

ಜುಲೈ 26ರಂದು :- ಕಿರಿಮಂಜೇಶ್ವರ ಜನತಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಅದ್ದೂರಿಯಾಗಿ ಆಚರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ದೀಪಿಕಾ ಆಚಾರ್ಯ ರವರು ಈ ದಿನದ ವಿಶೇಷತೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದರು.
1999ರಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯು ಐತಿಹಾಸಿಕ ವಿಜಯದ ಸಂಕೇತವಾಗಿ ಈ ದಿನ ಪ್ರತಿವರ್ಷ ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ ಈ ದಿವಸ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರನ್ನು ವೀರ ಯೋಧರನ್ನು ದೇಶದಾದ್ಯಂತ ಅತ್ಯಂತ ಹೆಮ್ಮೆ ಗೌರವ ಸ್ಮರಿಸಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಪಿಪಿ ಜೋಶಿ ನಿವೃತ್ತ ಜೂನಿಯರ್ ಕಮಿಷನರ್ ಆಫೀಸರ್ ಭಾರತೀಯ ಸೇನೆ ಅಧಿಕಾರಿಗಳು ತಮ್ಮ ಹಿತನುಡಿಗಳನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾ ಕಾರ್ಗಿಲ್ ಯುದ್ಧವನ್ನು ಕಣ್ಣಿಗೆ ಕಟ್ಟುವಂತೆ ವಿಸ್ತಾರವಾಗಿ ವಿದ್ಯಾರ್ಥಿಗಳ ಮನದಲ್ಲಿ ಅಚ್ಚು ಒತ್ತಿದರು. ವಿದ್ಯಾರ್ಥಿಗಳಲ್ಲಿ ಭಾರತ ಸೇನೆ ಮತ್ತು ಯೋಧರ ಬಗ್ಗೆ ಹೆಮ್ಮೆ ಮತ್ತು ಗೌರವ ಹೆಚ್ಚಾಗುವಂತೆ ಮಾಡಿದರು
ಶಿಕ್ಷಕರಾದ ಕವಿರಾಜ್ ಅವರು ಭಾರತೀಯ ಸೇನೆಯನ್ನು ಸೇರಲು ಇಂದು ಇರುವ ವಿಪುಲ ಅವಕಾಶಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ವಿವರಿಸಿದ್ದರು . ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಜೋಶಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿ ಕುಮಾರಿ ಪ್ರಕೃತಿ ಈಶ್ವರ್ ಅಧ್ಯಕ್ಷರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಫಾತಿಮಾ ಇಸ್ರಾರ್ ವರು ಧನ್ಯವಾದ ಸಮರ್ಪಣೆ ಅರ್ಪಿಸಿದರು.
ಕುಮಾರಿ ಮಿನಲ್ ರವರು ಕಾರ್ಯಕ್ರಮ ನಿರೂಪಣಿ ಮಾಡಿದರು
ಸಮಾರಂಭದಲ್ಲಿ ಸಂಸ್ಥೆ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

