ಶ್ರೀನಿವಾಸಪುರ, 10 ಆಗಸ್ಟ್: ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊಸ “ಸರಳ ಸಾಮೂಹಿಕ ಮದುವೆ ಸಹಾಯ ಯೋಜನೆ 2025–26” ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ನೋಂದಾಯಿತ ಸಾಮೂಹಿಕ ಮದುವೆಯಲ್ಲಿ ಭಾಗವಹಿಸುವ ಪ್ರತೀ ಅರ್ಹ ದಂಪತಿಗೆ ₹ 50,000 ಆರ್ಥಿಕ ಸಹಾಯ ನೀಡಲಾಗುತ್ತದೆ. ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ಪಾಷಾ ಅವರು, ಮದುವೆ ವೈಭವವನ್ನು ಕಡಿಮೆ ಮಾಡಿ ಸರಳ ರೀತಿಯಲ್ಲಿ […]
ಕುಂದಾಪುರ,ಆ.10:ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆಗಳು (ಆ.9 ರಂದು) ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿಜರಗಿತು.ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಅಗಮಿಸಿದ ಕುಂದಾಪುರ ತಾಲುಕಿನ ತಹಸಿಲ್ದಾರ್ ಮಲ್ಲಿಕಾರ್ಜುನ ಮಾತನಾಡಿ ‘ನಮ್ಮ ದೇಶಕ್ಕೆ ಲಬಿಸಿದ ಸ್ವಾತಂತ್ರ್ಯದ ನೆನಪಿಗಾಗಿ ಉಂಟು ಮಾಡಿದ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆ ತುಂಬಾ ಚೆನ್ನಾಗಿತ್ತು, ಎಲ್ಲಾ ಮಕ್ಕಳು ಇದರಲ್ಲಿ ಚೆನ್ನಾಗಿ ಪಾತ್ರವಹಿಸಿದ್ದಾರೆ, […]
ಕುಂದಾಪುರ(ಆ.9) ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಧ್ಯಮ ಶಾಲೆಗಳ 10ನೆ ತರಗತಿಯ ವಿದ್ಯಾರ್ಥಿ ಶ್ರಾವ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ 2025 -26 ನೇ ಸಾಲಿನ 17ರ ವಯೋಮಾನದ ಬಾಲಕಿಯರ ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವುದರ ಜೊತೆಗೆ ರಜ್ಯಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ.ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
ಉಡುಪಿ : ಡಾ. ಜೊಯ್ಲಿಸ್ ನೊರೋನ್ಹಾ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದಿದ್ದಾರೆ. ಡಾ. ಜೊಯ್ಲಿಸ್ ನೊರೋನ್ಹಾ ಅವರು ಕೈಗೊಂಡ ಡೈನಾಮಿಕ್ಸ್ ಆಫ್ ರಿಸ್ಕ್ & ಪ್ರೊಟೆಕ್ಟಿವ್ ಫ್ಯಾಕ್ಟರ್ಸ್ ಫಾರ್ ಅನ್ ರಿಜಿಸ್ಟರ್ಡ್ ಮೆಡಿಕೇಶನ್ ಇನ್ ದ ಯುಇಎ ಮಾರ್ಕೆಟ್ – ಚಾಲೆಂಜರ್ಸ್ ಅಂಡ್ ಸೊಲ್ಯೂಷನ್ಸ್ ಅಧ್ಯಯನ ವಿಷಯಕ್ಕೆ ಈ ಪದವಿ ಲಭಿಸಿದೆ. ದಾನಿಗಳು, ಪರೋಪಕಾರಿಯೂ ಆಗಿರುವ ಇವರು ಉಡುಪಿಯ ಕಲ್ಮಾಡಿ-ಕೊಡವೂರಿನ ದಿ. ಹೆನ್ರಿ ಮತ್ತು ಡಯಾನ ನೊರೋನ್ಹಾ […]
ಬೆಳ್ಮಣು; ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕ ಸೇವೆ ಮತ್ತು ಬ್ಯಾಂಕಿಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿಆಗಸ್ಟ್ 9, 2025 ರಂದು ಬೆಳ್ಮಣ್ ಶಾಖೆಯಲ್ಲಿ ತನ್ನ 9 ನೇ ಎಟಿಎಂ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನು ಬೆಳ್ಮನ್‌ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್ ಮಾಲೀಕ ಶ್ರೀ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬೆಳ್ಮಣ್ ನ ಸೇಂಟ್ ಜೋಸೆಫ್ ಚರ್ಚ್ […]
ಬ್ರಹ್ಮಾವರ ; ನಾಗರಿಕತೆಯಿಂದ ಸಂಸ್ಕೃತಿಯ ಕಡೆಗೆ ಸಮಾಜವನ್ನು ಸಾಗಿಸುವಲ್ಲಿ ಸಮಾಜಶಾಸ್ತ್ರಜ್ಞರ ಪಾತ್ರ ಅತಿ ಮುಖ್ಯ ಎಂದು ಬ್ರಹ್ಮಾವರ ಎಸ್.ಎಂ.ಎಸ್‌ಕಾಲೇಜಿನ ಸಂಚಾಲಕ ಎಂ.ಸಿ ಮಥಾಯ್‌ಹೇಳಿದರು. ಬ್ರಹ್ಮಾವರ ಎಸ್.ಎಂ.ಎಸ್‌ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಉಡುಪಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಒಂದು ದಿನದ ವಿಷಯವಾಧಾರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಗರಿಕತೆ ಮತ್ತು ಸಂಸ್ಕೃತಿಗಳ ನಡುವಿನ ವ್ಯತ್ಯಾಸ, ಸಮಾಜದಲ್ಲಿ ನೈತಿಕತೆ ಮೌಲ್ಯಗಳ ಪತನವಾಗಿದ್ದು ಅವುಗಳನ್ನು ಸ್ಥಾಪಿಸುವಲ್ಲಿ ಉಪನ್ಯಾಸಕರ ಹೊಣೆಗಾರಿಕೆ ಹೆಚ್ಚಿದೆ ಎಂದರು. ಇದಕ್ಕೂ ಮುನ್ನ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ […]
ಉಡುಪಿ : ಸಿನೆಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಎಂಟನೇ ವರ್ಷದ ಸಂಸ್ಥಾಪನ ಸಂಭ್ರಮದ ಪ್ರಯುಕ್ತ ನಿರಂತರ್ ಉದ್ಯಾವರ ಸಂಘಟನೆಯು ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿಮಿಟೆಡ್ ಇವರ ಸಹಯೋಗದೊಂದಿಗೆ ಉಡುಪಿ ಶೋಕ ಮಾತಾ ದೇವಾಲಯದ ವಠಾರದಲ್ಲಿರುವ ಅವೇ ಮರಿಯ ಸಭಾಂಗಣದಲ್ಲಿ ಅಗಸ್ಟ್ 8ರಿಂದ 10ನೇ ತಾರೀಖಿನ ವರೆಗೆ ಮೂರು ದಿನದ ನಿರಂತರ್ ಸಿನಿಮಾ ಉತ್ಸವವನ್ನು ಉದ್ಘಾಟಿಸಿ […]
ಶಿರೂರು : ಬೈಂದೂರು ಹೋಬಳಿ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಆ. 8 ರಂದು ನಡೆಯಿತುಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ಸಾರಥ್ಯದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾಟವನ್ನು ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಬಿ ಶಿರೂರಕರ್ ಉದ್ಘಾಟಿಸಿ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ ಸಂಸ್ಥೆಯ ಶಿಸ್ತುಬದ್ದ ಕ್ರೀಡಾಕೂಟದ […]
ಕುಂದಾಪುರ (ಆ. 8):ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ರ್ ಶಾಲೆಗಳ ಪ್ರಾಥಮಿಕ ವಿಭಾಗದ ಮೂರನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಕಿಂಗ್ಸ್ ಚೆಸ್ ಅಕಾಡೆಮಿಯ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ ಕೆ ಸಿ ಎ ಟ್ರೋಫಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾಟದ ಬಾಲಕರ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, 9ರ ವಯೋಮಾನದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು […]

