

ಶ್ರೀನಿವಾಸಪುರ : ಪೊಲೀಸ್ ಇಲಾಖೆಯು ಸಾರ್ವಜನಿಕ ಶಾಂತಿ ಕಾಪಾಡುವಲ್ಲಿ ಸದಾ ಮುಂದೆ ಇರುತ್ತದೆ. ಅವರ ನೆಮ್ಮದಿ ಜೀವನವು ಇಲಾಖೆ ಮುಖ್ಯ. ಈ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದೇವಿ ಚಾಮುಂಡೇಶ್ವರಿ ಅನಗ್ರಹ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದರು. ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಇಲಾಖೆ ಅದೇಶದ ಅನುಸಾರ ಕಾರ್ಯವನ್ನು ನಿರ್ವಹಿಸಲು ಜಿಲ್ಲಾ ರಕ್ಷಾಣಾಧಿಕಾರಿ ಬಿ.ನಿಖಿಲ್ ಸಲಹೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯ್ದ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಮಯದಲ್ಲಿ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಪರಸ್ಪರ ಶುಭಾಶಯಗಲನ್ನು ವಿನಿಮಯ ಮಾಡಿಕೊಂಡರು. ಪೂಜಾ ಕಾರ್ಯಕ್ರಮವನ್ನು ಅರುಣ್ಕುಮಾರ್ ತಂಡ ನೆರವೇರಿಸಿತು. ಅಡಿಷಿನಲ್ ಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಮನಿಷಾ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವಕೊಳ್ಳ, ಪಿಎಸ್ಐ ಜಯರಾಮ್ ಹಾಗು ಸಿಬ್ಬಂದಿ ವರ್ಗದವರು ಇದ್ದರು.

