ಕೋಲಾರ : ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವಾಗ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಸುರೇಶ್ ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ 4ನೇ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರದ ಸವಲತ್ತುಗಳನ್ನು ಸಾಮಾನ್ಯರಿಗೆ ತಲುಪಿಸಲು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯೋನ್ಮುಖರಾಗಬೇಕು. ಹೀಗೆ ವಿತರಿಸುವ ಸವಲತ್ತುಗಳ […]
ಕೆ.ಜಿ.ಎಫ್: ಕೆ.ಜಿ.ಎಫ್‌ನ ಸರ್ಕಾರಿ ಗಣಿ ಶಿಕ್ಷಣ ಶಾಲೆಯಲ್ಲಿ ಇತ್ತೀಚೆಗೆ ನಡೆದ ಯುಜಿಸಿಇಟಿ (UG-CET) ಸೀಟು ಹಂಚಿಕೆ ಮಂಥನ ಕಾರ್ಯಕ್ರಮವು ಉತ್ಸಾಹಭರಿತವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿಶೇಷ ಜಾಗೃತಿ ಉಪನ್ಯಾಸ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕಿಯಾದ ಶ್ರೀಮತಿ ಶೀರಿನ್ ತಾಜ್ ಅವರು ಉಪಸ್ಥಿತರಿದ್ದು, ನಿಗಮದಿಂದ ವಿದ್ಯಾರ್ಥಿಗಳಿಗೆ ಲಭಿಸಬಹುದಾದ ವಿವಿಧ ಶೈಕ್ಷಣಿಕ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು. ವಿಶೇಷವಾಗಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ದೊರೆಯುವ ಶೈಕ್ಷಣಿಕ ಸಾಲ ಮತ್ತು […]
ಬೆಂಗಳೂರು: ಸರ್ಕಾರದ ಪ್ರಧಾನಮಂತ್ರಿ ಹೊಸ 15 ಅಂಶಗಳ ವಿಶೇಷ ಕಾರ್ಯಕ್ರಮದ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ವತಿಯಿಂದ ಜಿಲ್ಲೆಯ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಬೆಂಗಳೂರಿನ ಬನ್ನೇರುಘಟ್ಟದ ಜಂಗಲ್ ಲಾಡ್ಜ್‌ಗಳ ಪ್ರಕೃತಿ ಶಿಬಿರದಲ್ಲಿ ನಡೆಸಲಾಯಿತು. ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಮಿತಿ ಸದಸ್ಯರು ಭಾಗವಹಿಸಿದ್ದರು. ಯೋಜನೆಯ ಉದ್ದೇಶ, ಅನುದಾನದ ಸರಿಯಾದ ವಿನಿಯೋಗ, ಫಲಾನುಭವಿಗಳ ಆಯ್ಕೆ, ಹಾಗೂ ಯೋಜನೆ ಜಾರಿಗೆ ತಾಂತ್ರಿಕ ಮಾಹಿತಿ ಹಂಚಿಕೊಳ್ಳಲಾಯಿತು. ಈ ಕಾರ್ಯಾಗಾರವು ಸಮಿತಿಗೆ […]
ಶ್ರೀನಿವಾಸಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ 4 ಜನ ಶಾಸಕರು ಕಾಂಗ್ರೇಸ್ ಪಕ್ಷದಿಂದ ಚುನಾಯಿತರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದೆ. ಜೆ.ಡಿ.ಎಸ್.ನ ಇಬ್ಬರು ಶಾಸಕರು ಗೆದಿದ್ದಾರೆ. ಲೋಕಸಭೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ನ ವಿಧಾನ ಪರಿಷತ್ ಸದಸ್ಯರು ಇದ್ದಾರೆ ಆದರೂ ಸಹ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ ತಿಳಿಸಿದರು.ಪಟ್ಟಣದ ಶಂಕರ ಮಠದ ಬಳಿ ಸಿಪಿಐ(ಎಂ) ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ […]
ಶ್ರೀನಿವಾಸಪುರ : ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವರ್ಷಕ್ಕೊಂದು ಬಾರಿ ಉಲ್ಬಣವಾಗುವ ಮಾವಿನ ವ್ಯವಹಾರ ಕೋಟ್ಯಾಂತರ ರೂಪಾಯಿ ಮೊತ್ತಕ್ಕೆ ತಲುಪುತ್ತಿದೆ. ಇಲ್ಲಿನ ಮಾವು ತೋಟಗಳು ಮತ್ತು ಬಟ್ಟಲಿನಿಂದ ಖರೀದಿಸುವ ಪಸಲು ವ್ಯಾಪಾರಸ್ಥರು ಈ ವ್ಯಾಪಾರಕ್ಕೆ ತಮ್ಮ ಎಲ್ಲಾ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಕೆಲವೊಮ್ಮೆ ಚಿನ್ನವನ್ನು ಅಡಮಾನ ಇಟ್ಟುಕೊಂಡು ಅಥವಾ ಬಡ್ಡಿದರ ಸಾಲ ಪಡೆದು ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆದರೂ ಈ ವ್ಯಾಪಾರಸ್ಥರು ಇನ್ನೂ ತನ್ಮೂಲಕ ಸಂಘಟಿತ ರೂಪದಲ್ಲಿ ಸರ್ಕಾರದ ಪ್ರೋತ್ಸಾಹದ ಯೋಜನೆಗಳನ್ನು ಪಡೆದಿಲ್ಲ. ಈ ಭಾಗದಲ್ಲಿ ಈಗಾಗಲೇ ಕೃಷಿ ಪೂರಕವಾಗಿ […]
ಶ್ರೀನಿವಾಸಪುರ : ಮನೆಗೆ ಯಾವಾಗಲೂ ಐಎಸ್‍ಐ ಪ್ರಮಾಣಿತ ಉಪಕರಣಗಳನ್ನೇ ಬಳಸುವಂತೆ, ವೈರಿಂಗ್ ಕೆಲಸವನ್ನು ಸರ್ಕಾರಿ ಲೈಸೆನ್ಸ್ ಹೊಂದಿದ ಗುತ್ತಿಗೆದಾರರಿಂದ ಮಾತ್ರ ಮಾಡಿಸಿಕೊಳ್ಳಿ , ಯಾವುದೇ ಕಾರಣಕ್ಕೂ ಪ್ಲಗ್ ಪಾಯಿಂಟ್‍ಗಳು ಮಕ್ಕಳ ಕೈಗೆ ಎಟುಕದಂತಿರಲಿ ಎಂದು ಎಇಇ ರವೀಂದ್ರಬಾಬು ಮನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದರುಪಟ್ಟಣದ ಬೆಸ್ಕಾಂ ಉಪವಿಭಾಗದ ವತಿಯಿಂದ ಮಂಗಳವಾರ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಥಗೆ ಚಾಲನೆ ನೀಡಿ ಮಾತನಾಡಿದರು.ಅದೇ ರೀತಿಯಾಗಿ ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹಿರಾತು ಫಲಕಗಳನ್ನು ಕಟ್ಟುವುದು, ಬಟ್ಟೆಗಳನ್ನು ಒಣಗಿಸುವ ತಂತಿಯನ್ನು ವಿದ್ಯುತ್ ಕಂಬಕ್ಕೆ […]
ಶ್ರೀನಿವಾಸಪುರ : ಲ್ಯಾಪ್‍ಟಾಪ್ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳನ್ನ ಶೀಘ್ರವಾಗಿ ಮುಗಿಬಹುದು. ಇರುವ ಜಾಗದಲ್ಲಿಯೇ ಸಾರ್ವಜನಿಕರ ಕೆಲಸವನ್ನು ವಿಲೇವಾರಿ ಮಾಡುಬಹುದಾಗಿದೆ. ದಾಖಲೆಗಳಿಗೆ ಸಂಬಂದಿಸಿದಂತೆ ಜಟಿಲವಾದ ಸಮಸ್ಯೆಗಳನ್ನು ಸಾಧ್ಯವಾದಷ್ಟು , ಸುಲಭ ರೀತಿಯಲ್ಲಿ ಮಾಡುವ ವ್ಯವಸ್ಥೆ ಮಾಡಿಕೊಡಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಗ್ರಾಮ ಆಡಳಿತಗಾರರಿಗೆ ಸೂಚಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಗ್ರಾಮ ಆಡಳಿತಗಾರರಿಗೆ ಲ್ಯಾಪ್‍ಟ್ಯಾಪ್‍ಗಳನ್ನು ವಿತರಣೆ ಮಾಡಿ ಮಾತನಾಡಿದರು.ಕ್ಷೇತ್ರದಲ್ಲಿ ಬಹುತೇಕ ಬಡ ಕುಟುಂಬಗಳ ಇದ್ದು, ರೈತಾಪಿ ವರ್ಗದವರ ಹಾಗು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಚೇರಿಗಳಿಗೆ ಅಲಿಸದೆ ಅತಿ ಶೀಘ್ರವಾಗಿ […]
ಕೋಲಾರ,ಜೂ.30: ಕೋಲಾರದ ಬಸವಶ್ರೀ ಪದವಿ ಪೂರ್ವ ಕಾಲೇಜಿನ ಜೀವ ಶಾಸ್ತ್ರ ಮುಖ್ಯಸ್ಥ ಹಾಗೂ ಹಾರಿಜನ್ ಐಐಟಿ ಮತ್ತು ಮೆಡಿಕಲ್ ಅಕಾಡೆಮಿಯ ಸಿಇಓ ಜೀಶಾನ್ ಅಲಿ ಅವರ ಸೇವೆಯನ್ನು ಪರಿಗಣಿಸಿ ಗ್ಲೋಬಲ್ ಹುಮೆನ್ ಪೀಸ್ ಯೂನಿವರ್ಸಿಟಿ ವತಿಯಿಂದ ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಶ್ರೀನಿವಾಸಪುರ : ಮಗುವಿಗೆ ತಾಯಿಯ ಒಡಿಲೇ ಮೊದಲನೇ ಗುರು, ಎರಡನೇಯದು ಶಾಲೆ ಈ ಒಂದು ದೃಷ್ಟಿಯಲ್ಲಿ ಮೊದಲ ಅಕ್ಷರವನ್ನು ಕಲಿಸುವ ಉದ್ದೇಶದಿಂದ ಅಂತಹ ಮಕ್ಕಳಿಗೆ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥಸ್ವಾಮಿ ಹೇಳಿದರು.ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತ ಶಾಲೆಯಲ್ಲಿ ಸೋಮವಾರ ಜ್ಞಾನಾಂಕುರ ಕಾರ್ಯಕ್ರಮದಡಿಯಲ್ಲಿ ಎಲ್‍ಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳಿಗೆ ಕೇವಲ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ, ಸಂಸ್ಕಾರ ಬೆಳಸಿದಾಗ ಮಾತ್ರ […]

