ಕುಂದಾಪುರ;”ಮನಸ್ಸನ್ನು ಪ್ರಶಾಂತವಾಗಿಡಲು ಮತ್ತು ಮನಸ್ಸಿನ ಚಂಚಲತೆಯನ್ನು ದೂರ ಮಾಡಲು ಯೋಗ ಸಹಾಯಕ. ದೇಹದ ಪ್ರತಿ ಅಂಗಾಂಗವು ಸಧೃಢವಾಗಿ ಆರೋಗ್ಯಯುತವಾಗಿರಲು ಯೋಗವೊಂದೇ ಪರಿಹಾರ, ಆದ್ದರಿಂದ ಎಲ್ಲರೂ ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ” ಎಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಮಾಹಿತಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೋಟೇಶ್ವರದ ಓಮ್ ಯೋಗ ವಿದ್ಯಾಮಂದಿರದ ಕೇಂದ್ರ ಸರಕಾರದ ಆಯುಷ್ ಘಟಕದ ತರಬೇತುದಾರರಾದ ಶ್ರೀಮತಿ ಗೀತಾ ಎಸ್. ಇವರು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಆರೋಗ್ಯವಂತ ಭಾರತ ನಿರ್ಮಿಸಲು ಯೋಗ ದಿನಾಚರಣೆಯ ಆಶಯ ಮತ್ತು ಚಟುವಟಿಕೆಗಳು ಸ್ಪೂರ್ತಿದಾಯಕ ಎಂದು ತಿಳಿಸಿದರು.ಯೋಗ ದಿನಾಚರಣೆಯ ಅಂಗವಾಗಿ ವೀಡಿಯೋ ಪ್ರದರ್ಶಿಸಲಾಯಿತು. ಉತ್ತಮ ವೀಡಿಯೋ ತುಣುಕುಗಳನ್ನು ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯೋಗಪಟುಗಳಾದ ಸಂಜನಾ ಮತ್ತು ಅನಿರುದ್ಧ ಇವರು ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಸ್ವಾಗತಿಸಿದರು. ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಅಭಿಜಿತ್ ರವರು ಧನ್ಯವಾದ ಸಲ್ಲಿಸಿದರು. ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯರವರು ಕಾರ್ಯಕ್ರಮ ನಿರೂಪಿಸಿದರು.
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 20 ಜೂನ್ 2025 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಎಸ್ ಬಿಜೂರು ಇವರು ಉಪಸ್ಥಿತರಿದ್ದು ಯೋಗದಿಂದಾಗುವ ಉಪಯೋಗಗಳ ಬಗ್ಗೆ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ತಿಳಿಸಿದರು. ಯೋಗವು ಮನುಷ್ಯನ ಆಂತರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಾಯ ಮಾಡುತ್ತದೆಂದು ತಿಳಿಸಿದರು. ಯೋಗದ ಪ್ರಾಮುಖ್ಯತೆ ಮತ್ತು ಯೋಗಾಸನ ಮಾಡಬೇಕಾದರೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ತಿಳಿಸುವುದರ […]
ಮಂಗಳೂರು; ಕೊಂಕಣಿ ಕವಿ / ವಿಮರ್ಶಕ ಎಚ್. ಎಮ್. ಪೆರ್ನಾಲ್ ನಾಲ್ಕನೆಯ ಕವನ ಸಂಕಲನ ಜನೆಲ್ (ಕಿಟಕಿ) ಶುಕ್ರವಾರ ಜೂನ್ 27 ರಂದು ಸಂಜೆ 4.30 ಕ್ಕೆ ಎಂ.ಸಿ.ಸಿ. ಬ್ಯಾಂಕ್ ಆಡಳಿತ ಸೌಧ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಈ ಕವನ ಸಂಕಲನವನ್ನು ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ ಮಾವಜೋ ಬಿಡುಗಡೆ ಮಾಡುವರು. ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷಾ ಸಲಹಾ ಮಂಡಳಿ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಪುಸ್ತಕ ಪರಿಚಯ ಮಾಡಲಿದ್ದು, ವಿಶನ್ ಕೊಂಕಣಿ ಪ್ರವರ್ತಕರೂ, ಅನಿವಾಸಿ […]
ಕುಂದಾಪುರಃ ಹಳ್ನಾಡು ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಜೂನ್ 21 ಶನಿವಾರದಂದು 11ನೇ ವರ್ಷದ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ವಿಷಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿದ್ಯಾಭಾರತಿ ಕರ್ನಾಟಕ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು,ಉದ್ಯಮಿಗಳು ಆಗಿರುವ ಶ್ರೀಯುತ ಟಿ.ಜಿ.ಪಾಂಡುರಂಗ ಪೈ ರವರು ಆಗಮಿಸಿದ್ದರು. ಗಣ್ಯರು ಮಾತನಾಡಿ ಮಕ್ಕಳು ಭಕ್ತಿಯೋಗದ ಉಪಾಸನೆ ಮಾಡಬೇಕು. ಕರ್ಮಯೋಗದ ಮೂಲಕ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು.ಭಾರತವು ವಿಶ್ವ ಭಾರತವಾಗಬೇಕು ಎಂದರು. ತುಳಸಿ ವಿದ್ಯಾಮಂದಿರದ […]
ಶಂಕರನಾರಾಯಣ; ಮದರ್ ತೆರೇಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದಲ್ಲಿ ಜೂನ್ 21 /2025 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯಿಂದ ನೀಡಲಾಗಿರುವ ಯೋಗದ ಸಮವಸ್ತ್ರದಲ್ಲಿ ಶಿಸ್ತು ಬದ್ಧರಾಗಿ ಭಾಗವಹಿಸಿದ್ದು, ಇದೇ ಸಂಸ್ಥೆಯ ಉಪ ಮುಖ್ಯೋಪಾಧ್ಯಾಯರು ಹಿರಿಯ ಶಿಕ್ಷಕರು ಹಾಗೂ ರಾಜ್ಯಮಟ್ಟದ ಯೋಗ ಪರಿಣಿತಿರಾದ ಸಂತೋಷ್ ಕುಮಾರ್ ಹಾಗೂ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ದೈನಂದಿನ ತರಗತಿಗಳಲ್ಲಿ ಯೋಗ ಅಭ್ಯಾಸವನ್ನು ನೀಡುತ್ತಿರುವ ಶ್ರೀಮತಿ ಜಯಲಕ್ಷಿ ಯೋಗ ಶಿಕ್ಷಕರು […]
ಗಂಗೊಳ್ಳಿ; ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಯೋಗ ಗುರುಗಳಾದ ಶ್ರೀಯುತ ನಾರಾಯಣ್ ದೇವಾಡಿಗರು, ನಿವೃತ್ತ ಮುಖ್ಯ ಶಿಕ್ಷಕರು ಬೀಜೂರು ಪ್ರಾಥಮಿಕ ಶಾಲೆ, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದ್ದಲ್ಲದೆ. ಧ್ಯಾನ,ಪ್ರಾಣಾಯಾಮ, ಸೂರ್ಯ ನಮಸ್ಕಾರ ವಿವಿಧ ಯೋಗದ ಆಸನಗಳನ್ನು ಪ್ರಾತ್ಯಕ್ಷತೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಮುಖ್ಯೋಪಾಧ್ಯಾಯಿನಿರಾದ ಭಗಿನಿ ಕ್ರಿಸೆನ್ಸ್ ಮತ್ತು ಭಗಿನಿ ಉಪಸ್ಥಿತರಿದ್ದರು. […]
ಕುಂದಾಪುರ, ಜೂ.22; ಸಂತ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 21 ರಂದು ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ರೋಜರಿ ಮಾತಾ ಚರ್ಚಿನ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಸಂಚಾಲಕರು ಆಗಿರುವ ರೆ. ಫಾ. ಪಾವ್ಲ್ ರೆಗೋ ರವವರು ಅಧ್ಯಕ್ಷತೆ ವಹ್ಸಿಸಿ ಆರಿಸಿ ಬಂದ ಸಂಸತ್ತಿನ ಅಧ್ಯಕ್ಷರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, ನಾಯಕ ಈ ಪದದ ಅರ್ಥವನ್ನು ತಿಳಿಸಿ, ಶಿಸ್ತು ಅತಿ ಮುಖ್ಯ, ಪ್ರೀತಿಯಿಂದ ದ್ವೇಷವನ್ನು ದೂರ ಮಾಡಬೇಕು. ಶಾಂತಿ ಸಹನೆಯಿಂದ ಎಲ್ಲರೂ ಬಾಳಬೇಕು. […]
ಮಂಗಳೂರು ;ಆಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್, ಮಂಗಳೂರಿನ ಸಹಯೋಗದಲ್ಲಿ ಜೂನ್ 21ರಂದು “ಒಂದು ಭೂಮಿ, ಒಂದು ಆರೋಗ್ಯ” ಎಂಬ ವಿಶ್ವ ಧ್ಯೇಯ ದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಉತ್ಸಾಹಭರಿತವಾಗಿ ಆಚರಿಸಿದರು. ಕಾರ್ಯಕ್ರಮವು ಯೋಗ ದಿನದ ಮಹತ್ವದ ಪರಿಚಯದೊಂದಿಗೆ ಆರಂಭವಾಯಿತು. ಬೆಳಿಗ್ಗೆ 8:00 ಗಂಟೆಗೆ, ಸುಮಾರು 80 ವಿದ್ಯಾರ್ಥಿಗಳಿಗೆ ಒಂದು ಗಂಟೆಯ ಸಾಮೂಹಿಕ ಯೋಗ ಅಧಿವೇಶನ ನಡೆಯಿತು. ಅಧಿವೇಶನವು ದೇಹವನ್ನು ಉಜ್ಜೀವನಗೊಳಿಸುವ ಹಗುರವಾದ ಆರಂಭಿಕ ಚಟುವಟಿಕೆಗಳಿಂದ ಪ್ರಾರಂಭವಾಗಿ, […]
ಜೂನ್ 21, 2025 ರಂದು ಬಾರ್ಕೂರಿನ ಹನೇಹಳ್ಳಿಯ ರಾಷ್ಟ್ರೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ಸಮಗ್ರ ಅಭ್ಯಾಸವಾಗಿ ಯೋಗದ ಮಹತ್ವವನ್ನು ಈ ಕಾರ್ಯಕ್ರಮವು ಒತ್ತಿಹೇಳಿತು. ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸಮವಸ್ತ್ರಗಳನ್ನು ಧರಿಸಿ, ಶಾಲಾ ಸಭಾಂಗಣದಲ್ಲಿ ಗುಂಪು ಯೋಗ ಅಧಿವೇಶನಕ್ಕಾಗಿ ಒಟ್ಟುಗೂಡಿದರು, ಶಿಸ್ತು ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಪ್ರದರ್ಶಿಸಿದರು. ದೈನಂದಿನ ಜೀವನದಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನಹರಿಸಿದ ಒಂದು ಸಣ್ಣ […]

