ಮಂಗಳೂರು; ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಸಾರ್ವಜನಿಕ ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ‘ಸ್ವಚ್ಛ ಬಸ್ಸು ನಿಲ್ದಾಣ, ಸ್ವಸ್ಥ ಜೀವನ’ ಎಂಬ ಶೀರ್ಷಿಕೆಯ ಬೀದಿ ನಾಟಕವನ್ನು ಬಿಜೈಯ ಕೆಎಸ್ಆರ್.ಟಿ.ಸಿ ಬಸ್ ತಂಗುದಾಣದಲ್ಲಿ ಜುಲೈ 12ರಂದು ಪ್ರದರ್ಶಿಸಿದರು. ಈ ಬೀದಿನಾಟಕದ ಮೂಲಕ ಸಾರ್ವಜನಿಕವಾಗಿ ಉಗುಳುವುದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡುವುದು ಮುಂತಾದ ವಿಷಯಗಳ ಮೇಲೆ ಈ ಬೀದಿ ನಾಟಕ ಬೆಳಕು ಚೆಲ್ಲಿದೆ.ಸಾರ್ವಜನಿಕರು ಜವಾಬ್ದಾರಿಯುತ […]
ಹೇರಾಡಿ-ಬಾರ್ಕೂರಿನ ಶಾಂತ ಕರಾವಳಿ ಹಳ್ಳಿಯಲ್ಲಿ, SRSMNHPS ಜುಲೈ 10, 2025 ರಂದು ಎರಡು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ತನ್ನ ಪ್ರಯಾಣದ ನಿರ್ಣಾಯಕ ಕ್ಷಣವನ್ನು ಆಚರಿಸಿತು: 1925 ರಲ್ಲಿ ಮಸ್ಕಿಬೈಲ್ ರಾಮಚಂದ್ರಯ್ಯ ಅವರು ಸ್ಥಾಪಿಸಿದರು, ಅವರು 35 ವರ್ಷಗಳ ಕಾಲ ಅದರ ಸ್ಥಾಪಕ-ವರದಿಗಾರರಾಗಿ ಮುನ್ನಡೆಸಿದರು, ಈ ಶಾಲೆಯು ಪ್ರತಿಷ್ಠಿತ ಕನ್ನಡ ಮಾಧ್ಯಮ ಸಂಸ್ಥೆಯಾಗಿ ಬೆಳೆಯಿತು. 1988 ರಲ್ಲಿ ಹಳೆಯ ವಿದ್ಯಾರ್ಥಿಗಳಾದ ಮಸ್ಕಿಬೈಲ್ ಆನಂದ್ ಶೆಟ್ಟಿ ಮತ್ತು ಸಹೋದರರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಕ್ಯಾಂಪಸ್ ಅನ್ನು ಪುನರ್ನಿರ್ಮಿಸಿದಾಗ ಪುನರುಜ್ಜೀವನ ಉಂಟಾಯಿತು, ಅದರ […]
ಉಡುಪಿ,ಜು.11; ಇಂದು ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ದೋಣಿ ಮಗುಚಿ ಮೃತಪಟ್ಟ ಉದ್ಯಾವರ ಗ್ರಾಮದ ಪಿತ್ರೋಡಿಯ ಮೀನುಗಾರ ನೀಲಾಧರ ಜಿ. ತಿಂಗಳಾಯ ರವರ ಮನೆಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿಯವರೊಂದಿಗೆ ಸಮಾಲೋಚನೆ ನಡೆಸಿ ಮೀನುಗಾರಿಕೆ ಇಲಾಖೆ ಸಚಿವರಾದ ಶ್ರೀ ಮಾಂಕಾಳ ವೈದ್ಯ ರವರಿಗೆ ಘಟನೆಯ ಮಾಹಿತಿ ನೀಡಿ, ತಕ್ಷಣ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ₹10 ಲಕ್ಷ ಪರಿಹಾರವನ್ನು ಒದಗಿಸುವಂತೆ ಮನವಿ […]
Investiture Ceremony of IT Associations of St Joseph’s University, Bengaluru 2025-26 ಬೆಂಗಳೂರು ; ಕಂಪ್ಯೂಟರ್ ಸೈನ್ಸ್ ವಿಭಾಗ, ಸೈಂಟ್ ಜೋಸೆಫ್ ವಿಶ್ವವಿದ್ಯಾಲಯವು, ತನ್ನ ಪ್ರತಿಷ್ಠಿತ ವಿದ್ಯಾರ್ಥಿ ಸಂಘಗಳಾದ ಸೈಬರ್ನೆಟಿಕ್ಸ್ ಅಸೋಸಿಯೇಷನ್ (ಯುಜಿ) ಮತ್ತು ಟೆಕ್ನೋಫೈಟ್ ಅಸೋಸಿಯೇಷನ್ (ಪಿಜಿ)ಗಳ ಉದ್ಘಾಟನೆ ಮತ್ತು ಅಧಿಕಾರ ಸ್ವೀಕಾರ ಸಮಾರಂಭವನ್ನು 9ನೇ ಜುಲೈ 2025ರಂದು, ಪಿಜಿ ಬ್ಲಾಕ್ನ ಕ್ಷೇವಿಯರ್ ಸಭಾಂಗಣದಲ್ಲಿ ನಡೆಸಿತು. ಬೆಳಗ್ಗೆ 9:00 ರಿಂದ 10:00 ಗಂಟೆಯವರೆಗೆ ನಡೆಯಿತು.ಸಮಾರಂಭದಲ್ಲಿ ವಂ। ಡೆನ್ಜಿಲ್ ಲೋಬೋ ಎಸ್.ಜೆ., ಶಾಲಾ ನಿರ್ದೇಶಕ, […]
ಶಂಕರನಾರಾಯಣ; ಮದರ್ ತೆರೆಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದಲ್ಲಿ ಗುರು ಪೂರ್ಣಿಮೆ ದಿನದ ಸಂಭ್ರಮಾಚರಣೆ ಗುರು ಎಂದರೆ ವ್ಯಕ್ತಿಯಲ್ಲ ಅದೊಂದು ಶಕ್ತಿ. ಗುರು ಶಿಷ್ಯರ ನಡುವೆ ಇರುವ ಪವಿತ್ರ ಬಾಂಧವ್ಯದ ಪ್ರತೀಕವಾದ ಗುರುಪೂರ್ಣಿಮೆ ದಿನವನ್ನು ಮದರ್ ತೆರೆಸಾ ಮೆಮೋರಿಯಲ್ ಶಾಲಾ ವಿಭಾಗದಲ್ಲಿ ದಿನಾಂಕ 10 /7 2025 ರಂದು ಭಾವಪೂರ್ವಕವಾಗಿ ಆಚರಿಸಲಾಯಿತು . ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುವಿನ ಮೇಲೆ ಇರುವ ಭಕ್ತಿ ಹಾಗೂ ಗುರು ಶಿಷ್ಯರ ನಡುವಿನ ಬಾಂಧವ್ಯವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಪ್ರಹಸನ ,ಭಾಷಣ ನೃತ್ಯ […]
ಮಂಗಳೂರು; ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (FMCI) ಒಂದು ಅಂಗವಾದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು (FMHMC), ತನ್ನ 40 ವರ್ಷಗಳ ಆರೋಗ್ಯ ಸೇವೆಯ ರೂಬಿ ಮಹೋತ್ಸವ (Ruby Jubilee) ಆಚರಣೆಯನ್ನು ಜುಲೈ 14, 2025 ರಂದು ಸೋಮವಾರ ಸಂಜೆ 5 ರಿಂದ ರಾತ್ರಿ 10 ರವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ, FMCI ನಿರ್ದೇಶಕರಾದ ರೆ.ಫಾ ಫೌಸ್ಟಿನ್ ಲ್ಯೂಕಾಸ್ ಲೋಬೊ ಮತ್ತು FMHMC&H ಆಡಳಿತಾಧಿಕಾರಿ ರೆ.ಫಾ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರ ಸಮರ್ಥ […]
ಮಂಗಳೂರು ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಬಜ್ಜೋಡಿಯ ಸಂದೇಶ ಪ್ರತಿಷ್ಟಾನದಲ್ಲಿ 13, ಜುಲೈ 2025ರಂದು ಪ್ರಖ್ಯಾತ ಸಾಹಿತಿಗಳಾದ ಜೊ.ಸಾ.ಆಲ್ವಾರಿಸ್ರವರು ರಚಿಸಿದ ಕೊಂಕಣಿ ಭಾಷೆಯ ಕನ್ನಡ ಲಿಪಿಯ ಪ್ರಪ್ರಥಮ ಕಾದಂಬರಿ ಪ್ರಕಟವಾಗಿ 75 ವರ್ಷ ತುಂಬುವ ಸಂದರ್ಭದಲ್ಲಿ, ʼಆಂಜೆಲ್-75ʼ ಶೀರ್ಷಿಕೆಯಡಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿಕೊಳ್ಳಲಿದ್ದಾರೆ. ಡಾ| ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ| ಗಣನಾಥ ಎಕ್ಕಾರ್ರವರು ಮುಖ್ಯ ಅತಿಥಿಯಾಗಿ, ಕೊಂಕಣಿ ನಾಟಕ ಸಭೆಯ ಅಧ್ಯಕ್ಷರಾದ […]
ಕುಂದಾಪುರದ;ಆಷಾಢ ಹುಣ್ಣಿಮೆಯ ಪವಿತ್ರ ದಿನದಂದು ಆಚರಿಸಲ್ಪಡುವ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಆರ್. ಎನ್. ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಆರತಿ ಬೆಳಗಿಸಿ ಕಾಲಿಗೆ ನಮಸ್ಕರಿಸುವ ಮೂಲಕ ಶುಭಸಂದರ್ಭವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರು ಭವಿಷ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಗುರು ಸ್ಥಾನದಲ್ಲಿರಬೇಕಾದ ಅವಕಾಶ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಡಿ.ಬಿ.ಕೃಷ್ಣಮೂರ್ತಿಯವರು ಗುರು ಪೂರ್ಣಿಮೆಯ ವಿಶೇಷತೆಯನ್ನು ತಿಳಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರ್ವಹಿಸಿದರು.

