

ಕುಂದಾಪುರ, ಜು.20: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 19 (2025) ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.
ಹಬ್ಬದ ಈ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಅ|ವಂ|ಚಾನ್ಸಲರ್ ಸ್ಟೀಫನ್ ಡಿಸೋಜಾ ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಮೇರಿ ಮಾತೆ ಎಲ್ಲೆಲ್ಲಿ ಪ್ರತ್ಯಕ್ಷಗೊಂಡೊಳೊ ಅಲ್ಲಿಯ ಹೆಸರಿನಲ್ಲಿ ಮೇರಿ ಮಾತೆಯನ್ನು ಕರೆಯುತ್ತೇವೆ, ಹಾಗೆ ಮೇರಿ ಮತ್ತು ಕಾರ್ಲೆಲ್ ಗುಡ್ಡಕ್ಕೆ ಸಂಬಂಧ ಇದೆ, ಹಿಂದೆ ಇಸ್ರೇಲ್ ನಲ್ಲಿ ಮೂರು ವರ್ಷ ಮಳೆ ಬರದಿದ್ದಾಗ ಎಲಿಯಾ ಪ್ರವಾದಿಯು ಕಾರ್ಮೆಲ್ ಗುಡ್ಡ ಏರಿ ಪ್ರಾಥಿಸುತ್ತಾನೆ, ಅವಾಗ ಭೊರ್ಗೆರುವ ಮಳೆ ಬರುತ್ತೆ, 13 ನೇ ಶತಮಾನದಲ್ಲಿ ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಸಂಕಷ್ಟ ಎದುರಾಯಿತು, ಅವಾಗ ಸೈಮನ್ ಸ್ಟಾಕ್, ಕಾರ್ಮೆಲ್ ಮಾತೆಯಲ್ಲಿ ಪ್ರಾಥಿಸುತ್ತಾನೆ, ಆವಾಗ ಕಾರ್ಮೆಲ್ ಮಾತೆ ಪ್ರತ್ಯಕ್ಷವಾಗಿ, ನಾನು ಕೊಡುವ ಪೊಷಾಕುಗಳನ್ನು ಧರಿಸಿ ಎಂದು ರಕ್ಷಣೆಯ ಕವಚದಂತ ಪೋಷಾಕುಗಳನ್ನು ನೀಡುತ್ತಾಳೆ, ಇದನ್ನು ಧರಿಸುವ ತನಕ ನಿಮಗೆ ರಕ್ಷಣೆ ಇರುತ್ತದೆ ಎಂದು ಹೇಳುತ್ತಾಳೆ, ಅಂದಿನಿಂದ ಇಂದಿನ ತನಕ ಕಾರ್ಮೆಲ್ ಪಂಗಡದ ಧರ್ಮಗುರುಗಳ ಮತ್ತು ಧರ್ಮಭಗಿನಿಯರ ಮೇಳವು ಸುರಕ್ಷಿತವಿದೆ, ಇಂದು ಆ ಪೋಷಾಕನ್ನು ಸಣ್ಣ ರೂಪದಲ್ಲಿ ಎಲ್ಲ ಭಕ್ತರು ಧರಿಸುತಿದ್ದಾರೆ’ ಎಂದು ತಿಳಿಸುತ್ತಾ ‘ಮೇರಿ ಮಾತೆ ನಮ್ಮನ್ನು ಸಂಕಷ್ಟಕ್ಕೆ ಒಳಗಾದಾಗ ರಕ್ಷಣೆ ನೀಡುತ್ತಾಳೆ, ಅವಳು ದೇವರ ಸೇವಕಿಯಾಗಿದ್ದಳು, ಅವಳು ದೇವಪುತ್ರನಿಗೆ ತನ್ನ ಗರ್ಭದಲ್ಲಿ ಜನಿಸಿಸುವ ಭಾಗ್ಯ ದೊರಕಿದ ಭಾಗ್ಯವಂತೆ, ಯೇಸು ಕ್ರಿಸ್ತರು ಮಾನವನಿಗೆ ಪಾಪದಿಂದ ವಿಮೋಚನೆ ಮಾಡಲು, ತನ್ನ ಬಲಿಯನ್ನು ಅರ್ಪಿಸಿಕೊಳ್ಳುವ ಯೋಜನೆಯಲ್ಲಿ ಅವಳು ಜೀವನವೀಡಿ ಯೇಸು ಕ್ರಿಸ್ತರಿಗೆ ಸಹಕರಿಸಿದಳು, ಅವಳು ಇತರರ ಸೇವೆ, ಸಹಾಯ ಮಾಡಿದಳು, ನಾವು ಕೂಡ ಅವರಂತೆ ಇತರರ ಸೇವೆ, ಸಹಾಯ ಮಾಡೋಣ, ಹಾಗೇ ನಮ್ಮ ಮೇರಿ ಮಾತೆಯ ಮೇಲೆ ಅಚಲ ಭರವಸೆ ಇಟ್ಟು ಕೊಳ್ಳೋಣ, “ಮೇರಿ ಮಾತೆ ನಮಗೆ ಭರವಸೆಯ ತಾರೆಯಾಗಿದೆ” ಇದು ಇಂದಿನ ಹಬ್ಬದ ಸಂದೇಶವಾಗಿದೆ ಅದರಂತೆ ನಾವು ನೆಡೆದು ಕೊಳ್ಳೋಣ” ಎಂದು ತಿಳಿಸಿದರು.
ಕುಂದಾಪುರ ವಲಯ ಪ್ರಧಾನರಾದ ಅ|ವಂ|ಪಾವ್ಲ್ ರೇಗೊ ಹಬ್ಬದ ಶುಭಾಶಯಗಳನ್ನು ನೀಡಿದರು. ಕುಂದಾಪುರ ವಲಯದ ಎಲ್ಲಾ ಇಗರ್ಜಿಗಳ ಎಲ್ಲಾ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಮೇಳದ ಧರ್ಮಗುರುಗಳು, ಇತರ ಕಡೆಗಳಿಂದ ಬಂದತಹ ಕಾರ್ಮೆಲ್ ಮೇಳದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಕಾರ್ಮೆಲ್ ಧರ್ಮಗುರುಗಳಾದ ವಂ। ಜೋಸೆಪ್ ಸಿರಿಲ್ ಡಿಸೋಜಾ, ವಂ।ಪ್ರೀತೆಶ್ ಕ್ರಾಸ್ತಾ ಸಹಕರಿಸಿದರು.
ಕಾರ್ಮೆಲ್ ಮಾತೆಯ ಪೋಷಾಕು (ಬೆಂತಿಣ್) ಇವಗಳನ್ನು ಆಶಿರ್ವದಿಸಿ ಭಕ್ತರಿಗೆ ನೀಡಲಾಯಿತು. ನೂತವಾಗಿ ಆಯ್ಕೆಯಾದ ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಅ|ವಂ| ಸ್ಟೀಫನ್ ಡಿಸೋಜಾ ಮತ್ತು ಉಡುಪಿ ಧರ್ಮಪ್ರಾಂತ್ಯದ ಎಪಿಸ್ಕೊಪಲ್ ವಿಕಾರ್ ಆಗಿ ಆಯ್ಕೆಯಾದ ಅ|ವಂ| ಜೋ ತಾವ್ರೊ ಇವರಿರಿಗೆ ಸನ್ಮಾನಿಸಲಾಯಿತು.
ಕೊಟೇಶ್ವರ ಇಗರ್ಜಿ ಮತ್ತು ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಟ್ಕೆರೆ ಬಾಲ ಯೇಸುವಿನ ಗಾಯನ ಪಂಗಡ ದಿವ್ಯ ಬಲಿಪೂಜೆಗೆ ಭಕ್ತಿ ಗೀತೆ ಹಾಡಿ ಸಹಕರಿಸಿತು. ಈ ಕಾರ್ಮೆಲ್ ಮಾತೆಯ ಹಬ್ಬಕ್ಕೆ ಅನೇಕ ಧರ್ಮಭಗಿನಿಯಯರು, ಧರ್ಮಗುರುಳಾಗಲು ತರಬೇತಿ ಪಡೆಯುವ ಕಾರ್ಮೆಲ್ ಸಹೋದರರು ಹಾಗೂ ಕುಂದಾಪುರ ವಲಯ ಹಾಗೂ ಇತರ ಕಡೆಯಿಂದ ಭಕ್ತಾಧಿಗಳು ಈ ಹಬ್ಬದಲ್ಲಿ ಪಾಲ್ಗೊಂಡರು.































































































