ಕೋಲಾರ : ಕರ್ನಾಟಕ ಫಿಟ್‌ನೆಸ್ ಫಸ್ಟ್ ಬಾಡಿ ಬಿಲ್ಡಿಂಗ್ ಅಸೋಸಿಯೇಷನ್, ಕೋಲಾರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಹಾಗೂ ಫಿಟ್‌ನೆಸ್ ಸ್ಪರ್ಧೆಯನ್ನು ಜೂನಿಯರ್ ಕಾಲೇಜು ಕಾಂಪೌಂಡ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಬಾಡಿ ಬಿಲ್ಡಿಂಗ್, ಪುರುಷರ ಫಿಸಿಕ್, ಕ್ಲಾಸಿಕ್ ಫಿಸಿಕ್, ಮಾಸ್ಟರ್ಸ್ ಹಾಗೂ ಫಿಟ್‌ನೆಸ್ ವಿಭಾಗಗಳಲ್ಲಿ ಪೈಪೋಟಿ ನಡೆಯಿತು. ಸಣ್ಣ, ಮಧ್ಯಮ, ಎತ್ತರ ಹಾಗೂ ಸೂಪರ್ ಎತ್ತರ ವಿಭಾಗಗಳಾಗಿ ವಿಭಜಿಸಲಾದ ಈ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅನೇಕ ಕ್ರೀಡಾಪಟುಗಳು ಭಾಗವಹಿಸಿ ತಮ್ಮ […]
ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ IX ನೇ ತರಗತಿಯ ವಿದ್ಯಾರ್ಥಿನಿ ಜೆಸ್ನಿಯಾ ಕೊರಿಯಾ, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ನಡೆಸಿದ 69 ನೇ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದೊಳಗಿನವರ ವಿಭಾಗದಲ್ಲಿ 1000 ಮೀಟರ್ ರಿಂಕ್ ರೇಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಂಸ್ಥೆಗೆ ಅಪಾರ ಹೆಮ್ಮೆ ಮತ್ತು ಗೌರವವನ್ನು ತಂದಿದ್ದಾರೆ. ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್ 2025 ರ ಡಿಸೆಂಬರ್ 26 ರಿಂದ 29 ರವರೆಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯಿತು ಮತ್ತು […]
ಬಿಕರ್ನಕಟ್ಟೆ; ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮಕ್ಕಳ ಆಶೀರ್ವಾದದೊಂದಿಗೆ ‘ಹೋಲಿ ಇನ್ನೋಸೆಂಟ್ಸ್’ ಹಬ್ಬದ ಆಚರಣೆಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರವು, ಕ್ರಿಸ್ಮಸ್ ಹಬ್ಬದ ಮೂರನೇ ದಿನದಂದು ಆಚರಿಸಲಾಗುವ ‘ಹೋಲಿ ಇನ್ನೋಸೆಂಟ್ಸ್’ (ಪವಿತ್ರ ಮುಗ್ಧರ ಹಬ್ಬ) ದಿನದಂದು ಮಕ್ಕಳ ಮೇಲೆ, ವಿಶೇಷವಾಗಿ ಶಿಶುಗಳ ಮೇಲೆ ದೇವರ ಆಶೀರ್ವಾದವನ್ನು ಕೋರುವ ತನ್ನ ಸುದೀರ್ಘ ಸಂಪ್ರದಾಯವನ್ನು ಆಚರಿಸಿತು. ಯಹೂದಿಗಳ ರಾಜನಾಗಿ ಜನಿಸಿದ ಯೇಸುವಿನ ಬಗ್ಗೆ ಭಯಗೊಂಡ ರಾಜ ಹೆರೋದನಿಂದ ಹತ್ಯೆಗೀಡಾದ ಮುಗ್ಧ ಶಿಶು ಹುತಾತ್ಮರ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. […]
ಗದಗ -23 ಮಕಾನದಾರ ಸಾಹಿತ್ಯ ಪ್ರತಿಷ್ಟಾನ ಗಜೇಂದ್ರಗಡ, ಗದಗಿನ ನಿರಂತರ ಪ್ರಕಾಶನದ ವತಿಯಿಂದ 2025ನೇ ಸಾಲಿನ ‘ನಿರಂತರ ಸಾಹಿತ್ಯ ಪುರಸ್ಕಾರ”ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಆಯ್ಕೆ ಆಗಿದ್ದರೆಂದು ಪ್ರಕಾಶಕ, ಹಿರಿಯ ಕವಿ ಎ ಎಸ್. ಮಕಾನದಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ನಾಡಿನ ಹಿರಿ ಕಿರಿಯ ಅನೇಕ ಕವಿಗಳ ಕವಿತೆ ಮತ್ತು ಗದ್ಯ ಸಾಹಿತ್ಯವನ್ನು ಕನ್ನಡ ಭಾಷೆಯಿಂದ ಕೊಂಕಣಿ ಭಾಷೆಗೆ ಅನುವಾದಗೊಳಿಸುವದರ ಜೊತೆಗೆ ಕೊಂಕಣಿಯ ತ್ರಿಲಿಪಿಗಳಿಗೆ ಅನುವಾದಮಾಡಿ […]
ಬೈಂದೂರು : ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 15 ನೇ ಶಾಲಾ ವಾರ್ಷಿಕೋತ್ಸವ ಜ್ಞಾನದಾ ಕಲಾ ವೈಭವ -2025 ಅದ್ದೂರಿಯಾಗಿ ಆಚರಿಸಲಾಯಿತುಮುಖ್ಯ ಅತಿಥಿಗಳಾದ ಕೋಟ ಪಡುಕರೆ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್ ನಾಯಕ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವಿಧ ಸಾಮಾಜಿಕ ಹಿನ್ನೆಲೆಯಲ್ಲಿ ಬರುವ ಮಗುವಿಗೆ ಉತ್ತಮ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ ಶಿಕ್ಷಣದ ಮೂಲಕ ಸಂಸ್ಕಾರವನ್ನು ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮಕ್ಕಳು ಬದುಕಿನ ಆರಂಭದ ಹೆಜ್ಜೆಯನ್ನು […]
Joyful Christmas Celebration at St. Francis Assisi Church, Tallur ತಲ್ಲೂರು ; 2025ರ ಡಿಸೆಂಬರ್ 24ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಯೇಸು ಕ್ರಿಸ್ತರ ಜನ್ಮೋತ್ಸವವನ್ನು ಸಂಜೆ 7.00 ಗಂಟೆಗೆ ಕ್ರಿಸ್ಮಸ್ ಕ್ಯಾರೆಲ್ಸ್ ಹಾಡುವುದರೊಂದಿಗೆ ಹಾಗೂ ಸಂಭ್ರಮದ ದಿವ್ಯ ಬಲಿ ಪೂಜೆಯೊಂದಿಗೆ ಆಚರಿಸಲಾಯಿತು. ಮಂಗಳೂರು ಸಂತ ಅಲೋಶಿಯಸ್ ಗೊಂಜಾಗ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ. ರೋಹನ್ ಡಿ ಅಲ್ಮೇಡಾ ಎಸ್.ಜೆ. ಅವರು ಪ್ರಧಾನ ಗುರುಗಳಾಗಿ ಆಗಮಿಸಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. […]
ಶ್ರೀನಿವಾಸಪುರ : ಅರಣ್ಯ ಇಲಾಖೆಯ ನೀತಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳ ವತಿಯಿಂದ ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ನಮ್ಮ ಸಂಘವು ಸದಾ ರೈತರ ಪರವಾಗಿ ನಿಂತಿದೆ. ಅರಣ್ಯ ಇಲಾಖೆಯ ಕ್ರಮಗಳಿಂದ ಭೂ ಸಂತ್ರಸ್ಥರಾಗಿರುವ ರೈತರಿಗೆ ಶಾಶ್ವತ ಪರಿಹಾರ ದೊರಕಬೇಕಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಎಲ್ಲಾ ಸಂಘಟನೆಗಳ ಮುಖಂಡರು ಹಾಗೂ ರೈತರು ಕೋಲಾರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ […]
ಮಂಗಳೂರು ಬಿಕರ್ನಕಟ್ಟೆ ಬಾಲ ಯೇಸು ವಿನ ಪುಣ್ಯ ಕ್ಷೇತ್ರ ವು ವಿದ್ಯುತ್ ದೀಪಾಲಂಕರದಿಂದ ಆಕರ್ಷಣೆ ಆಗಿದ್ದು ಸಾವಿರರೂ ಜನರು ಜಾತಿ ಮತ ಭೇದ ಭಾವ ವಿಲ್ಲದೆ ಈ ಪುಣ್ಯ ಸ್ಥಳ ಕ್ಕೆ ಭೇಟಿ ನೀಡಿದರೂ ಮತ್ತು ಕ್ರಿಸ್ಮಸ್ ಗೋದಲಿ ಯನ್ನು ವೀಕ್ಸಿಸಿದರು.
ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯು ಡಿಸೆಂಬರ್ 22 ರಂದು ಫಾದರ್ ಮುಲ್ಲರ್ ಪೀಡಿಯಾಟ್ರಿಕ್ ವಾರ್ಡ್ ಮತ್ತು ವೆರೋನಿಕಾ ವಿಹಾರ್‌ನಲ್ಲಿ ಮತ್ತು ಡಿಸೆಂಬರ್ 23 ರಂದು ಸೇಂಟ್ ಆಗ್ನೆಸ್ ವಿಶೇಷ ಶಾಲೆಯಲ್ಲಿ ಬಹಳ ಪ್ರೀತಿ ಮತ್ತು ಉತ್ಸಾಹದಿಂದ ಅರ್ಥಪೂರ್ಣ ಹೊರಾಂಗಣ ಕ್ರಿಸ್‌ಮಸ್ ಆಚರಣೆಯನ್ನು ಆಯೋಜಿಸಿತು. ಈ ಕಾರ್ಯಕ್ರಮಗಳನ್ನು ಶಾಲೆಯು ಚಿಂತನಶೀಲವಾಗಿ ಯೋಜಿಸಿತ್ತು ಮತ್ತು ಹಿತೈಷಿಗಳು ನಗದು ಮತ್ತು ವಸ್ತು ರೂಪದಲ್ಲಿ ದೇಣಿಗೆ ನೀಡುವ ಮೂಲಕ ಉದಾರವಾಗಿ ಬೆಂಬಲಿಸಿದರು. ಆಚರಣೆಯ ಭಾಗವಾಗಿ, ಕಿಂಡರ್‌ಗಾರ್ಟನ್ ಮಕ್ಕಳು, ಇತರ ಕೆಲವು ವಿದ್ಯಾರ್ಥಿಗಳು […]

