ಶ್ರೀನಿವಾಸಪುರ : ಕಳೆದ ವಾರದಲ್ಲಿ ಸುರಿದ ಭಾರೀ ಮಳೆಯಿಂದ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ಅನೇಕ ಅನಾಹುತಗಳು ಸಂಭವಿಸಿದ್ದು, ಇಂತಹ ಅನಾಹುತಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಹೇಳಿದರು. ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಿಂದ ಬಾಲಾಂಜನೇಯಸ್ವಾಮಿ ದೇವಾಲಯದವರೆಗಿನ ಪಾದಚಾರಿ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಅವರು ಮುಂದುವರೆದು — “ಪಟ್ಟಣವನ್ನು ಸ್ವಚ್ಛವಾಗಿಯೂ ಸುಂದರವಾಗಿಯೂ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಪುರಸಭೆ ಕೈಗೊಂಡಿರುವ ಅಭಿವೃದ್ಧಿ […]
ಶ್ರೀನಿವಾಸಪುರ : ತಾಲ್ಲೂಕಿನ ರೋಣೂರು ಸರ್ಕಾರಿ ಹೈಸ್ಕೂಲ್ನಲ್ಲಿ 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ. ಹಳೆಯ ವಿದ್ಯಾರ್ಥಿ ವೃಂದವು 25 ವರ್ಷಗಳ ಬಳಿಕ ಗುರು ವಂದನೆ ಮತ್ತು ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಹಾಗೂ ವೈಭವದಿಂದ ಆಯೋಜಿಸಿತು. ಶಾಲೆಯ ಪರಂಪರೆ ಮತ್ತು ಶಿಕ್ಷಕರ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಯೋಜಿಸಿದ ಈ ಸ್ಮರಣೀಯ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಗುರುಗಳು ಒಂದೇ ವೇದಿಕೆಯಲ್ಲಿ ಸೇರಿದರು. ಈ ಸಂದರ್ಭವು ಎಲ್ಲರ ಮನಸ್ಸಿನಲ್ಲಿ ಹಳೆಯ ದಿನಗಳ ನೆನಪುಗಳನ್ನು ಮೂಡಿಸಿತು. ಕಾರ್ಯಕ್ರಮದಲ್ಲಿ […]
ಬೆಂಗಳೂರು: ಇಂದಿನ ಡಿಜಿಟಲ್ ಯುಗದಿಂದಾಗಿ ಪುಸ್ತಕ ಓದುವ ಹವ್ಯಾಸವು ದೂರವಾಗಿರುವುದು ವಿಷಾದಕರ. ಪತ್ರಕರ್ತರು ನಿರಂತರವಾಗಿ ಓದುವ ಹವ್ಯಾಸದಲ್ಲಿ ತೊಡಗಿಕೊಂಡರೆ ಮಾತ್ರ ಜ್ಞಾನ ಸಂಪಾದಿಸಿಕೊಂಡು, ವೃತ್ತಿ ಬದ್ಧತೆ ತೋರಿಸಲು ಸಾಧ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು. ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಕಚೇರಿಯಲ್ಲಿ ಸಂಘದ ಸದಸ್ಯರಿಗಾಗಿ ಸ್ಥಾಪಿಸಿರುವ ಗ್ರಂಥಾಲಯ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳೇ ರಾರಾಜಿಸುತ್ತವೆ. ಪತ್ರಕರ್ತರು ಸದಾ ವಸ್ತುನಿಷ್ಠ ವರದಿಗಳಿಗೆ ಗಮನ ನೀಡಿದರಷ್ಟೇ […]
ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯ ಸಮೀಕ್ಷೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಮಯವನ್ನು ತಾತ್ಕಾಲಿಕವಾಗಿ ಮರುನಿಗದಿಪಡಿಸುವ ಆದೇಶ ಹೊರಡಿಸಿದೆ.ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುರಲ್ಕರ್ ವಿಕಾಸ್ ಕಿಶೋರ್ (ಭಾ.ಆ.ಸೇ) ಅವರು ಹೊರಡಿಸಿದ ಜ್ಞಾಪನದ ಪ್ರಕಾರ, ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿರುವುದರಿಂದ ವಿದ್ಯಾರ್ಥಿಗಳ ಪಾಠ ಕ್ರಮ ಕುಂಠಿತವಾಗದಂತೆ ಹೊಸ ವೇಳಾಪಟ್ಟಿ ಜಾರಿಗೊಳಿಸಲಾಗಿದೆ.ಸಮೀಕ್ಷೆ ಗ್ರೇಟರ್ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಅಕ್ಟೋಬರ್ […]
ಶ್ರೀನಿವಾಸಪುರ : ವಾಲ್ಮೀಕಿ ಮಹರ್ಷಿರವರ ಜ್ಞಾನವು ಸಂಪತ್ತು ಆನಂತವಾಗಿದ್ದು, ಅವರು ತಮ್ಮ ತಪಸ್ಸಿ ಫಲದಿಂದ ಭೂತ, ಭವಿಷತ್ ಕಾಲನ್ನು ಅರಿಯುತ್ತಿದ್ದರು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗ ಮಂಗಳವಾರ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಸಭೆಯನ್ನು ಉದ್ಗಾಟಿಸಿದರು.ಸ್ವತಃ ವಾಲ್ಮೀಕಿ ಮಹರ್ಷಿ ಪೂರ್ವಾಶ್ರಮದಲ್ಲಿ ಸ್ವಯಂ ಕಾಡಿನಲ್ಲಿ ಕಷ್ಟಗಳನ್ನ ಅನುಭವಿಸಿದ್ದರು. ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ ಇತ್ತು .ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಅವರು ನೀಡಿರುವ […]
ಶ್ರೀನಿವಾಸಪುರ : ಮಹಾತ್ಮಾಗಾಂಧೀಜಿ ಅಹಿಂಸೆ ಮಾರ್ಗದಲ್ಲಿ ಶಾಂತಿಯಿಂದ ಬಿಳಿಯರನ್ನು ತೊಲಗಿಸಿ ದೇಶಕ್ಕೆ ಸಾಮರಸ್ಯ ಸ್ವಾತಂತ್ರ ತಂದುಕೊಟ್ಟವರ ಆದರ್ಶಗಳು ಸರ್ವ ಕಾಲಕ್ಕೂ ಜನಸಾಮಾನ್ಯರಿಗೆ ಅನನ್ಯವಾಗಿದೆ ಎಂದು ಪಿಡಿಒ ಮಂಗಳಾಂಭ ಹೇಳಿದರು. ತಾಲೂಕು ದಳಸನೂರು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಪಂಚಾಯಿತಿಯಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಅಂಗವಾಗಿ ವಿಶೇಷ ಗ್ರಾಮ ಸಭೆಗೆ ಚಾಲನೆ ನೀಡಿ ಮಾತನಾಡಿ ಗಾಂಧಿಜಿ ಸತ್ಯ ಧರ್ಮ ಶಾಂತಿಯಿಂದ ದೇಶದಿಂದ ಬ್ರಿಟೀಷರನ್ನು ಹೊರ ಹಾಕಿ ಸ್ವಾತಂತ್ರ ತಂದು ಕೊಟ್ಟವರನ್ನು ಎಂದೆಂದಿಗೂ ಮೆರೆಯಬಾರದು ಎಂದರು. ಗಾಂಧೀಜಿ ಬದುಕು ಸರಳವಾಗಿ ರೂಪಿಸಿಕೊಂಡು […]
ಕೋಲಾರ : ಕೋಲಾರ ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇಕಡ 35 ರಷ್ಟು ಪೂರ್ಣಗೊಂಡಿದ್ದು, ನಿನ್ನೆ ಒಂದೇ ದಿನ 36 ಸಾವಿರ ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ಒಳಗೊಂಡ ಗಣತಿದಾರರ ತಂಡಕ್ಕೆ ಪ್ರತಿ ದಿನ 10 ಸಾವಿರ ಮನೆಗಳ ಸಮೀಕ್ಷೆ ನಡೆಸಲು […]
ಶ್ರೀನಿವಾಸಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕರ್ನಾಟಕ ರಾಜ್ಯದಾದ್ಯಂತ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಚುರುಕಾಗಿ ನಡೆಯುತ್ತಿದೆ.ಆದರೆ ಸಮೀಕ್ಷೆಯ ಉದ್ದೇಶವನ್ನು ಸರಿಯಾಗಿ ಅರಿಯದೆ, ಕೆಲವು ಪ್ರದೇಶಗಳಲ್ಲಿ ವದಂತಿಗಳು ಹರಡುತ್ತಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದೆ. ಗಣತಿದಾರರು ಮನೆಮನೆಗೆ ತೆರಳಿ ವಿವರ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ಪಡಿತರ ಚೀಟಿ ರದ್ದು ಮಾಡುವ ಉದ್ದೇಶದಿಂದಲೇ ಅಧಿಕಾರಿಗಳು ಬರುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಮೂಡಿದ್ದು, ಜನರು ಸರಿಯಾದ ಮಾಹಿತಿಯನ್ನು ನೀಡಲು ಹಿಂಜರಿಯುತ್ತಿರುವುದು ಅಧಿಕಾರಿಗಳಿಗೆ ಆತಂಕಕಾರಿ ಸಂಗತಿಯಾಗಿ ಪರಿಣಮಿಸಿದೆ. ಈ […]
ಶ್ರೀನಿವಾಸಪುರ : ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಸರ್ಕಾರ ಇಡಬೇಕಾದ ಹೆಜ್ಜೆಗಳನ್ನು ಈ ಸಮೀಕ್ಷೆ ಗುರ್ತಿಸಲಿದೆ . ಒಟ್ಟಿನಲ್ಲಿ ರಾಜ್ಯದ ಮುಂದಿನ ಪೀಳಿಗೆಗೆ ಅನುಕೂಲಕರವಾದ ಈ ಸಮೀಕ್ಷೆಯನ್ನು ಎಲ್ಲಾ ಜನರು ಸ್ವಾಗತಿಸಿ ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಮನವಿ ಮಾಡಿದರು.ಪುರಸಭೆ ವ್ಯಾಪ್ತಿಯ 18 ನೇ ವಾರ್ಡ್ನ ಬೈರಪಲ್ಲಿ ಗ್ರಾಮದಲ್ಲಿ ಭಾನುವಾರ ಸಮೀಕ್ಷೆ ಪರಿಶೀಲಿಸಿ ಮಾತನಾಡಿದರು.ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ನಿಖರವಾಗಿ ದಾಖಲಿಸುವ ಸಲುವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಕರ್ನಾಟಕ […]

