ಬೈಂದೂರು ಹೋಲಿಕ್ರಾಸ್‌  ಚರ್ಚಿನಲ್ಲಿ ಕಳೆದ 7 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ವಂದನೀಯ ಧರ್ಮಗುರು  ವಿನ್ಸೆಂಟ್‌ ಕುವೆಲ್ಲೊ ರವರು  ಶಿರ್ವ ವಲಯದ ಮುದರಂಗಡಿ ಸೈಂಟ್ ಪ್ರಾನ್ಸಿಸ್‌ ಕ್ಸೇವಿಯರ್ ಚರ್ಚಿಗೆ ವರ್ಗಾವಣೆ ಗೊಂಡಿದ್ದು ಮೇ 13ರಂದು ನಿರ್ಗಮಿಸಲ್ಲಿದ್ದಾರೆ. ಇವರು ತಮ್ಮ ಸೇವಾವಧಿಯಲ್ಲಿ ದಾನಿಗಳ ಸಹಾಯದಿಂದ ಆರೋಗ್ಯ ನಿಧಿ ಸ್ಥಾಪನೆ ಇಗರ್ಜಿ ಗುಡ್ಡೆ ಅಭಿವೃದ್ದಿ, ,ಇಗರ್ಜಿ ವಠಾರಕ್ಕೆ ಇಂಟರ್ ಲಾಕ್‌ ಅಳವಡಿಕೆ, ಚರ್ಚ್ ರಸ್ತೆಯ ಅಗಲಿಕರಣಕ್ಕೆ ಶ್ರಮಿಸಿದ್ದರು  ಪರಿಸರದ ಎಲ್ಲಾ ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.   ಅವರ ಸ್ಥಾನಕ್ಕೆ ಕಾರ್ಕಳ ಸಮೀಪದ ಪರಪ್ಪಾಡಿ ಚರ್ಚಿನ ಧರ್ಮಗುರು ರೆ.ಫಾ ಡೆನ್ನಿಸ್‌ ಡಿ ಸೋಜಾರವರು ನಿಯುಕ್ತಿಗೊಂಡಿದ್ದು ಮೇ 12 ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ

Read More

ಕುಂದಾಪುರ: ಏಪ್ರಿಲ್ 24ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಗಾಂಗ ದಾನ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು.ದೇಹದಾನದ ಮಹತ್ವದ ಕುರಿತು ಮಾತನಾಡಿದ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಅಂಗಾಂಗ ಕಸಿ ವಿಭಾಗದ ಸಂಯೋಜಕರಾದ ಪ್ರೀತಿ ಶೆಟ್ಟಿ ಮಾತನಾಡಿ ಬದುಕಿರುವಾಗ ಕೆಲವು ಅಂಗಾಂಗವನ್ನು ದಾನ ಮಾಡಬಹುದು. ದೇಹದಾನ ಶ್ರೇಷ್ಠ ದಾನ. ಯಾಕೆಂದರೆ ಇನ್ನೋರ್ವರಿಗೆ ನೀವು ಬದುಕನ್ನು ನೀಡಿದಂತಹ ಪುಣ್ಯ ಸಲ್ಲುತ್ತದೆ. ಬೇರೆ ಬೇರೆ ಕಾರಣಕ್ಕೆ ಮರಣ ಹೊಂದಿದಾಗಲೂ ಅಂಗಾಂಗಳನ್ನು ದಾನ ಮಾಡಬಹುದು. ಆದರೆ ಬೇರೆ ಬೇರೆ ಅಂಗಾಂಗಗಳಿಗೆ ಸಮಯದ ಮಿತಿ […]

Read More

Reported and photography by Ganesh Nayak ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು, ವಾಣಿಜ್ಯ ಮತ್ತು ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ವಿಭಾಗದ ಮೂಲಕ, ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಹಯೋಗದೊಂದಿಗೆ, ಏಪ್ರಿಲ್ 24, 2026 ರಂದು ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಮತ್ತು ಮಂಗಳೂರಿನ ಬೈಕಂಪಾಡಿಯಲ್ಲಿರುವ ಗುರುಚರಣ್ ಇಂಡಸ್ಟ್ರೀಸ್‌ಗೆ ಕೈಗಾರಿಕಾ ಭೇಟಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಭೇಟಿಯು ವಿದ್ಯಾರ್ಥಿಗಳಿಗೆ ನೈಜ-ಪ್ರಪಂಚದ ಕೈಗಾರಿಕಾ ಕಾರ್ಯಾಚರಣೆಗಳಿಗೆ ಪ್ರಾಯೋಗಿಕ ಮಾನ್ಯತೆಯನ್ನು ಒದಗಿಸುವ ಮತ್ತು ಸೈದ್ಧಾಂತಿಕ ಜ್ಞಾನ ಮತ್ತು […]

Read More

ಹೋಮಿಯೋಪತಿಯ ಸಂಸ್ಥಾಪಕ ಡಾ. ಸ್ಯಾಮ್ಯುಯೆಲ್ ಹಾನೆಮನ್ ಅವರ 271 ನೇ ಜನ್ಮ ದಿನಾಚರಣೆಯ ಸ್ಮರಣರ‍್ಥವಾಗಿ, ವಿಶ್ವ ಹೋಮಿಯೋಪತಿ ದಿನ 2026 ಅನ್ನು 25.04.2026 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಚರಿಸಲಾಯಿತು. ಉದ್ಘಾಟನಾ ಕರ‍್ಯಕ್ರಮವು ಬೆಳಿಗ್ಗೆ 9:30 ಕ್ಕೆ ಕಾಲೇಜು ಸಭಾಂಗಣದಲ್ಲಿ ಪ್ರಾರಂಭವಾಯಿತು. ಈ ಕರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ಆರ್. ತಿಮ್ಮಯ್ಯ ಭಾಗವಹಿಸಿದ್ದರು. ಗೌರವಾನ್ವಿತ ಗಣ್ಯ […]

Read More

ಶ್ರೀನಿವಾಸಪುರ: ಗ್ರಾಮೀಣ ಸ್ವಚ್ಛತೆ, ಮೂಲಭೂತ ಸೌಲಭ್ಯಗಳ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಮಾನ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ತಾಲ್ಲೂಕಿನ ಗೌನಿಪಲ್ಲಿ, ರಾಯಲ್ಪಡು, ನೆಲವಂಕಿ–ಲಕ್ಷ್ಮೀಪುರ ಹಾಗೂ ತಾಡಿಗೋಳ್ ಕ್ರಾಸ್ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಲೋಕಾಯುಕ್ತರು, ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿ, ಸ್ವಚ್ಛತಾ ಕಾರ್ಯಕ್ರಮಗಳು ಕೇವಲ ಸಾಂಕೇತಿಕವಾಗದೇ ನಿರಂತರ ಚಟುವಟಿಕೆಯಾಗಬೇಕು ಎಂದು ಹೇಳಿದರು. ತಾಲ್ಲೂಕಿನ ಹಲವು […]

Read More

ಮಂಗಳೂರು: ಕರಾವಳಿಯ ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಆಯಾಮ ನೀಡುವ ಮಹತ್ವದ ಬೆಳವಣಿಗೆಯೊಂದರಲ್ಲಿ, ರೋಹನ್ ಕಾರ್ಪೊರೇಷನ್ ಹಾಗೂ ‘ರೇನ್ ಮೇಕರ್ಸ್ ವರ್ಕ್‌ಸ್ಪೇಸ್’ ನಡುವೆ ಕಾರ್ಯಾಲಯ (Work Space) ಸ್ಥಾಪನೆಗಾಗಿ ಸಂಯುಕ್ತ ಒಕ್ಕೂಟ (Joint Venture) ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಅನ್ವಯ ರೋಹನ್ ಸ್ಕ್ವೇರ್ ಕಟ್ಟಡದ 4ನೇ ಮಹಡಿಯಲ್ಲಿ ಅತ್ಯಾಧುನಿಕ ವರ್ಕ್‌ಸ್ಪೇಸ್ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೋ ಮತ್ತು ನಿರ್ದೇಶಕ ಡಿಯೋನ್ ಮೊಂತೆರೋ ಅವರು, ರೇನ್ ಮೇಕರ್ಸ್ […]

Read More

ಕುಂದಾಪುರ; 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ. ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ಮಂದಿ ವಿಶಿಷ್ಟ ಶ್ರೇಣಿ 25 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆ 7 ಮಂದಿ ವಿದ್ಯಾಥಿಗಳು ದ್ವಿತೀಯ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ರಕ್ಷಾ ಪೂಜಾರಿ 561 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ಪಲ್ಲವಿ 555 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ತನ್ವಿ 540 ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು […]

Read More

ಪಡುಕೋಣೆ; ಪಡುಕೋಣೆ ಸಂತ ಅಂತೋನಿ ಚರ್ಚಿನಲ್ಲಿ ದಿನಾಂಕ 21.5.2026 ರಿಂದ ದಿ. 23.5.2026 ರ ವರೆಗೆ 1ನೇ ತರಗತಿಯಿಂದ 10ನೇ ತರಗತಿಯ ತರಗತಿಯ ಮಕ್ಕಳಿಗೆ 3 ದಿನಗಳ ಬೇಸಿಗೆ ಶಿಬಿರವನ್ನು ನಡೆಸಲಾಯಿತು. ಶಿಬಿರವನ್ನು ಅತಿಥಿಗಳು ದೀಪ ಬೆಳಗಿಸಿ,ಗುಲಾಬಿ ಹೂವಿನ ಗಿಡ ಕುಂಡದಲ್ಲಿ ನೆಟ್ಟು ಆ ಗಿಡಕ್ಕೆ ನೀರು ಎರೆದು ಉದ್ಘಾಟಿಸಿದರು. ಚರ್ಚಿನ ಧರ್ಮಗುರುಗಳಾದ ವಂ। ಫಾ।ಪ್ರಾನ್ಸಿಸ್ ಕರ್ನೆಲಿಯೊ, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಜೋಸೆಫ್ ಡಿ’ಸಿಲ್ವಾ ಶುಭ ಕೋರಿದರು. ಅನುಗ್ರಹ ಕೇಂದ್ರ ಉಡುಪಿಯಿಂದ ಮಿಶಿನರಿ ಸಂಘದ ಕೇಂದ್ರಿಯ […]

Read More

ಹೊಸತನದ ಅನ್ವೇಷಣೆಗೆ ಹಳೆದಾದ ಸಂಗತಿಗಳನ್ನು ಜೋಡಿಸಲು ಪ್ರಯತ್ನಿಸಿ ಡಾ.ಶಿವಾನಂದ ಹೆಗ್ಡೆ ಕೆರೆಮನೆ. ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ(MIT) ರಾಷ್ಟ್ರಮಟ್ಟದ ಅಂತರ್ ಕಾಲೇಜು ತಾಂತ್ರಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ ‘ಸಾವಿಷ್ಕರ್-2026’ ಕ್ಕೆ ಗುರುವಾರ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಶಿವಾನಂದ ಹೆಗಡೆ ಕೆರೆಮನೆ ಅವರು, “ತಂತ್ರಜ್ಞಾನದ ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಕಲೆ,ತಂತ್ರಜ್ಞಾನ. ಹಾಗೂ ಕ್ರೀಡಾ  ಸಮ್ಮಿಲನವೇ ಜೀವನದ ನಿಜವಾದ […]

Read More
1 24 25 26 27 28 561