

ಕುಂದಾಪುರ; ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು ಕುಂದಾಪುರ ಮಯೂರ ಮೆಡಿಕಲ್ ಮಾಲಕಿ ಶುಭಶ್ರೀ ಕಾರಂತ್ ( 53) ಸಾವನ್ನಪ್ಪಿದವರು. ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರಕ್ಕಿಂಗ್ ಹೋಗಿದ್ದರು ಎಂದು ಹೇಳಲಾಗುತ್ತದೆ. ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.
ಶುಭಶ್ರೀ ಕಾರಂತ್ ಕುಂದಾಪುರ ಚಿಕ್ಕನಸಾಲ್ ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದು. ಬಹಳ ವರ್ಷದಿಂದ ಕುಂದಾಪುರದ ಮುಖ್ಯ ರಸ್ತೆಯಲ್ಲಿರುವ ಪನ್ನಿರ್ ಜ್ಯುವೆಲರ್ಸ್ ಎದುರುಗಡೆಯಲ್ಲಿ ಮೆಡಿಕಲ್ ಶಾಪ್ ನಡೆಸುತಿದ್ದರು.


