ಕುಂದಾಪುರ: ಗಾಣಿಗರಬೆಟ್ಟು ಆನಗಳ್ಳಿ ಗ್ರಾಮದ ಉದಯ (30) ರವರು ಹೊಳೆಯಲ್ಲಿ ಬಲೆ ಹಾಕಿ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, 27/08/2026 ರಂದು ಬೆಳಿಗ್ಗೆ 09.15 ಗಂಟೆಗೆ ಮನೆಯಿಂದ ಬಲೆಯನ್ನು ತೆಗೆದುಕೊಂಡು ಮೀನು ಹಿಡಿಯಲು ಹೋದವರು ವಾಪಾಸು ಬಾರದೇ ಇದ್ದು, ಹುಡುಕಾಡಿದಾಗ ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿ ಮಂಜು ಬಿಲ್ಲವ ಎಂಬವವರಿಗೆ ಸೇರಿದ ಕೆರೆಯಲ್ಲಿ ಉದಯರವರ ಬಲೆ ಕಂಡುಬಂದಿದ್ದು, ಬೆಳಿಗ್ಗೆ 10.30 ಗಂಟೆ ಸುಮಾರಿಗೆ ನೋಡಲಾಗಿ ಕೆರೆಯ ನೀರಿನಲ್ಲಿ ಬಲೆ ಸಮೇತ ಉದಯ ರವರ ಮೃತ […]

Read More

ಕುಂದಾಪುರ:  ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ 2026-2027ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ  ಇಂಡಕ್ಷನ್ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲದ ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ನ (KarMic Design Pvt. Ltd.) ಸಿಇಒ ಶ್ರೀ ರತ್ನಾಕರ ಭಟ್ ಅವರು ಭಾಗವಹಿಸಿ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ತಾಂತ್ರಿಕ ಕೌಶಲ್ಯಗಳ ಜೊತೆಗೆ ಸೃಜನಶೀಲತೆ, ನಿರಂತರ ಕಲಿಕೆ ಮತ್ತು ಶಿಸ್ತು ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಗಳನ್ನು […]

Read More

ಕುಂದಾಪುರ: ಆಗಸ್ಟ್ 22ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ , ವೃತ್ತಿ ಮಾರ್ಗದರ್ಶನ ಮತ್ತು ಪ್ಲೇಸ್ ಮೆಂಟ್ ಕೋಶ ಮತ್ತು ಬೆಂಗಳೂರಿನ ಮ್ಯಾಜಿಕ್ ಬಸ್ ಇವರ ಸಹಯೋಗದಲ್ಲಿ ನಡೆದ 4ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದಾಗ ಉದ್ಯೋಗ ಪಡೆಯುವಲ್ಲಿ ಹೆಚ್ಚಿನ ಅವಕಾಶಗಳು ನಿಮಗಾಗಿ ಸೃಷ್ಟಿಯಾಗುತ್ತದೆ. ಇಂತಹ ತರಬೇತಿ ಕಾರ್ಯಕ್ರಮಗಳು ನಿಮ್ಮ ಕೌಶಲ್ಯ ಹೆಚ್ಚಿಸಲು ಅನುಕೂಲವಾಗುತ್ತವೆ ಎಂದು […]

Read More

1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿರುವ MCC ಬ್ಯಾಂಕ್ ತನ್ನ ಕಾರ್ಕಳ ಶಾಖೆಯನ್ನು ಬುಧವಾರ, ಆಗಸ್ಟ್ 26, 2026ರಂದು ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್‌ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದೆ. MCC  ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸೇಫ್ ರೂಮ್‌ನ್ನು ಉದ್ಘಾಟಿಸಿದರು. ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ಸಹಾಯಕ […]

Read More

ಹಿರಿಯ ದಲಿತ ನಾಯಕ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ ವೇದಿಕೆಯನ್ನು “ಶುದ್ಧೀಕರಣ” ಮಾಡಿದ ಘಟನೆಯನ್ನು ಖಂಡಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾಳೆ ಪ್ರತಿಭಟನೆ ಮತ್ತು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸ್ಥಳ: ಕುಂದಾಪುರ ಶಾಸ್ತ್ರಿ ಸರ್ಕಲ್ತಾರೀಖು: 27 ಅಗಸ್ಟ್. ಗುರುವಾರಸಮಯ: ಮಧ್ಯಾಹ್ನ 3:30 ಗಂಟೆಗೆಮೆರವಣಿಗೆ: ಶಾಸ್ತ್ರಿ ಸರ್ಕಲ್‌ನಿಂದ ಕುಂದಾಪುರ ಉಪವಿಭಾಗಾಧಿಕಾರಿಯವರ ಕಚೇರಿಯವರೆಗೆ ಜಾತಿ ತಾರತಮ್ಯ, ಅಸ್ಪೃಶ್ಯತೆ ಹಾಗೂ ಮನುಷ್ಯನ ಘನತೆಯನ್ನು ಅವಮಾನಿಸುವ ಮನೋಭಾವದ ವಿರುದ್ಧ ನಡೆಯುವ ಈ ಪ್ರತಿಭಟನೆಯಲ್ಲಿ ಕುಂದಾಪುರ ಬ್ಲಾಕ್ […]

Read More

ಮಂಗಳೂರು: ನಿರ್ಗತಿಕರು, ದೀನದಲಿತರು ಹಾಗೂ ಸಮಾಜದ ಅಂಚಿನಲ್ಲಿರುವವರ ಸೇವೆಯಲ್ಲಿ ತೊಡಗಿರುವ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ (ರಿ.) ತನ್ನ 17ನೇ ವಾರ್ಷಿಕೋತ್ಸವವನ್ನು ಮಂಗಳವಾರ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿತು. ಕೋಲ್ಕತ್ತಾದ ಸಂತ ಮದರ್ ತೇರೆಸಾ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವು ಧನ್ಯವಾದದ ಪವಿತ್ರ ಬಲಿಪೂಜೆಯೊಂದಿಗೆ ಆರಂಭಗೊಂಡಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಪ್ರಧಾನ ಗುರುಗಳಾಗಿ ಬಲಿಪೂಜೆ ನೆರವೇರಿಸಿದರು. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ಫಾ. ಫ್ರಾನ್ಸಿಸ್ ಕ್ರಾಸ್ತಾ, ಫಾ. ಜೋಕಿಮ್ ಮೊಂತೆರೊ, […]

Read More

ರಕ್ತದಾನ ಶ್ರೇಷ್ಠದಾನ, ಯುವಕರೆಲ್ಲ ಸಂಘಟಿತರಾಗಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ಸಾಮಾಜಿಕ ಕಳಕಳಿಗೆ ಒಂದು ನಿದರ್ಶನ, ರಕ್ತ ಕ್ರತಕವಾಗಿ ತಯ್ಯಾರು ಮಾಡುದು ಸಾಧ್ಯವಿಲ್ಲ ಸ್ವಯಂಪ್ರೇರಿತವಾಗಿ ಒಬ್ಬನಿಗೆ ಮತ್ತೊಬ್ಬನು ದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವೆವಸ್ಥಾಪನ ಸಮಿತಿ ಸದಸ್ಯರಾದ ಶ್ರೀ ರಾಜೇಶ್ ಕಾರಂತ್ ಉಪ್ಪಿನಕುದ್ರು ರವರು ಶಿಬಿರ ಉದ್ಘಾಟಿಸಿ ಮಾತನಾಡಿದರು, ದಿನಾಂಕ, 23 ಆದಿತ್ಯವಾರ ದಂದು ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘ (ನಿ ) ಹೆಮ್ಮಾಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ […]

Read More

ಉಡುಪಿ: ಸಪ್ಟೆಂಬರ್ 8 ರಂದು ಕ್ರೈಸ್ತ ಸಮುದಾಯದವರು ಆಚರಿಸುವ ದೇವಾಮಾತೆ ಕನ್ಯಾಮರಿಯಮ್ಮ ಜನ್ಮದಿನವಾಗಿದ್ದು, ಈ ದಿನವನ್ನು ಕರಾವಳಿ ಭಾಗದ ಕ್ರೈಸ್ತ ಬಾಂಧ್ಯರವರು ತೆನೆ ಹಬ್ಬ ಆಚರಿಸುವ ಸಂದರ್ಭದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶದ ಪದಾಧಿಕಾರಿಗಳು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕರಾವಳಿ ಭಾಗದ ದಕ್ಷಿಣ […]

Read More

ಆಗಸ್ಟ್ 25, 2026. ಕಲ್ಯಾಣಪುರದ ಸಂತೆಕಟ್ಟೆಯಲ್ಲಿರುವ ಮೌಂಟ್ ರೋಸರಿ ಇಂಗ್ಲಿಷ್ ಮಾಧ್ಯಮ ಶಾಲೆ, ಸೋಮವಾರ, ಆಗಸ್ಟ್ 24, 2026 ರಂದು ಬೆಳಿಗ್ಗೆ 9.00 ಗಂಟೆಗೆ ಹೊಸ ಲಿಫ್ಟ್ ಉದ್ಘಾಟನೆ ಮತ್ತು ಶಾಲಾ ಆವರಣದ ಆಶೀರ್ವಾದದೊಂದಿಗೆ ಮಹತ್ವದ ಮೈಲಿಗಲ್ಲನ್ನು ಗುರುತಿಸಿತು. ಬಹಳ ಅಗತ್ಯವಿರುವ ಈ ಸೌಲಭ್ಯವು ಶಾಲೆಗೆ ಚಿಂತನಶೀಲ ಮತ್ತು ಪ್ರಾಯೋಗಿಕ ಸೇರ್ಪಡೆಯಾಗಿದ್ದು, ವಿಶೇಷವಾಗಿ ವಿಕಲಚೇತನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಕಟ್ಟಡದ ಮೇಲಿನ ಮಹಡಿಗಳನ್ನು ಪ್ರವೇಶಿಸಲು ಕಷ್ಟಪಡುವವರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಉಪಕ್ರಮವು ಕ್ಯಾಂಪಸ್ ಅನ್ನು ಎಲ್ಲರಿಗೂ […]

Read More
1 7 8 9 10 11 587