

ಗಂಗೊಳ್ಳಿ 1- -6-2026 ರಂದು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ) ಆರಂಭೋತ್ಸವದ ಸಂಭ್ರಮಾಚರಣೆ ಆಚರಿಸಲಾಯಿತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಿದ ಉಚಿತ ಪಠ್ಯಪುಸ್ತಕವಲ್ಲದೆ ಉಚಿತ ನೋಟ್ಸ್ ಪುಸ್ತಕ, ಬ್ಯಾಗ್, ಸಮವಸ್ತ್ರಗಳನ್ನು ವಿತರಿಸಲಾಯಿತು. ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ಗ್ರೇಸಿ ಲೋಬೊ ಮಾತನಾಡಿ ‘ನಮ್ಮ ಜೀವಮಾನದ ಸಾಧನೆಗೆ ಶಿಕ್ಷಣವೇ ಒಂದು ದೊಡ್ಡ ಅಸ್ತ್ರ’ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯನಿ ಭಗಿನಿ ಕ್ರೆಸೆನ್ಸ್ ‘ ಶಾಲೆಯಲ್ಲಿರುವ ಕಲಿಕಾ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಂಡು ಸಾಧಿಸಿ ‘ ಎಂಬ ಸಂದೇಶ ನೀಡಿದರು. ಸಹಾಯಕ ಮುಖ್ಯೋಪಾಧ್ಯಾಯನಿ ಭಗಿನಿ ಆನೆಟ್ ಹಾಗೂ ಶಿಕ್ಷಕ ಶಿಕ್ಷಕರೇತರ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕರಾದ ಗಣೇಶ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಯೊಂದಿಗೆ ವಿಶೇಷ ಭೋಜನವನ್ನು ನೀಡಲಾಯಿತು.





