ಕುಂದಾಪುರ; ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ ಒಂದು ದಿನದ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ರಾದ ಡಾ. ಪದ್ಮಚರಣ ಸ್ವೈನ್ ರವರು ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಉಪ ಪ್ರಾಂಶುಪಾಲರಾದ ಪ್ರೊ. ಸೌಜನ್ಯ, ಆಡಳಿತಾಧಿಕಾರಿಯಾದ […]
ಮಂಗಳೂರು, ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯಲ್ಲಿ ಜೂನ್ 17, 2025 ರಂದು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿ.ಸಿ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಸಿ ಹಾಶಿರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಈದ್-ಉಲ್-ಅಧಾ ದೇವರಲ್ಲಿ ನಂಬಿಕೆಯುಳ್ಳವರು ಹೊಂದಿರುವ ಆಳವಾದ ಪ್ರೀತಿ ಮತ್ತು ನಂಬಿಕೆಯನ್ನು ಸಂಕೇತಿಸುತ್ತದೆ , ಸೃಷ್ಟಿಕರ್ತನೊಬ್ಬನೇ, ನಾವೆಲ್ಲಾ ಅವನ ಮಕ್ಕಳು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಖ್ಯಾತ […]
ಉಡುಪಿ ; ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯಾದ ಜೂನ್ 16 ರಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕಾರ್ಮಿಕರ ಆಯೋಗದಿಂದ ” ಗೃಹ ಕಾರ್ಮಿಕರ ದಿನಾಚರಣೆ” ಯನ್ನು ಉಡುಪಿ ಕಕ್ಕುಂಜೆಯ ಅನುಗೃಹ ಪಾಲನಾ ಕೇಂದ್ರದಲ್ಲಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ಅತಿ. ವಂದನೀಯ. ಮೊನ್ಸಿಂಜೊರ್. ಫರ್ಡಿನಾಂಡ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದಂತಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಯಾಗಿರುವಂತಹ ಶ್ರೀ ಕಮಲ್ ಶಾ ಅಲ್ತಾಫ್ ಅಹ್ಮದ್ ರವರು ಭಾಗವಹಿಸಿ, ತಮ್ಮ ಸಂದೇಶದಲ್ಲಿ ” […]
ಮಂಗಳೂರು, ಜೂನ್ 15, 2025 – ಆಲ್ ಬ್ಯಾಂಕ್ಸ್ ಕ್ರಿಶ್ಚಿಯನ್ ಎಂಪ್ಲೊಯೀಸ್ ಎಸೋಸಿಯೇಷನ್ (ರಿ), ಮಂಗಳೂರು (ಎಬಿಸಿಇಎ), ಮಂಗಳೂರಿನ ಡಾನ್ ಬಾಸ್ಕೋ ಹಾಲ್ನಲ್ಲಿ ಸಂಸ್ಥಾಪಕರ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು. ಎಬಿಸಿಇಎ ಅಧ್ಯಕ್ಷರಾದ ಶ್ರೀ ಮಾರ್ಸೆಲ್ ಎಂ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ರೆಜಿಸ್ಟ್ರಾರ್ ಶ್ರೀ ಅಲ್ವಿನ್ ಡೆಸಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿವಂಗತ ಡಿ.ಜೆ. ಪತ್ರಾವೊ, ದಿವಂಗತ ಎಡ್ವರ್ಡ್ ಇ ಫೆರಾವೊ ಮತ್ತು ದಿವಂಗತ ವಿನ್ಸೆಂಟ್ ಎಲ್ ಡಿಸೋಜಾ […]
ಕುಂದಾಪುರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ನೆರೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ರವಿವಾರದಂದು ಹಗಲು ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಕುಬ್ಬಾ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮ ನದಿ ನೀರು ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಲಾವೃತಗೊಂಡಿದೆ, ತಾಲೂಕುಗಳಲ್ಲಿ ಹಲವು ಮರಗಳು ಉರುಳಿವೆ, ಮನೆಗಳಿಗೆ ಹಾನಿಯಾಗಿದೆ. ಭಾರೀ ಮಳೆಯ ಪರಿಣಾಮ ನದಿ ಉಕ್ಕಿ ಹರಿದು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ನೀರು […]
ಉದ್ಯಾವರ : “ಸಮಾಜದಲ್ಲಿ ಬದಲಾವಣೆ ಪ್ರಾಕೃತಿಕ ನಿಯಮ. ಸಾಹಿತ್ಯದಿಂದ ಸಾಕಷ್ಟು ಸಮಾಜಿಕ ಚಳವಳಿಗಳು ರೂಪುಗೊಂಡು, ಕವಿ ಮತ್ತು ಸಾಹಿತಿಗಳು ಸಾಮಾಜಿಕ ಬದಲಾವಣೆಗೆ ಕಾರಣೀಭೂತರಾಗಿದ್ದಾರೆ. ತಮ್ಮ ಬಗ್ಗೆಯೇ ಯೋಚಿಸಲು ಸಮಯವಿಲ್ಲದ ಇಂದಿನ ಒಂದು ನಿಮಿಷದ ರೀಲ್ ಕಾಲದಲ್ಲಿ, ಸಾಹಿತಿ, ಕವಿಗಳು ಸಮಾಜದ ಬಗ್ಗೆ ಯೋಚಿಸಿ, ಕವಿತೆ – ಲೇಖನಗಳ ಮೂಲಕ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಳಕಳಿ ಶ್ಲಾಘನೀಯ” ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಗುರು ವಂ| ಅನಿಲ್ ಡಿ ಸೊಜಾ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಾಹಿತ್ಯ […]
ದಿನಾಂಕ 15/06/2025 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನ ಕುಟುಂಬ ಆಯೋಗದ ನೇತೃತ್ವದಲ್ಲಿ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು. ಅಪ್ಪಂದಿರಿಗಾಗಿ ವಿಶೇಷ ಬಲಿಪೂಜೆಯನ್ನು, ಕಟ್ಕೆರೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ. ಜೊಸಿ. ಸಿದ್ದಕಟ್ಟೆ ಇವರು ಪ್ರಧಾನ ಗುರುಗಳಾಗಿ ಆಗಮಿಸಿ ಬಲಿಪೂಜೆ ನೆರವೇರಿಸಿದರು.ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೈ.ಸಿ.ಎಸ್. ಸಂಘದ ಸದಸ್ಯರು, ಅಪ್ಪಂದಿರಿಗೆ ಶಾಲು ಹೊದೆಸಿ ಗೌರವಪೂರ್ವಕವಾಗಿ ಸಭಾಂಗಣಕ್ಕೆ ಬರಮಾಡಿಕೊಂಡರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾದ ವಂದನೀಯ ಫಾ. ಜೊಸ್ಸಿ ಸಿದ್ದಕಟ್ಟೆ ಗುರುಗಳು ಮಾತನಾಡಿ, ನಮ್ಮ ಜೀವನದಲ್ಲಿ ತಂದೆ, ತಾಯಿ […]
ಕುಂದಾಪುರ, ಜೂ.16; ಸಂತ ಪಿಯುಸ್ ಹತ್ತನೇ ಚರ್ಚ್ ಹಂಗ್ಳೂರಿನಲ್ಲಿ ದಿನಾಂಕ 15ರ ರವಿವಾರದಂದು ದಿವ್ಯ ಬಲಿ ಪೂಜೆಯೊಂದಿಗೆ ಅಪ್ಪಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು ನಾಲ್ಕು ಮಂದಿ ಧರ್ಮಗುರುಗಳು ಬಲಿಪೂಜೆಯನ್ನು ಅರ್ಪಿಸಿದರು. ಕಟ್ಕೆರೆಯ ಕಾರ್ಮೆಲ್ ಆಶ್ರಮದ ವಂ. ಗುರು ಜೊ.ಸಿ. ಸಿದ್ದಕಟ್ಟೆ ಪ್ರವಚನ ನೀಡಿದರು.ಬಲಿಪೂಜೆಯ ನಂತರ ಅಪ್ಪಂದಿರಿಗೆ ಶುಭಾಶಯ ಕೋರುವ ಕಾರ್ಯಕ್ರಮವು ಧರ್ಮಕೇಂದ್ರದ ವಂ. ಗುರು ಆಲ್ಬರ್ಟ್ ಕ್ರಾಸ್ತಾ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ವಂ. ಗುರು ಜೊ.ಸಿ. ಸಿದ್ದಕಟ್ಟೆ ಇವರು ಉಪಸ್ಥಿತರಿದ್ದರು. ಇವರೊಂದಿಗೆ ವೇದಿಕೆಯಲ್ಲಿ ಪಾಲನಾ […]
ಉದ್ಯಾವರ : ಕರಾವಳಿಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮಣ್ಣು ಕುಸಿತ, ಗುಡ್ಡ ಕುಸಿತ, ಧರೆ ಕುಸಿತ ತೋಡು ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಅಲ್ಲಲ್ಲಿ ಅನಾಹುತಗಳು ನಡೆಯತ್ತಲೇ ಇವೆ. ಮಳೆಯ ಕಾರಣ ಹಲವರ ಪ್ರಾಣಕ್ಕೆ ಕುತ್ತಾಗಿದೆ. ಕರ್ನಾಟಕ ರಾಜ್ಯದಲ್ಲಿ ವವಿಪರೀತ ಮಳೆಯಿಂದಾಗಿ ಸುಮಾರು ೨೭ ಜನರ ಪ್ರಾಣ ಕಳೆದುಕೊಂಡಿದ್ದಾರೆ. ತೋಡಿಗೆ ಬಿದ್ದು ವ್ಯಕ್ತಿ ಸಾವು ಉಡುಪಿ ಜಿಲ್ಲೆಯಲ್ಲಿಯೂ ಒಂದು ಸಾವಾಗಿದೆ. ಜೂನ್ 15 ರಂದು ಉದ್ಯಾವರ ಕೇದಾರ್ ನಿವಾಸಿಯೊಬ್ಬರು, ಕೆಲಸ ಮುಗಿಸಿ […]

