

ಶ್ರೀನಿವಾಸಪುರ : ಆರ್ಆರ್ಎಸ್ ಸಂಘಟನೆಯನ್ನು ಅರ್ಥ ಮಾಡಿಕೊಳ್ಳದ ಮತಿ ಹೀನರು ಮನಬಂದತೆ ಮಾತನಾಡುತ್ತಾರೆ.ಎಂದು ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆರ್ಆರ್ಎಸ್ ಶತಮಾನೋತ್ಸವದ ಅಂಗವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ದೇಶದ ಹಿತ ರಕ್ಷಣೆಗಾಗಿ, ಹಗಲಿರಲು ಮನೆ ಮಠ ಬಿಟ್ಟು ಸ್ವಂಯಂಸೇವಕರು, ಪೂರ್ಣಾವಧಿ ಸ್ವಯಂಸೇವಕರು ಕಾಯುತ್ತಿದ್ದಾರೆ. ನೂರು ವರ್ಷಗಳ ಕಾಲ ದೇಶದಲ್ಲಿ ಸಂಸ್ಕಾರವನ್ನು ಬಿತ್ತಿ, ಸಮಾಜವನ್ನು ಪರಿವರ್ತನೆ ಮಾಡಲು ಚಿಂತನೆ ಮಾಡಿ ಹಗಲಿರಲು ಕೆಲಸ ಮಾಡುತ್ತಿದೆ. ಇಂತಹ ಸಂಘನೆಯನ್ನು ನೀಷೇಧಿಸಬೇಕು ಎನ್ನುವವರು ಮೂರ್ಖರು.
ರಾಜ್ಯದಲ್ಲಿ ಸಚಿವರಾದ ಪ್ರಿಯಾಂಕ್ಖರ್ಗೆ, ಸಂತೋಷಲಾಡ್ , ಎಂಎಲ್ಸಿ ಹರಿಪ್ರಸಾದ್ ರವರು ತಮಗೆ ಇಷ್ಟ ಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇವರು ನವಬಂರ್ನಲ್ಲಿ ಆಗುವ ಕ್ರಾಂತಿಯಲ್ಲಿ ತಮ್ಮ ಸೀಟ್ನ್ನು ಭದ್ರಪಡಿಸಿಕೊಳ್ಳಲು ಟವಲ್ ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಇವರು ಮಾಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ.
ಇವರು ಮಾಡುವ ಕೆಲಸದಿಂದ ಸಮಾಜದಲ್ಲಿ ಜಾತಿಗಳ ಮಧ್ಯೆ ಸಂಘರ್ಷವನ್ನು ಸೃಷ್ಟಿ ಮಾಡುತ್ತಿದ್ದಾರೆ. ಇಂದು ರಾಜ್ಯ ಸರ್ಕಾರ ಅಭಿವೃದ್ಧಿ ಪಥದಲ್ಲಿ ಶೂನ್ಯ. , ದೇಶ ವಿದೇಶದಲ್ಲಿ ನಮ್ಮ ರಾಜ್ಯದಲ್ಲಿ ಆಭಿವೃದ್ಧಿಯಾಗದಿರುವಕ್ಕೆ ಹೀನಾಯವಾಗಿ ಆಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಲೋಪದೋಷಗಳನ್ನು ಮುಚ್ಚಿಡಲು ಯಾವದೋ ಒಂದು ರೀತಿಯಲ್ಲಿ ಅಂತಕ ಸೃಷ್ಟಿ ಮಾಡುತ್ತಿದ್ದಾರೆ. ಜಾತಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಹೈಕೋರ್ಟ್ ಯಾರದೇ ಆಗಲಿ ಮಾಹತಿಯನ್ನ ಸುರಕ್ಷಿತವಾಗಿ ಇಡಬೇಕೆಂದುಆದೇಶ ನೀಡಿದೆ.
ಆರ್ಆರ್ಎಸ್ ಸಂಘದವರು ಯಾವುದೇ ಕಾರಣಕ್ಕೂ ಏರಿಗೂ ಬೆದರಿಕೆ ಹಾಕುವುದಿಲ್ಲ ಪ್ರಿಯಾಂಕ್ ಖರ್ಗೆ ರವರೇ ತಮ್ಮ ಹಿಂಬಾಲಕರಿಗೆ ಹೇಳಿ ಬೆದರಿಕೆ ಕರೆಯನ್ನ ಮಾಡಿಸಿಕೊಂಡಿರಬೇಕು ಎಂಬ ಅನುಮಾವಿದೆ ಎಂದರು. ಬಿ.ಕೆ.ಹರಿಪ್ರಸಾದ್ ಒಬ್ಬ ಬಚ್ಚಲುಬಾಯಿ. ವಿಧಾನಸೌದ ಪ್ರಾಂಗಣದಲ್ಲಿಯೇ ಪಾಕಿಸ್ತಾನ್ಗೆ ಜಯ್ ಎಂದವರನ್ನ ಬಂದಿಸದೆ ಇರುವುದು ಒಂದು ರೀತಿಯ ಅಮಾನವೀಯ ಘಟನೆ.
ಇಂದು ಆರ್ಆರ್ಎಸ್ ಸಂಘಟನೆಯು ಪ್ರಪಂಚದಲ್ಲಿಯೇ ದೊಡ್ಡ ಸಂಘಟನೆ . ಇಂತಹ ಸಂಘಟನೆಯನ್ನು ಮನಬಂದಂತೆ ಮಾತನಾಡುತ್ತಿರುವ ಸಿದ್ದರಾಮಯ್ಯರವರಿಗೆ ಶೋಭೆ ತರುವುದಿಲ್ಲ. ಇದನ್ನ ನಿಲ್ಲಿಸಬೇಕು. ತಮ್ಮ ಸಚಿವ ಸಂಪುಟದಲ್ಲಿ ಇರುವ ಪ್ರಿಯಾಂಕ್ಖರ್ಗೆ ಒಬ್ಬ ಪಂಡಿತ, ಬಿ.ಕೆ.ಹರಿಪ್ರಸಾದ್ ಬುದ್ದಿಭ್ರಮಣೆಯ ವ್ಯಕ್ತಿ. ಈ ಹಿಂದೆ ನಿಮ್ಮದೆ ಸರ್ಕಾರವಿದ್ದಾಗ ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳು ಜಾಸ್ತಿ ಇದ್ದವು ಆಗ ನಿಮ್ಮ ಸರ್ಕಾರ ಅಂತರವರ ವಿರುದ್ದ ಕ್ರಕೈಗೊಳ್ಳದೆ ಸಮ್ಮನಿರುವುದು ಯಾವ ನ್ಯಾಯ ಎಂದು ಪ್ರಶ್ನಿದರು?
ಈ ಹಿಂದೆ ನೆಹರು, ಶಾಸ್ತ್ರಿ, ಇಂದಿರಾಗಾಂದಿ , ಪ್ರಣಬ್ಮುಖರ್ಜಿ ರವರೇ ಆರ್ಆರ್ಎಸ್ ಸಂಘಟನೆಯ ಕಾರ್ಯವೈಖರಿಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತಿಹಾಸವನ್ನು ಅರಿತು ಮಾತನಾಡಬೇಕು. ರಾಜ್ಯ ಸರ್ಕಾರ ಸರ್ಕಾರಿ ನೌಕರರು ಆರ್ಆರ್ಎಸ್ ಪಥ ಸಂಚಲದಲ್ಲಿ ಪಾಲ್ಗುಳ್ಳಬಾರುದು ಎಂದು ಆದೇಶ ನೀಡಿರುವುದು ಸರಿಯಲ್ಲಿ. ಇದು ಯಾವುದೇ ರಾಜಕೀಯ ಪಕ್ಷದ ಸಂಘಟನೆ ಅಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗನಿಂದಲೂ ಎಲ್ಲಾ ರೀತಿಯ ತೆರಿಗೆಗಳನ್ನು ಹಾಕಿ ಜನರ ಜೋಬಿಗೆ ಕೈಹಾಕುತ್ತಿದ್ದಾರೆ. ಸರ್ಕಾರಕ್ಕೆ ಜನರ ಶಾಪ ತಟ್ಟುತ್ತದೆ. ದೇಶದಲ್ಲಿ ಒಂದು ಕಾನೂನು ವ್ಯವಸ್ಥೆ ಇದೆ. ಅದನ್ನ ಅಡ್ಡಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆರ್ಆರ್ಎಸ್ ಕಾರ್ಯಕ್ರಮವನ್ನ ಸರ್ಕಾರಿ ಜಾಗಗಳಲ್ಲಿ ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಅದೇ ರೀತಿಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡಬಾರದು ಎಂದು ಆದೇಶ ಮಾಡಲಿ ನೋಡೋಣ. ಅದನ್ನ ಅದೇಶ ಮಾಡಲು ಇವರಿಗೆ ತಾಕತ್ತು ಇಲ್ಲ. ಕೇಡುಗಾಲ ಬಂದಾಗ ನಾಯಿ ಮೊಟ್ಟೆ ಇಡುತ್ತದೆ ಎಂದರೆ ಇದು ಉದಾಹರಣೆ ನೀಡಿದರು.
ಈ ಸಮಯದಲ್ಲಿ ಮಂಡಲ ಅಧ್ಯಕ್ಷ ರೋಣೂರು ಚಂದ್ರಶೇಖರ್, ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ ಇದ್ದರು

