

ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಜಿಲ್ಲೆಯ ಪ್ರಸಿದ್ಧ ಕಲೆಯಾದ ಹುಲಿ ವೇಷ ನೃತ್ಯ ಪ್ರದರ್ಶನದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು . ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾಯ್ಜಿವರ್ಲ್ಡ್ ಚಾನಲ್ನ ನಿರ್ಮಾಣ ನಿರ್ದೇಶಕರಾದ ಶ್ರೀ. ಸ್ಟ್ಯಾನಿ ಬೆಲಾರವರು ವಿದ್ಯಾರ್ಥಿಗಳಿಗೆ,ಈ ಭೂಮಿಯಲ್ಲಿ ಹುಟ್ಟಿದ ನಾವು ಭಾಗ್ಯವಂತರು.ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗಿದೆ, ಆ ಬದಲಾವಣೆ ಧನಾತ್ಮಕವಾಗಿರಬೇಕೆಂಬ ಹಿತವಚನದೊಂದಿಗೆ,ಶಾಲೆಯು ವಿದ್ಯಾರ್ಥಿಗಳಿಗೆ ವೈಯಕ್ತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ನೀಡಿದೆ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಮಾರ್ಗದರ್ಶನ ನೀಡಿದರು. ಅಧ್ಯಕ್ಷತೆ ವಹಿಸಿದ ವಂ.ಫಾ.ರೋಹನ್ ಡಿ ಅಲ್ಮೇಡಾ ಎಸ್ ಜೆ ರವರು,ಕನ್ನಡ ಶ್ರೇಷ್ಠವಾದ ಭಾಷೆ, ಅದರ ಪಾವಿತ್ರ್ಯತೆ ಮತ್ತು ಶುದ್ಧತೆಯನ್ನು ಪ್ರತಿಬಿಂಬಿಸುವ ಹಳದಿ ಮತ್ತು ಕೆಂಪು ಬಣ್ಣಗಳ ಮಹತ್ವವನ್ನು ವಿವರಿಸಿದರು. ಅಲ್ಲದೆ,ನಾಡಗೀತೆಯ ಸಾಲುಗಳ ವೈಶಿಷ್ಟ್ಯತೆಯನ್ನು ವಿವರಿಸುವ ಮೂಲಕ ಹಾಡಿನ ಶ್ರೀಮಂತಿಕೆಯನ್ನು ಎತ್ತಿಹಿಡಿದರು. ನಾವೆಲ್ಲರೂ ಒಟ್ಟಾಗಿ ಸೇರಿ ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿ ಮಾಡೋಣ ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕನ್ನಡ ನೆಲದ ಅನನ್ಯತೆಯನ್ನು ಸಾರುವ ನೃತ್ಯರೂಪಕ ,ಗಾಯನ ಮತ್ತು ನೃತ್ಯ ಪ್ರದರ್ಶನ ಪ್ರಸ್ತುತಪಡಿಸಲಾಯಿತು.4 ನೇ ತರಗತಿಯ ದ್ವಿತಿ ಹೆಚ್ ಎಲ್ ದಿನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿ’ಸೋಜ ಹಾಗೂ ಅಪರ್ಣಾ ಸುರೇಶ್ ರವರು ಉಪಸ್ಥಿತರಿದ್ದರು. ಅವನಿ, ಯಶಿಕ್ ಹಾಗೂ ಸಮರ್ಥ್, ಈಶಾನ್ವಿ ಜೊತೆಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. 7 ನೇ ತರಗತಿಯ ಅವನೀಶ್ ಸ್ವಾಗತಿಸಿ, ರಿಶಾ ಕೋಟ್ಯಾನ್ ರವರು ಧನ್ಯವಾದ ಸಮರ್ಪಿಸಿದರು. ಕನ್ನಡ ಭಾಷಾ ಶಿಕ್ಷಕಿಯರು ಕಾರ್ಯಕ್ರಮವನ್ನು ಸಂಯೋಜಿಸಿದರು.
Vibrant Kannada Rajyotsava Celebrated at St Aloysius Gonzaga School

St Aloysius Gonzaga School celebrated Kannada Rajyotsava with vibrant cultural splendour and regional pride on 1st November 2025.
Chief Guest Mr. Stani Bela, Production Director of Daijiworld Channel, in his address, said, “We are fortunate to be born on this land. We must adapt to changing situations positively.” He commended the school for providing an excellent platform for students to showcase their individual talents and urged them to make the best use of it.
Principal Rev. Fr Rohan D Almeida SJ, who presided over the function, spoke about the greatness of the Kannada language and the significance of the yellow and red colours representing purity and sacredness. He also explained the meaning of the State Anthem and encouraged everyone to work together to make Karnataka a garden of peace.
The celebration began with a lively “Huli Vesha” (Tiger Dance) performance, followed by a series of dance dramas, songs, and dances that reflected the cultural richness of Karnataka.
Dwithi H. L. of Class IV spoke on the importance of the day. The programme was compered by Avani, Yashik, Samarth, and Eshanvi of Class VII, with Avaneesh delivering the welcome address and Risha Kotyan proposing the vote of thanks. The event was coordinated by the Kannada language teachers.
















