

ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಹೋಲಿ ರೋಜರಿ ಆ.ಮಾ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಾರಂಭೋತ್ಸವ ಸಂಭ್ರಮದಿಂದ ಸೋಮವಾರ ಜರಗಿತು.
ಸೈಂಟ್ ಮೇರಿಸ್ ಪ.ಪೂ ಕಾಲೇಜು ಹಾಗೂ ಹೋಲಿ ರೋಜರಿ ಆ.ಮಾ.ಶಾಲೆಗೆ ನೂತನ ಪ್ರಾಂಶುಪಾಲರಾಗಿ ಆಗಮಿಸಿದ ವಂ.ಫಾ.ರೋಲ್ವಿನ್ ಫೆರ್ನಾಂಡಿಸ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು.ಶಾಲಾ ಜಂಟಿ ಕಾರ್ಯದರ್ಶಿ, ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ.ಫಾ.ಫೌಲ್ ರೇಗೋ ಶುಭ ಹಾರೈಸಿದರು.ವೇದಿಕೆಯಲ್ಲಿ ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಡಿಸಿಲ್ವಾ,ಹೋಲಿ ರೋಜರಿ ಆ.ಮಾ.ಶಾಲೆಯ ಹಿರಿಯ ಶಿಕ್ಷಕಿ ನೀತಾ ಉಪಸ್ಥಿತರಿದ್ದರು.ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಂತಿ ಬರೆಟ್ಟೋ ಸ್ವಾಗತಿಸಿದರು.ಕಾಲೇಜಿನ ಹಿರಿಯ ಉಪಸ್ಯಾಸಕಿ ರೇಶ್ಮಾ ಫೆರ್ನಾಂಡಿಸ್ ಪರಿಚಯಿಸಿದರು.ಶಿಕ್ಷಕರಾದ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಪ್ರಶಾಂತ್ ಲೂಯಿಸ್ ವಂದಿಸಿದರು.















