

ಕಾರ್ಕಳ ; ಕಾರ್ಕಳ ಮಾಜಿ ಶಾಸಕರಾದ ದಿವಂಗತ ಎಚ್.ಗೋಪಾಲ ಭಂಡಾರಿಯವರ ಸ್ಮೃರಣಾರ್ಥ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿತಾ ಡಿಸೋಜಾ ಬೆಳ್ಮಣ್ ಅವರು ಕೆರ್ವಾಶೆ , ಬಂಗ್ಲೆಗುಡ್ಡೆ, ಹಾಗೂ ಶೆಟ್ಟಿಬೆಟ್ಟು ಅಂಗನವಾಡಿಯ ಶಾಲಾ ಮಕ್ಕಳಿಗೆ ಬ್ಯಾಗ್, ವಾಟರ್ ಬಾಟಲ್, ನೋಟ್ ಬುಕ್ ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು .ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ,ಕೆರ್ವಾಶೆ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಚೆರಿಯನ್ ಡಯಾಸ್, ಕೆರ್ವಾಶೆ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಕಾಶ್, ಸಿದ್ದು ಶೆಟ್ಟಿಬೆಟ್ಟು, ಶಾಲಾ ಶಿಕ್ಷಕಿಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಶಾಲಾ ವತಿಯಿಂದ ಶಾಲಾ ಶಿಕ್ಷಕಿಯರು ಧನ್ಯವಾದ ಸಲ್ಲಿಸಿದರು.




