ಶ್ರೀನಿವಾಸಪುರ: ಕೋಲಾರದಿಂದ ಬರುವ ರಾಷ್ಟ್ರೀಯ ಹೆದ್ದಾರಿ, ಆಂಧ್ರಪ್ರದೇಶದ ಪುಂಗನೂರು ಮತ್ತು ಮದನಪಲ್ಲಿ ಕಡೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಾದ ಶ್ರೀನಿವಾಸಪುರ ತಾಲೂಕಿನ ರಸ್ತೆಗಳು ಗುಂಡಿಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿವೆ. ಎರಡು ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು — “ಇದೇ ರಸ್ತೆನಾ ಅಥವಾ ಗುಂಡಿಗಳ ಮೇಳನಾ?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.ನಗರಾಭಿವೃದ್ಧಿ ಇಲಾಖೆ ಮತ್ತು ಪWಆ ಅಧಿಕಾರಿಗಳ ನಿರ್ಲಕ್ಷ್ಯರಸ್ತೆಗಳ ದುಸ್ಥಿತಿ ಬಗ್ಗೆ ಹಲವರಿಂದ ಮರುವಿಮರ್ಶೆ ಆಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳುವಲ್ಲಿ […]
ಶ್ರೀನಿವಾಸಪುರ : ಆರ್ಆರ್ಎಸ್ ಸಂಘಟನೆಯನ್ನು ಅರ್ಥ ಮಾಡಿಕೊಳ್ಳದ ಮತಿ ಹೀನರು ಮನಬಂದತೆ ಮಾತನಾಡುತ್ತಾರೆ.ಎಂದು ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆರ್ಆರ್ಎಸ್ ಶತಮಾನೋತ್ಸವದ ಅಂಗವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ದೇಶದ ಹಿತ ರಕ್ಷಣೆಗಾಗಿ, ಹಗಲಿರಲು ಮನೆ ಮಠ ಬಿಟ್ಟು ಸ್ವಂಯಂಸೇವಕರು, ಪೂರ್ಣಾವಧಿ ಸ್ವಯಂಸೇವಕರು ಕಾಯುತ್ತಿದ್ದಾರೆ. ನೂರು ವರ್ಷಗಳ ಕಾಲ ದೇಶದಲ್ಲಿ ಸಂಸ್ಕಾರವನ್ನು ಬಿತ್ತಿ, ಸಮಾಜವನ್ನು ಪರಿವರ್ತನೆ ಮಾಡಲು ಚಿಂತನೆ ಮಾಡಿ ಹಗಲಿರಲು ಕೆಲಸ ಮಾಡುತ್ತಿದೆ. ಇಂತಹ ಸಂಘನೆಯನ್ನು ನೀಷೇಧಿಸಬೇಕು ಎನ್ನುವವರು ಮೂರ್ಖರು.ರಾಜ್ಯದಲ್ಲಿ ಸಚಿವರಾದ ಪ್ರಿಯಾಂಕ್ಖರ್ಗೆ, ಸಂತೋಷಲಾಡ್ […]
ಶ್ರೀನಿವಾಸಪುರ : ಪೊಲೀಸ್ ಇಲಾಖೆಯು ಸಾರ್ವಜನಿಕ ಶಾಂತಿ ಕಾಪಾಡುವಲ್ಲಿ ಸದಾ ಮುಂದೆ ಇರುತ್ತದೆ. ಅವರ ನೆಮ್ಮದಿ ಜೀವನವು ಇಲಾಖೆ ಮುಖ್ಯ. ಈ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದೇವಿ ಚಾಮುಂಡೇಶ್ವರಿ ಅನಗ್ರಹ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದರು. ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಇಲಾಖೆ ಅದೇಶದ ಅನುಸಾರ ಕಾರ್ಯವನ್ನು ನಿರ್ವಹಿಸಲು ಜಿಲ್ಲಾ ರಕ್ಷಾಣಾಧಿಕಾರಿ ಬಿ.ನಿಖಿಲ್ ಸಲಹೆ ನೀಡಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯ್ದ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಸಮಯದಲ್ಲಿ ಅಧಿಕಾರಿಗಳು […]
ಕೋಲಾರ : ನಗರದ ಅನೇಕ ವಾರ್ಡ್ಗಳಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಹೂಳು ತುಂಬಿ ಪರಿಸರದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ. ಮಳೆನೀರು ಹೊರಹರಿವು ಅಸಾಧ್ಯವಾಗಿರುವುದರಿಂದ ಹಲವೆಡೆ ಗಂಡಾಂತರದ ಪರಿಸ್ಥಿತಿ ಎದುರಾಗಿದ್ದು, ಸೊಳ್ಳೆಗಳ ವೃದ್ಧಿಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ.ನಗರದ ಸ್ವಚ್ಛತೆಗೆ ಸಂಬಂಧಿಸಿದ ತುರ್ತು ಕ್ರಮಕ್ಕೆ ಒತ್ತಾಯಿಸುತ್ತಾ ಹಿರಿಯ ಪತ್ರಕರ್ತ ಹಾಗೂ ಮನ್ವಂತರ ಪ್ರಕಾಶನದ ಅಧ್ಯಕ್ಷರಾದ ಪಾ.ಶ್ರಿ. ಅನಂತರಾಮ್ ನಗರಸಭೆಯ ಆಡಳಿತ ವರ್ಗ ಮತ್ತು ಸದಸ್ಯರ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅಂತರಗಂಗೆ […]
ಕೋಲಾರ : ಕೋಲಾರ ಜಿಲ್ಲೆಯಲ್ಲಿ ಅನೇಕ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದು, ಬಳಸದೆ ಇರುವುದರಿಂದ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಈ ಎಲ್ಲಾ ಭವನಗಳನ್ನು ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನಾಗಿ ಮಾರ್ಪಡಿಸಿ ಸ್ಥಳೀಯ ಯುವಜನತೆಗೆ ಉಪಯೋಗವಾಗುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್.ರವಿ ಅವರು ತಿಳಿಸಿದರು.ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ಪರಿಶಿಷ್ಟ […]
ಶ್ರೀನಿವಾಸಪುರ : ಇದೊಂದು ದೇಶಕ್ಕೆ ಅವಮಾನೀಯವಾದ ಘಟನೆ. ಈ ಘಟನೆಯು ಇಡಿ ದೇಶದಲ್ಲಿನ ಪ್ರಜೆಗೂ ನಡೆದಿರುವ ಅವಮಾನ. 17 ರಂದು ಕೋಲಾರ ಬಂದ್ಗೆ ಕರೆಕೊಟ್ಟಿದ್ದು, ಎಲ್ಲ ಸಮಾನಮನಸ್ಕರು ಕೈಜೋಡಿಸಿ ಬಂದ್ ಯಶ್ವಸಿಗೊಳಿಸಬೇಕಾಗಿ ರಾಜ್ಯ ದಲಿತ ಸಂಘಟನೆ ಹಿರಿಯ ಮುಖಂಡ ಎನ್.ಮುನಿಸ್ವಾಮಿ ಮನವಿ ಮಾಡಿದರು.ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ವಿವಿಧ ಸಂಘಟನೆಗಳಿಂದ ಜಿಲ್ಲಾ ಬಂದ್ ವಿಚಾರವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಸೂರ್ಯನಾರಾಯಣ ಮಾತನಾಡಿ ಸರ್ವೋಚ್ಚ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ಖಂಡನೀಯ. ಇಂದು […]
ಶ್ರೀನಿವಾಸಪುರ : ಕಳೆದ ಗುರುವಾರ ಮತ್ತು ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಪಟ್ಟಣದ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆ ನೀರು ಮನೆಗಳೊಳಗೆ ನುಗ್ಗಿ ಸಾರ್ವಜನಿಕರು ಹಲವು ಸಂಕಷ್ಟಗಳನ್ನು ಎದುರಿಸಿದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಜಿ.ಎನ್. ಸುದೀಂದ್ರ ಅವರ ನೇತೃತ್ವದ ತಂಡವು ಶನಿವಾರ ಸಂತೆ ಮೈದಾನ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಸ್ಥಳೀಯವಾಗಿ ಅವಲೋಕಿಸಿತು. ಇದೇ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು ಕೂಡ ಸ್ಥಳಕ್ಕೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮನೆಗಳಿಗೆ […]
ಕೋಲಾರ:- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨2025-28ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಚುನಾವಣೆ ನ.9 ರಂದು ನಿಗಧಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಅ.27 ಕೊನೆ ದಿನವಾಗಿದೆ ಎಂದು ಚುನಾವಣಾಧಿಕಾರಿ ಪಾ.ಶ್ರೀ.ಅನಂತರಾಮ ತಿಳಿಸಿದರು. ಪತ್ರಕರ್ತರ ಭವನದಲ್ಲಿ ಚುನಾವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕರಡು ಮತದಾರರಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅ.16 ಕೊನೆ ದಿನವಾಗಿದ್ದು, ಅ.,18 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಹಾಗೂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅ.19 ರಂದು […]
ಶ್ರೀನಿವಾಸಪುರ : ರಾಜ್ಯ ಸರ್ಕಾರವು ತನ್ನ ಜನಪರ ಅನ್ನಭಾಗ್ಯ ಯೋಜನೆಗೆ ಹೊಸ ರೂಪ ನೀಡಿದ್ದು, ಬಡ ಹಾಗೂ ಅಲ್ಪ ಆದಾಯ ವರ್ಗದ ಫಲಾನುಭವಿಗಳಿಗೆ ಮತ್ತೊಂದು ಮಹತ್ವದ ಅನುಕೂಲವನ್ನು ಒದಗಿಸಿದೆ. ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಆಹಾರ ಕಿಟ್ ವಿತರಣೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಯ ಸದಸ್ಯ (ಡಿಎಲ್ ಸಿ ಕೋಲಾರ ) ಶಬ್ಬೀರ್ ಅಹ್ಮದ್ ಪಾಷಾ ಸರ್ಕಾರದ […]

