ್ಸಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಕುರಿತು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಮ್ಯಾಂಗೋವ್ಯಾಲಿ ಆಡಳಿತ ಮಂಡಲಿ ಅಧ್ಯಕ್ಷ ಎಸ್.ಎ.ಅಮರನಾಥ್ ಮಾತನಾಡಿ ಶ್ರೀಧರ್ ಎಂಬ ವಿದ್ಯಾರ್ಥಿಯು 485 (97%) ಅಂಕಗಳನ್ನು ಪಡೆದು ಜಿಲ್ಲೆಗೆ ಎರಡನೇ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯು ನಮ್ಮ ಶಾಲೆ ಕೀರ್ತಿಯನ್ನ ಹೆಚ್ಚಿಸಿದ್ದಾನೆ. ತಾಲೂಕಿಗೆ ಈ ವಿದ್ಯಾರ್ಥಿಯು ಮೊದಲನೇ ಸ್ಥಾನ ಪಡೆದಿದ್ದಾನೆ . ಅದೇ ರೀತಿಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನವನ್ನು ನಮ್ಮ ಶಾಲೆಯ ವಿದ್ಯಾರ್ಥಿ ಮಹ್ಮದ್ಮಯೂನ್ 92%, ಪೂಜಿತಾಸಾಯಿರೆಡ್ಡಿ 91%, ಕುಶಾಲ್ಕುಮಾರ್ 91%, ಸಿ.ಸರಾಶೇರಾ 87 % ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
4 ವರ್ಷದಿಂದ ನಮ್ಮ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ. ನಮ್ಮ ಶಾಲೆಯಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಗಮನಹರಿಸಲಾಗುತ್ತದೆ. . ತಾಲೂಕಿನಲ್ಲಿ ರ್ಯಾಂಕ್ ಕೊಡುವ ಫ್ಯಾಕ್ಟರಿ ನಮ್ಮ ಸಂಸ್ಥೆ ಗಳಾದ ಎಸ್ಎಸ್ಎಲ್ಸಿ , ಪಿಯುಸಿ, ಪ್ರಥಮದರ್ಜೆ ಕಾಲೇಜಿಗೆ ಸಂಬAದಿಸಿದAತೆ ಮ್ಯಾಂಗೋವ್ಯಾಲಿ, ಗಂಗೋತ್ರಿ, ಜ್ಞಾನಾದ್ರಿ ಕಾಲೇಜುಗಳು ಮುಂದೆ ಇರುತ್ತದೆ ಎಂದು ಹೇಳಿದರು.
ಶಾಲಾಡಳಿತಾಧಿಕಾರಿ ಎಸ್.ಎ.ಅರ್ಜುನ್ ಮಾತನಾಡಿ ವಿದ್ಯಾರ್ಥಿಗಳು ಜ್ಞಾನ ಭಂಡಾರ ಯಾವ ಮೂಲಗಳಿಂದಾದರೂ ಬರಲಿ ಅದನ್ನು ಪಡೆದು ಪರೀಕ್ಷೆಗೆ ಸಿದ್ದರಾಗಬೇಕು. ಪ್ರಪಂಚದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿದ್ದೆ ಹಾಗೂ ಕಾಲಹರಣವನ್ನು ತ್ಯಜಿಸಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಗುರಿಯೆಡೆಗೆ ಸಾಗಬೇಕೆಂದರು “ಹಿಂದೆ ಗುರುವಿರಬೇಕು ಮುಂದೆ ಗುರಿ ಇರಬೇಕು” ಎನ್ನುವ ರೀತಿಯ ಸಾಧನೆ ಮಾಡಬೇಕು ಎಂದರು.
ಕಾರ್ಯದರ್ಶಿ ಎಸ್.ಎ.ಮುರಳಿ , ಪ್ರಾಂಶುಪಾಲ ಅಶೋಕ್ಕುಮಾರ್, ಉಪಪ್ರಾಂಶುಪಾಲ ಜೆ.ಮರಿಯಾ ಹಾಗು ಶಿಕ್ಷಕರು ಇದ್ದರು.


