

ಗಂಗೊಳ್ಳಿ; ಕಥೋಲಿಕ್ ಸ್ತ್ರೀ ಸಂಘಟನೆ ಅಮೃತ ಮಹಾಸಂಘ ಗಂಗೊಳ್ಳಿ ಘಟಕದಿಂದ ‘ತಾಯಂದಿರ ದಿನಾಚರಣೆ’ ಆಚರಿಸಲಾಯಿತು. ಕಳೆದ 24 ವರ್ಷಗಳಿಂದ ಗಂಗೊಳ್ಳಿ ಘಟಕದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಕಾಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಸಂಪನ್ಮೂಲ ವ್ಯಕ್ತಿ ವೆರೋನಿಕಾ ಕರ್ನೆಲಿಯೋ ಸ್ತ್ರೀಯರನ್ನು ಉದ್ದೇಶಿಸಿ ಕುಟುಂಬದಲ್ಲಿ ತಾಯಿಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಗಂಗೊಳ್ಳಿ ಚರ್ಚಿನ ಧರ್ಮಗುರುಗಳಾದ ವಂ| ತೋಮಸ್ ರೋಶನ್ ಡಿಸೋಜ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ವಂ| ಅಶ್ವಿನ್ ರೆಬೆಲ್ಲೊ S.J. ಹಾಗೂ ಕಾರ್ಮೆಲ್ ಕೊವೆಂತಿನ ಮುಖ್ಯಸ್ಥರಾದ ಧರ್ಮಭಗಿನಿ ಗ್ರೇಸಿ ಲೋಬೊ ಹಾಜರಿದ್ದರು. ವೇದಿಕೆಯಲ್ಲಿ ಕಥೋಲಿಕ್ ಸ್ತ್ರೀ ಸಂಘಟನೆ ಭಾವನಾ ಮಹಿಳಾ ಒಕ್ಕೂಟ ಕುಂದಾಪುರ ವಲಯದ ಅಧ್ಯಕ್ಷರಾದ ಶರ್ಮಿಳಾ ಬರೆಟ್ಟೊ, ಸುಗಮ್ಯ ಮಹಿಳಾ ಒಕ್ಕೂಟದ ಮೊತಿಯಾ ಪತ್ರದ ಸಂಚಾಲಕಿ ಹಾಗೂ ಸಹ ಸಂಪಾದಕಿ ಹಾಗೂ ಭಾವನಾ ಮಹಿಳಾ ಒಕ್ಕೂಟ ಕುಂದಾಪುರ ವಲಯದ ಪ್ರತಿನಿಧಿ ಪ್ರೀತಿ ಫೆರ್ನಾಂಡಿಸ್, ಕುಂದಾಪುರ – ಬೈಂದೂರು ತಾಲೂಕಿನ ಪ್ರೇರಕಿ ಸಿಂತಿಯಾ ರೊಡ್ರಿಗಸ್, ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ ಹಾಗೂ 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್ ಉಪಸ್ಥಿತರಿದ್ದರು.
ಫ್ರೀಡಾ ಕ್ರಾಸ್ತಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಆಶಾ ಡಿಕೊಸ್ಟಾ ಸನ್ಮಾನಿತರನ್ನು ಪರಿಚಯಿಸಿದರು. ಅಧ್ಯಕ್ಷರಾದ ಅನಿತಾ ಫೆರ್ನಾಂಡಿಸ್ ಸ್ವಾಗತಿಸಿದರು. ವಿವಾನ್ ರೆಬೇರೊ ನಿರೂಪಿಸಿದರು. ಸೆಲಿನ್ ಲೋಬೊ ವಂದಿಸಿದರು. ಕಾರ್ಯಕ್ರಮಕ್ಕೆ 120 ತಾಯಂದಿರು ಹಾಜರಿದ್ದರು.






































