ಉಡುಪಿ: ಕರಾವಳಿಯ ಕ್ರೈಸ್ತರು ಸಪ್ಟೆಂಬರ್ 8 ರಂದು ಆಚರಿಸುವ ಮೇರಿ ಮಾತೆಯ ಜನ್ಮದಿನವಾದ ಮೊಂತಿ ಫೆಸ್ತ್ ಅಥವಾ ತೆನೆ ಹಬ್ಬಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ಕಥೊಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶ ವತಿಯಿಂದ ರಾಜ್ಯ ಆರೋಗ್ಯ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.ಕರಾವಳಿ ಹಾಗೂ ಇಡೀ ರಾಜ್ಯದ ಕ್ರೈಸ್ತ ಬಾಂಧವರು […]
15ಕ್ಕೂ ಅಧಿಕ ತಜ್ಞ ವೈದ್ಯರ ಭಾಗವಹಿಸುವಿಕೆ; 2 ಸಾವಿರಕ್ಕೂ ಅಧಿಕ ಜನರ ಆಗಮನ ನಿರೀಕ್ಷೆ ಕುಂದಾಪುರ: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ – ಜಿಲ್ಲೆ 317C ಇದರ ಆಶ್ರಯದಲ್ಲಿ, ಆದರ್ಶ ಆಸ್ಪತ್ರೆ, ಉಡುಪಿ ಹಾಗೂ ಝಿಯಾ ಎಜುಕೇಷನಲ್ ಟ್ರಸ್ಟ್ (R) ಇವರ ಸಹಯೋಗದೊಂದಿಗೆ, ಆಗಸ್ಟ್ 30ರಂದು ಕುಂದಾಪುರ ತಾಲೂಕಿನ ಕಂಡ್ಲೂರಿನ ಕಾವ್ರಾಡಿ ಗ್ರಾಮದ ಝಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಪ್ರಮುಖ ಆಕರ್ಷಣೆಯಾಗಿ ಉಡುಪಿಯ […]
Career Guidance Programme at St. Rita English Medium School, Casia Jeppu ಮಂಗಳೂರು, ಆಗಸ್ಟ್ 20, 2026: ವಿದ್ಯಾರ್ಥಿಗಳಲ್ಲಿ ವೃತ್ತಿ ಅವಕಾಶಗಳು ಮತ್ತು ವೃತ್ತಿಪರ ಕೋರ್ಸ್ಗಳ ಬಗ್ಗೆ ಜಾಗೃತಿ ಮೂಡಿಸಲು ಕಾಸಿಯ ಜೆಪ್ಪುವಿನ ಸೇಂಟ್ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಟಿಲ್ಡಾ ಡಿ’ಕೋಸ್ಟಾ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅವರು ಸಭೆಯನ್ನು ಸ್ವಾಗತಿಸಿದರು ಮತ್ತು ಶಾಲಾ ಮಟ್ಟದಲ್ಲಿ ವೃತ್ತಿ ಯೋಜನೆಯ ಮಹತ್ವವನ್ನು ಒತ್ತಿ ಹೇಳಿದರು. […]
ಮಂಗಳೂರು: ಸಂತ ರೀಟಾ ಸಮೂಹ ಶಿಕ್ಷಣ ಸಂಸ್ಥೆಗಳಾದ ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ, ಸಂತ ರೀಟಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಸ್ಸಿಯಾ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಶಾಲಾ ಬ್ಯಾಂಡ್ ತಂಡ ಹಾಗೂ ಎನ್.ಸಿ.ಸಿ ಕೆಡೆಟ್ಗಳ ಗೌರವಪೂರ್ವಕ ಮೆರವಣಿಗೆಯೊಂದಿಗೆ ಗಣ್ಯರನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು. ಸಂತ ರೀಟಾ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ರೆ . ಫಾ. ರಿತೇಶ್ ರೊಡ್ರಿಗಸ್ ಅವರು […]
ಆಗಸ್ಟ್ 20 ಗುರುವಾರ ಬೆಳಿಗ್ಗೆ 11 ಗಂಟೆಗೆ ಕಣಜಾರು ಸೌಹಾರ್ದ ಭವನದಲ್ಲಿ “ಕೊಂಕಣಿ ಮಾನ್ಯತಾ ದಿವಸ್ – 2026″ ಹಾಗೂ ” ಪಾವ್ಸಿಲೆ ಖಾಣ್ ಜೆವಾಣ್ ” ಕಾರ್ಯಕ್ರಮವು ಹಮ್ಮಿಕೊಂಡಿದ್ದರು.ಕಾರ್ಯಕ್ರಮವು ಕಣಜಾರು ಲೂರ್ಡ್ಸ್ ಮಾತೆಯ ದೇವಾಲಕ್ಕೆ ಒಳಪಟ್ಟ ಮಾತಮರಿಯ ಮಹಿಳಾ ಮಹಾಸಂಘದ ವತಿಯಿಂದ ಆಯೋಜಿಸಿದ್ದರು. ಸಭಾಕಾರ್ಯಕ್ರಮದ ಅಧ್ಯಕ್ಷರಾಗಿ ಲೂರ್ಡ್ಸ್ ಮಾತಾ ದೇವಾಲಯದ ಧರ್ಮಗುರುಗಳಾದ ಅತೀ ವಂದನೀಯ ಫಾ| ಹೆರಾಲ್ಡ್ ಪೀರೆರಾ, ಮುಖ್ಯ ಅತಿಥಿಯಾಗಿ ಕೊಂಕಣಿ ಶಿಕ್ಷಕರಾದ ಶ್ರೀ ರೋಬರ್ಟ್ ಮಿನೇಜಸ್ ಹಾಜರಿದ್ದರು.ಅತಿಥಿಗಳಾಗಿ ನಿವೃತ್ತ ಗುರುಗಳಾದ ಫಾ| ಫೆಡ್ರಿಕ್ […]
Onam Celebration at Snehalaya “ಹಬ್ಬವೆಂದರೆ ಕೇವಲ ಆಚರಣೆಯಲ್ಲ; ಹೃದಯಗಳನ್ನು ಹತ್ತಿರ ತರುವ, ಸಂಬಂಧಗಳಿಗೆ ಹೊಸ ಅರ್ಥ ನೀಡುವ ಸುಂದರ ಕ್ಷಣ.”ಸ್ನೇಹ, ಸಹಬಾಳ್ವೆ, ಸಂತೋಷ ಮತ್ತು ಮಾನವೀಯತೆಯ ಸಂದೇಶ ಸಾರುವ ಓಣಂ ಹಬ್ಬವನ್ನು ಸ್ನೇಹಾಲಯದಲ್ಲಿ ಇಂದು ಅತ್ಯಂತ ಸಂಭ್ರಮ, ಸಡಗರ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಸಂಸ್ಥೆಯ ನಿವಾಸಿಗಳು ಹಾಗೂ ಸಿಬ್ಬಂದಿ ಒಂದಾಗಿ ಸೇರಿ ಆಚರಿಸಿದ ಈ ಹಬ್ಬವು ಸ್ನೇಹಾಲಯದ ಆವರಣವನ್ನು ನಗು, ಸಂತಸ ಮತ್ತು ಹಬ್ಬದ ಸಂಭ್ರಮದಿಂದ ಕಂಗೊಳಿಸಿತು.ಕಾರ್ಯಕ್ರಮವು ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಂಡಿತು. […]
ಸಿಯೋನ್ ಆಶ್ರಮ ಟ್ರಸ್ಟ್(ರಿ.) ಗಂಡಿಬಾಗಿಲು ಇಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದಿನಾಂಕ:15.08.2026ರಂದು ಆಚರಿಸಲಾಯಿತು. ಸಿಯೋನ್ ಆಶ್ರಮದ ಚಾಪ್ಲಿಯನ್ ರೆ. ಫಾ. ಡಾ. ಮೆಲ್ವಿನ್ ಡಿ’ಸಿಲ್ವಾ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದ ಐತಿಹಾಸಿಕ ಹೋರಾಟವನ್ನು ಸಂಕ್ಷಿಪ್ತವಾಗಿ ವಿವರಿಸಿದ ಅವರು, ಪರಸ್ಪರ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಬದುಕುವ ಮೂಲಕ ದೇಶದ ಏಕತೆ ಹಾಗೂ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು. ರಾಷ್ಟ್ರಧ್ವಜವು ನಮ್ಮ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದ್ದು, ಅದು […]
ನಮ್ಮ ಅಸ್ಮಿತೆ ಕೊಂಕಣಿ. ನಾನು ಕೊಂಕಣಿಗ ಎಂದು ಹೆಮ್ಮೆ ಪಡುವುದು ಭಾಷೆಯ ಉಳಿವಿಗೆ ಮೊದಲ ಹೆಜ್ಜೆ. ಇಂದಿನ ಝೆನ್ ಜೀ ಪೀಳಿಗೆಯವರಾದ ನೀವು ಯಾವುದೇ ಸಮುದಾಯದವರಾದರೂ, ಧರ್ಮದವರಾದರೂ, ಎಲ್ಲರನ್ನು ಬೆಸೆಯುವ ಸೇತುವೆ ಕೊಂಕಣಿ ಎಂಬ ಅರಿವು ಬೆಳೆಸಿದರೆ, ಕೊಂಕಣಿ ಭಾಷೆ, ಕಲೆ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರತಿಜ್ಞೆಯನ್ನು ಕೈಗೊಂಡರೆ ಹಾಗೂ ಅದಕ್ಕಾಗಿ ಶ್ರಮಿಸಿದರೆ ನಮ್ಮ ಭಾಷೆ ಖಂಡಿತಾ ಉಳಿಯಲಿದೆ, ಬೆಳೆಯಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಇಲ್ಲಿನ ಪ್ರಾಂಶುಪಾಲ ಡಾ ಜಯವಂತ ನಾಯಕ್ ಹೇಳಿದರು. […]
ಕುಂದಾಪುರ, ಆ. 21: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರಿಗೆ ಇಲ್ಲಿನ ಹೋಟೆಲಿನಲ್ಲಿ ಶುಕ್ರವಾರ ಬೆಳಗ್ಗೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಡಾ. ಮಹೇಂದ್ರ ಕುಮಾರ್ ಶೆಟ್ಟಿಯನ್ನು ತಕ್ಷಣದಿಂದ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಶಿಸ್ತು ಪ್ರಾಧಿಕಾರಿ ಗುರುದತ್ ಹೆಗಡೆ ಆದೇಶಿಸಿದ್ದಾರೆ.ಇವರು ಹಿಂದೆ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿದ್ದು, ಪ್ರಸ್ತುತ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನ್ಯಪರ ಸೇವೆಯ ಮೇಲೆ […]

