

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ರಾತ್ರಿ ಈಶ ನಾಟ್ಯಕಲಾ ಅಕಾಡೆಮಿ ಹಾಗೂ ಈಶ ನಾಟ್ಯಕಲಾ ಸೇವಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ವೆಂಕಟೇಶ್ವರ ನರ್ಸಿಂಗ್ ಹೋಂ ವೈದ್ಯಾಧಿಕಾರಿ ಡಾ.ವೈ.ವಿ.ವೆಂಕಟಾಚಲ ಮಾತನಾಡಿ, ದೈಹಿಕ ಆರೋಗ್ಯ ರಕ್ಷಣೆಗೆ ನಾಟ್ಯ ಸಹಕಾರಿಯಾಗಿದೆ. ಅದರಲ್ಲೂ ಭರತನಾಟ್ಯ ಮೂಳೆ ಮತ್ತು ಮಾಂಸ ಖಂಡಗಳ ಚಲನೆಗೆ ಪೂರಕವಾಗಿದೆ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳನ್ನು ನೃತ್ಯ, ಸಂಗೀತ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅವರ ದೈಹಿಕ ಮತ್ತು ಮಾನಸಿಕ ಸ್ವಾಸ್ಥö್ಯ ಕಾಪಾಡಲು ಸಹಕರಿಸಬೇಕು. ಈ ಚಟುವಟಿಕೆಗಳು ಮಕ್ಕಳಲ್ಲಿ ಓದಿನ ಹೊರೆಯಿಂದ ಉಂಟಾಗಬಹುದಾದ ಬೇಸರವನ್ನು ಕಳೆಯಲು ನೆರವಾಗುತ್ತವೆ ಎಂದು ಹೇಳಿದರು.
ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ ಮಾತನಾಡಿ, ಭರತನಾಟ್ಯ ಭಾರತದ ಕೊಡುಗೆ. ಅತ್ಯಂತ ಪ್ರಾಚೀನ ಶಾಸ್ತಿçÃಯ ಕಲೆಯಾದ ಭರತನಾಟ್ಯ ಸಾವಿರಾರು ವರ್ಷಗಳಿಂದ ಉಳಿದು ಬಂದಿದೆ. ಅದು ನೃತ್ಯಕ್ಕೆ ಇರುವ ಶಕ್ತಿಯ ಧ್ಯೋತಕ ಎಂದು ಹೇಳಿದರು.
ಮಾವಿನ ಪಟ್ಟಣದಲ್ಲಿ ಶಾಸ್ತಿçÃಯ ಸಂಗೀತ ಶಾಲೆ ಸ್ಥಾಪಿಸಲ್ಪಟ್ಟು , ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಈ ಕಲಾ ಸಂಸ್ಥೆಯನ್ನು ಸಾರ್ವಜನಿಕರು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿ ಕನ್ನಡ ವಿಭಾಗದ ಮುಖ್ಯಸ್ಥ ಡಾ, ಎಚ್.ಮೃತ್ಯುಂಜಯ, ಸಾಹಿತಿ ಆರ್.ಚೌಡರೆಡ್ಡಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶಿವಾನಂದ ಶಾಸ್ತಿçÃಯ ಸಂಗೀತ ಹಾಗೂ ಭರತನಾಟ್ಯದ ಮಹತ್ವ ಕುರಿತು ಮಾತನಾಡಿದರು.
ಈಶ ನಾಟ್ಯಕಲಾ ಅಕಾಡೆಮಿ ವಿದ್ಯಾರ್ಥಿಗಳು ಆಕರ್ಷಕ ಭರತನಾಟ್ಯ ಪ್ರದರ್ಶನ ನೀಡಿದರು. ಗಾಯಕ ವೆಂಕಟೇಶ್ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವಿ.ನಿಶಾಂತ್, ವೆಂಕಟರೆಡ್ಡಿ, ನೃತ್ಯ ಶಿಕ್ಷಕಿ ಪ್ರತೀಶ, ನರೇಶ್, ರೂಪ, ವೆಂಕಟೇಶ್, ನಾರಾಯಸ್ವಾಮಿ, ಎನ್.ಮಂಜುನಾಥ್ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಪೋಷಕ ವರ್ಗದ ವತಿಯಿಂದ ಸಂಗೀತ ಶಿಕ್ಷಕಿ ಪ್ರತೀಶ ನರೇಶ್ ಅವರನ್ನು ಸನ್ಮಾನಿಸಿಸಲಾಯಿತು. ಅಕಾಡೆಮಿ ವತಿಯಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು.

